ಚೆನ್ನೈ:ಸೆಪ್ಟೆಂಬರ್ 19ರಿಂದ 14ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ನ ಉಳಿದ ಪಂದ್ಯಗಳ ಆರಂಭಗೊಳ್ಳಲಿದ್ದು, ಮೊದಲ ಪಂದ್ಯದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಸೆಣಸಾಟ ನಡೆಸಲಿವೆ. ಟೂರ್ನಿಯಲ್ಲಿ ಭಾಗಿಯಾಗುವ ಉದ್ದೇಶದಿಂದ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಸಿಎಸ್ಕೆ ಇಂದು ಯುಎಇಗೆ ಪ್ರಯಾಣ ಬೆಳೆಸಿತು.
ಚೆನ್ನೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಭಾರತೀಯ ಆಟಗಾರರು(ಚೆನ್ನೈ ತಂಡ) ಪ್ರಯಾಣ ಕೈಗೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಸಿಎಸ್ಕೆ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದೆ. ತಂಡದ ಸುರೇಶ್ ರೈನಾ, ಅಂಬಾಟಿ ರಾಯುಡು, ರಾಬಿನ್ ಉತ್ತಪ್ಪ, ಋತುರಾಜ್ ಗಾಯ್ಕವಾಡ, ದೀಪಕ್ ಚಹರ್, ಕರಣ್ ಶರ್ಮಾ ಹಾಗೂ ಕೆಎಂ ಆಸೀಫ್ ಚೆನ್ನೈ ಏರ್ಪೋರ್ಟ್ನಿಂದ ದುಬೈಗೆ ಪ್ರಯಾಣಿಸಿದ್ದು, ಅವರ ಫೋಟೋಗಳನ್ನ ಸಿಎಸ್ಕೆ ಟ್ವಿಟ್ ಮಾಡಿದೆ. ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ ಬಳಿಕ ಧೋನಿ ಹಾಗೂ ರೈನಾ ಐಪಿಎಲ್ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ.