ಶಾರ್ಜಾ: ಕೋಲ್ಕತ್ತಾ ನೈಟ್ ರೈಡರ್ಸ್ ಬೌಲಿಂಗ್ ದಾಳಿಗೆ ತತ್ತರಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 127 ರನ್ಗಳಿಸಲಷ್ಟೇ ಶಕ್ತವಾಗಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದಿದ್ದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಿಂದಲೂ ರನ್ಗಳಿಸಲು ಪರದಾಟ ನಡೆಸಿತಲ್ಲದೆ, ನಿರಂತರ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತ್ತು. ಸ್ಟೀವ್ ಸ್ಮಿತ್ 34 ಎಸೆತಗಳಲ್ಲಿ 39 ಮತ್ತು ರಿಷಭ್ ಪಂತ್ 36 ಎಸೆತಗಳಲ್ಲಿ 39 ರನ್ಗಳಿಸಿ ತಂಡದ ಮೊತ್ತವನ್ನು 100ರ ಗಡಿದಾಟಿಸಲು ನೆರವಾದರು.
ಕೆಕೆಆರ್ ಬೌಲಿಂಗ್ ದಾಳಿಯ ಮುಂದೆ ನಿಲ್ಲಲಾಗದೆ ಶಿಖರ್ ಧವನ್ 24, ಅಶ್ವಿನ್ 9 ಶ್ರೇಯಸ್ ಅಯ್ಯರ್ 1, ಶಿಮ್ರಾನ್ ಹೆಟ್ಮಾಯರ್ 4, ಲಲಿತ್ ಯಾದವ್ ಮತ್ತು ಅಕ್ಷರ್ ಪಟೇಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಇನ್ನು ಸ್ಮಿತ್ ಮತ್ತು ಪಂತ್ ಕೂಡ ನಿಧಾನಗತಿ ಆಟಕ್ಕೆ ಮೊರೆ ಹೋಗಿದ್ದರಿಂದ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ಡೆಲ್ಲಿ ತಂಡ ವಿಫಲವಾಯಿತು.
ಕೆಆರ್ ಪರ ಸುನೀಲ್ ನರೈನ್ 18ಕ್ಕೆ 2, ವೆಂಕಟೇಶ್ ಅಯ್ಯರ್ 29ಕ್ಕೆ2, ಲಾಕಿ ಫರ್ಗುಸನ್ 10ಕ್ಕೆ2 ಮತ್ತು ಟಿಮ್ ಸೌಥಿ 29ಕ್ಕೆ1 ರನ್ ನೀಡಿದ ವಿಕೆಟ್ ಪಡೆದರು.