ಅಬುಧಾಬಿ: ಮುಂಬೈ ಇಂಡಿಯನ್ಸ್ ನೀಡಿರುವ 156ರನ್ಗಳ ಟಾರ್ಗೆಟ್ ಬೆನ್ನತ್ತಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಗೆಲುವಿನ ಗೆಲುವು ದಾಖಲು ಮಾಡಿದ್ದು, ಕೇವಲ 15.1 ಓವರ್ಗಳಲ್ಲಿ 159ರನ್ಗಳಿಕೆ ಮಾಡಿ 7 ವಿಕೆಟ್ಗಳ ಜಯ ಸಾಧಿಸಿದೆ. ಆರಂಭಿಕರಾಗಿ ಕಣಕ್ಕಿಳಿದಿರುವ ವೆಂಕಟೇಶ್ ಅಯ್ಯರ್(53) ಹಾಗೂ ರಾಹುಲ್ ತ್ರಿಪಾಠಿ ಅಜೇಯ 74ರನ್ಗಳ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಆರಂಭಿಕರಾಗಿ ಕಣಕ್ಕಿಳಿದ ವೆಂಕಟೇಶ್ ಅಯ್ಯರ್ ಕೇವಲ 25 ಎಸೆತಗಳಲ್ಲಿ 3 ಸಿಕ್ಸರ್, 4 ಬೌಂಡರಿ ಸೇರಿದಂತೆ 50ರನ್ಗಳಿಕೆ ಮಾಡಿದ್ದು, ಐಪಿಎಲ್ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದ್ದಾರೆ. ಇವರಿಗೆ ಉತ್ತಮ ಸಾಥ್ ನೀಡಿದ ರಾಹುಲ್ ತ್ರಿಪಾಠಿ ಕೂಡ 42 ಎಸೆತಗಳಲ್ಲಿ 3 ಸಿಕ್ಸರ್, 8 ಬೌಂಡರಿ ಸೇರಿದಂತೆ ಅಜೇಯ 74ರನ್ಗಳಿಕೆ ಮಾಡಿ ಬ್ಯಾಟಿಂಗ್ ತಂಡಕ್ಕೆ ಜಯತಂದಿಟ್ಟರು.
ಕ್ವಿಂಟನ್ ಡಿ ಕಾಕ್ ಅವರ ಅಬ್ಬರದ ಅರ್ಧಶತಕದ ನೆರವಿನಿಂದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರಾಳಿ ಕೆಕೆಆರ್ ತಂಡಕ್ಕೆ 156 ರನ್ಗಳ ಗುರಿ ನೀಡಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಮುಂಬೈ ಇಂಡಿಯನ್ಸ್ ಗೆ ನಾಯಕ ರೋಹಿತ್ ಶರ್ಮಾ(33) ಮತ್ತು ಡಿಕಾಕ್(55) ಅದ್ಭುತ ಆರಂಭ ಒದಗಿಸಿಕೊಟ್ಟರು. ಈ ಅನುಭವಿ ಜೋಡಿ ಮೊದಲ ವಿಕೆಟ್ಗೆ 78 ರನ್ಗಳಿಸಿದರು. ಉತ್ತಮವಾಗಿ ಆಡುತ್ತಿದ್ದ ಈ ಜೋಡಿಯನ್ನು ನರೈನ್ ಬೇರ್ಪಡಿಸಿದರು. ರೋಹಿತ್ ಶರ್ಮಾ 30 ಎಸೆತಗಳಲ್ಲಿ 4 ಬೌಂಡರಿ ಸಹಿತ 33 ರನ್ ಸಿಡಿಸಿ ಔಟಾದರು.