ಚೆನ್ನೈ: ಬೌಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಾಜಿ ಅವರಿಗೆ ಕೋವಿಡ್ 19 ದೃಢಪಟ್ಟ ನಂತರ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್ ಮೈಕಲ್ ಹಸ್ಸಿಗೂ ವೈರಸ್ ತಗುಲಿದೆ ಎಂದು ತಿಳಿದುಬಂದಿದೆ.
ಸೋಮವಾರ ಮೊದಲ ಕೋವಿಡ್ 19 ವರದಿಯಲ್ಲಿ ಸಿಇಒ ಕಾಶಿ ವಿಶ್ವನಾಥ್, ಬೌಲಿಂಗ್ ಕೋಚ್ ಬಾಲಾಜಿ ಮತ್ತು ಬಸ್ ಡ್ರೈವರ್ಗೆ ಪಾಸಿಟಿವ್ ವರದಿ ಬಂದಿತ್ತು. ಆದರೆ ಎರಡನೇ ಟೆಸ್ಟ್ನಲ್ಲಿ ಬಾಲಾಜಿ ಮತ್ತು ಬಸ್ ಡ್ರೈವರ್ಗೆ ಪಾಸಿಟಿವ್ ದೃಢಪಟ್ಟಿತ್ತು. ಕಾಶಿ ವಿಶ್ವನಾಥ್ಗೆ ನೆಗೆಟಿವ್ ವರದಿ ಬಂದಿತ್ತು.
ಇದೀಗ ಮೈಕಲ್ ಹಸ್ಸಿಗೂ ಪಾಸಿಟಿವ್ ಬಂದಿದ್ದು, ಮತ್ತೆ ಅದೇ ಮಾದರಿಯನ್ನು ಮರುಪರೀಕ್ಷೆಗೆ ಕಳುಹಿಸಲಾಗಿದೆ. ಎರಡನೇ ಪರೀಕ್ಷೆಯಲ್ಲಿ ಕಾಶಿ ವಿಶ್ವನಾಥ್ ರೀತಿ ಹಸ್ಸಿ ಕೂಡ ನೆಗೆಟಿವ್ ಪಡೆಯಲಿದ್ದಾರೆ ಎಂದು ಸಿಎಸ್ಕೆ ಮೂಲ ವಿಶ್ವಾಸ ವ್ಯಕ್ತಪಡಿಸಿದೆ.
ಕೆಕೆಆರ್ ತಂಡದ ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್ ಬಯೋಬಬಲ್ನಲ್ಲಿ ಪಾಸಿಟಿವ್ ವರದಿ ಪಡೆದಿದ್ದರು. ನಂತರ ಮಂಗಳವಾರ ಡೆಲ್ಲಿ ತಂಡದ ಮಿಶ್ರಾ ಹಾಗೂ ಹೈದರಾಬಾದ್ ತಂಡದ ವೃದ್ಧಿಮಾನ್ ಸಹಾಗೆ ಪಾಸಿಟಿವ್ ಬರುತ್ತಿದ್ದಂತೆ ಟೂರ್ನಿಯನ್ನು ಬಿಸಿಸಿಐ ರದ್ದುಗೊಳಿಸಿತ್ತು.
ಇದನ್ನು ಓದಿ:ಐಪಿಎಲ್ ರದ್ದು: ಬಿಸಿಸಿಐಗಾಗುವ ನಷ್ಟ ಎಷ್ಟು ಸಾವಿರ ಕೋಟಿ ಗೊತ್ತಾ?