ಕರ್ನಾಟಕ

karnataka

By

Published : Apr 26, 2021, 4:34 PM IST

ETV Bharat / sports

ಹೋಗುವವರೆಲ್ಲ ಹೋಗಲಿ, ಆದ್ರೆ ಐಪಿಎಲ್ ವೇಳಾಪಟ್ಟಿಯಂತೆ ಮುಂದುವರಿಯಲಿದೆ: ಬಿಸಿಸಿಐ

34 ವರ್ಷದ ಅಶ್ವಿನ್ ತಮ್ಮ ಕುಟಂಬಸ್ಥರು ಕೋವಿಡ್​ 19 ಸೋಂಕಿಗೆ ತುತ್ತಾಗಿರುವುದರಿಂದ, ತಾವೂ ಈ ಸಂದರ್ಭದಲ್ಲಿ ಅವರಿಗೆ ಬೆಂಬಲವಾಗಿ ನಿಲ್ಲಬೇಕೆಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಹೊರಬಂದಿದ್ದಾರೆ. ಮತ್ತೆ ಪರಿಸ್ಥಿತಿ ಸರಿಯಾದರೆ ತಾವೂ ತಂಡಕ್ಕೆ ಮರಳುವುದಾಗಿ ತಿಳಿಸಿದ್ದಾರೆ.

ಐಪಿಎಲ್ ವೇಳಾಪಟ್ಟಿಯಂತೆ ಮುಂದುವರಿಯಲಿದೆ
ಐಪಿಎಲ್ ವೇಳಾಪಟ್ಟಿಯಂತೆ ಮುಂದುವರಿಯಲಿದೆ

ಮುಂಬೈ: ಭಾರತದ ಉಲ್ಬಣಗೊಳ್ಳುತ್ತಿರುವ ಕೋವಿಡ್ 19 ಬಿಕ್ಕಟ್ಟಿನ ಮಧ್ಯೆ ಭಾರತದ ಪ್ರಮುಖ ಆಫ್-ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ಕೆಲವು ಆಸ್ಟ್ರೇಲಿಯಾದ ಆಟಗಾರರು ಶ್ರೀಮಂತ ಲೀಗ್‌ನಿಂದ ಹಿಂದೆ ಸರಿದಿದ್ದಾರೆ. ಆದರೆ, ಬಿಸಿಸಿಐ ಐಪಿಎಲ್​ ವೇಳಾಪಟ್ಟಿಯಂತೆ ನಡೆದೇ ತೀರುತ್ತದೆ ಎಂದಿದ್ದಾರೆ.

34 ವರ್ಷದ ಅಶ್ವಿನ್ ತಮ್ಮ ಕುಟಂಬಸ್ಥರು ಕೋವಿಡ್​ 19 ಸೋಂಕಿಗೆ ತುತ್ತಾಗಿರುವುದರಿಂದ, ತಾವೂ ಈ ಸಂದರ್ಭದಲ್ಲಿ ಅವರಿಗೆ ಬೆಂಬಲವಾಗಿ ನಿಲ್ಲಬೇಕೆಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಹೊರಬಂದಿದ್ದಾರೆ. ಮತ್ತೆ ಪರಿಸ್ಥಿತಿ ಸರಿಯಾದರೆ ತಾವೂ ತಂಡಕ್ಕೆ ಮರಳುವುದಾಗಿ ತಿಳಿಸಿದ್ದಾರೆ.

ಇನ್ನು ಅಶ್ವಿನ್ ಅಲ್ಲದೇ ರಾಜಸ್ಥಾನ್​ ರಾಯಲ್ಸ್ ತಂಡದಲ್ಲಿದ್ದ ಆ್ಯಂಡ್ರ್ಯೂ ಟೈ, ಆರ್​ಸಿಬಿ ತಂಡದಲ್ಲಿದ್ದ ಆ್ಯಡಂ ಜಂಪಾ ಮತ್ತು ಕೇನ್ ರಿಚರ್ಡ್ಸನ್​ ಕೂಡ ತಂಡದಿಂದ ಹೊರಬಂದಿದ್ದಾರೆ. ಜಂಪಾ ಮತ್ತು ಕೇನ್, ಆದರೆ ವೈಯಕ್ತಿಕ ಕಾರಣ ಎಂದಷ್ಟೇ ಹೇಳಿದ್ದಾರೆ. ಟೈ ಭಾರತದಲ್ಲಿ ಕೊರೊನಾ ಅಬ್ಬರ ಹೆಚ್ಚಾಗಿರುವುದರಿಂದ ಆಸ್ಟ್ರೇಲಿಯಾ ಭಾರತದಿಂದ ಬರುವವರನ್ನು ನಿಷೇಧಿಸುವ ಭಯದಿಂದ ಹೋಗುತ್ತಿರುವುದಾಗಿ ತಿಳಿಸಿದ್ದಾರೆ.

ಬಿಸಿಸಿಐ ಅಧಿಕಾರಿಗಳು ಲೀಗ್​ ಮುಂದುವರಿಯುತ್ತದೆ. ಆದರೆ, ಬಿಟ್ಟು ಹೋಗುವವರು ಹೋಗಬಹುದು, ಅದು ವೈಯಕ್ತಿಕ ನಿರ್ಧಾರ ಎಂದು ತಿಳಿಸಿದ್ದಾರೆ. " ಪ್ರಸ್ತುತ ಐಪಿಎಲ್ ಮುಂದುವರಿಯಲಿದೆ. ಒಂದು ವೇಳೆ ಯಾರಾದರೂ ಲೀಗ್ ಬಿಟ್ಟು ಹೋಗಬೇಕೆಂದರೆ ಹೋಗಬಹುದು, ಅದರಿಂದ ನಮಗೇನು ಸಮಸ್ಯೆಯಿಲ್ಲ" ಎಂದು ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಲೆಗ್​ ಸ್ಪಿನ್ನರ್​ ಜಂಪಾ ಅವರನ್ನು 1.5 ಕೋಟಿ ರೂ ಮತ್ತು ಕೇನ್​ ರಿಚರ್ಡ್ಸನ್​ 4 ಕೋಟಿ ರೂಗಳಿಗೆ ಆರ್​ಸಿಬಿ ಖರೀದಿಸಿತ್ತು. ಟೈ ಅವರನ್ನು ಒಂದು ಕೋಟಿ ರೂಗೆ ರಾಜಸ್ಥಾನ್ ರಾಯಲ್ಸ್ ಖರೀದಿಸಿತ್ತು. ಆದರೆ 34 ವರ್ಷದ ವೇಗಿಗೆ ಒಂದು ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. ಐಪಿಎಲ್ ಮುಗಿದ ನಂತರ ಇಂತಹ ಸ್ಥಿತಿಯಲ್ಲಿದ್ದು, ಮನೆಗೆ ಮರಳುವ ವಿಚಾರದಲ್ಲಿ ಆಸ್ಟ್ರೇಲಿಯನ್ ಕ್ರಿಕೆಟಿಗರು ತುಂಬಾ ಒತ್ತಡಕ್ಕೆ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನು ಓದಿ:ಕುಟುಂಬ ಸದಸ್ಯರಿಗೆ ಕೋವಿಡ್: IPL​ನಿಂದ ಹೊರನಡೆದ ಆರ್‌.ಅಶ್ವಿನ್

ABOUT THE AUTHOR

...view details