ಕರ್ನಾಟಕ

karnataka

ETV Bharat / sports

ವೆಂಕಟೇಶ್​, ತ್ರಿಪಾಠಿ ಸಿಡಿಲಬ್ಬರದ ಬ್ಯಾಟಿಂಗ್​... ಮುಂಬೈ ವಿರುದ್ಧ ಕೆಕೆಆರ್​ಗೆ ಭರ್ಜರಿ ಜಯ​ - kkr win

ಕೆಕೆಆರ್ ಮುಂಬೈ ಇಂಡಿಯನ್ಸ್​ ವಿರುದ್ಧ ಜಯಗಳಿಸಿದ್ದು, ವೆಂಕಟೇಶ್​ ಅಯ್ಯರ್ ಹಾಗೂ ರಾಹುಲ್​ ತ್ರಿಪಾಠಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.

ipl 2021: kkr won by 7 wickets against Mumbai Indians
ವೆಂಕಟೇಶ್​, ತ್ರಿಪಾಠಿ ಸಿಡಿಲಬ್ಬರದ ಬ್ಯಾಟಿಂಗ್​... ಮುಂಬೈ ವಿರುದ್ಧ ಕೆಕೆಆರ್​ಗೆ ಭರ್ಜರಿ ಜಯ​

By

Published : Sep 23, 2021, 11:36 PM IST

Updated : Sep 23, 2021, 11:43 PM IST

ಅಬುಧಾಬಿ: ಮುಂಬೈ ಇಂಡಿಯನ್ಸ್​​ ನೀಡಿರುವ 156 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಕೋಲ್ಕತ್ತಾ ನೈಟ್​ ರೈಡರ್ಸ್​​​ ಗೆಲುವು ದಾಖಲಿಸಿದೆ. ಕೇವಲ 15.1 ಓವರ್​ಗಳಲ್ಲಿ 159 ರನ್​ ಗಳಿಸಿ 7 ವಿಕೆಟ್​ಗಳ ಜಯ ಸಾಧಿಸಿದೆ.

ಟಾಸ್​ ಸೋತು ಬ್ಯಾಟಿಂಗ್ ಇಳಿದ ಮುಂಬೈ ಇಂಡಿಯನ್ಸ್ 6 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಲು ಶಕ್ತವಾಯಿತು. ನಾಯಕ ರೋಹಿತ್ ಶರ್ಮಾ 33 , ಕ್ವಿಂಟನ್​ ಡಿಕಾಕ್ 55, ಇಶನ್ ಕಿಶನ್ 14, ಕಿರನ್ ಪೊಲಾರ್ಡ್ 21, ಕೃನಾಲ್ ಪಾಂಡ್ಯ 12, ಸೂರ್ಯ ಕುಮಾರ್ ಯಾದವ್ 5, ಸೌರಭ್ ತಿವಾರಿ 5 ರನ್​ ಗಳಿಸಿದ್ದರು.

ಇನ್ನು ಬೌಲಿಂಗ್ ವಿಭಾಗದಲ್ಲಿ ಜಸ್​​ಪ್ರೀತ್ ಬೂಮ್ರಾ ಮೂರು ವಿಕೆಟ್ ಪಡೆದದ್ದು ಬಿಟ್ಟರೆ, ಇನ್ನುಳಿದ ಯಾರಿಂದಲೂ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.

ಮುಂಬೈ ನೀಡಿದ್ದ 155 ರನ್ ಬೆನ್ನತ್ತಿದ ಕೋಲ್ಕತ್ತಾ ನೈಟ್ ರೈಡರ್ಸ್​ ಕೇವಲ 15.1 ಓವರ್​ನಲ್ಲಿ 3 ವಿಕೆಟ್ ನಷ್ಟಕ್ಕೆ 29 ಎಸೆತಗಳು ಬಾಕಿ ಇರುವಂತೆ ಗೆಲುವು ತನ್ನದಾಗಿಸಿಕೊಂಡಿದೆ. ವೆಂಕಟೇಶ್ ಅಯ್ಯರ್ 53, ರಾಹುಲ್ ತ್ರಿಪಾಠಿ 74 ರನ್​ಗಳ ಭರ್ಜರಿ ಬ್ಯಾಟಿಂಗ್ ಆಡಿದ್ದಾರೆ. ಅದರ ಜೊತೆಗೆ ಶುಭ್ಮನ್ ಗಿಲ್ 13, ಇಯಾನ್ ಮಾರ್ಗನ್ 7 ಮತ್ತು ನಿತೀಶ್ ರಾಣಾ 5 ರನ್ ಗಳಿಸಿದ್ದಾರೆ.

ಇನ್ನು ಕೋಲ್ಕತ್ತಾ ನೈಟ್ ರೈಡರ್ಸ್​ ಬೌಲಿಂಗ್ ವಿಚಾರಕ್ಕೆ ಬರುವುದಾದರೆ ಲೊಕಿ ಫರ್ಗುಸನ್ ಮತ್ತು ಪ್ರಸಿದ್ಧ್ ಕೃಷ್ಣ ತಲಾ ಎರಡು ವಿಕೆಟ್ ಪಡೆದಿದ್ದಾರೆ. ಸುನೀಲ್ ನರೈನ್​ಗೆ ಒಂದು ವಿಕೆಟ್ ಸಿಕ್ಕಿದೆ. ಕಿರನ್ ಪೊಲ್ಲಾರ್ಡ್ ರನ್ ಔಟ್ ಆಗಿದ್ದಾರೆ.

ಇದನ್ನು ಓದಿ:ರೋಹಿತ್​ ಶರ್ಮಾ ಐಪಿಎಲ್​ ಇತಿಹಾಸದಲ್ಲಿ ಈ ದಾಖಲೆ ಮಾಡಿದ ಮೊದಲ ಬ್ಯಾಟರ್​

Last Updated : Sep 23, 2021, 11:43 PM IST

ABOUT THE AUTHOR

...view details