ಮುಂಬೈ:ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪೇಸರ್ ಎನ್ರಿಚ್ ನೋಕಿಯಾಗೆ ಕೋವಿಡ್ 19 ಪರೀಕ್ಷೆಯಲ್ಲಿ ಪಾಸಿಟಿವ್ ಪಡೆದಿದ್ದು, ಮತ್ತೆ ಕ್ವಾರಂಟೈನ್ಗೆ ಒಳಗಾಗಬೇಕಿದೆ.
ಪಾಕಿಸ್ತಾನ ವಿರುದ್ಧದ ಸೀಮಿತ ಓವರ್ಗಳ ಸರಣಿಯನ್ನು ಅರ್ಧದಲ್ಲೇ ಕೈಬಿಟ್ಟು ಐಪಿಎಲ್ಗಾಗಿ ಭಾರತಕ್ಕೆ ಬಂದಿದ್ದ ಹರಿಣಗಳ ವೇಗಿ ಮುಂದಿನ ಪಂದ್ಯದಲ್ಲಿ ಡೆಲ್ಲಿ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದರು. ಅವರು ಭಾರತಕ್ಕೆ ಬಂದಾಗ ನೆಗೆಟಿವ್ ವರದಿ ಪಡೆದಿದ್ದರು, ಆದರೆ, ಇದೀಗ ಪಾಸಿಟಿವ್ ಬಂದಿದೆ ಎಂದು ಡೆಲ್ಲಿ ತಂಡದ ಮೂಲ ತಿಳಿಸಿದೆ.
ಅವರು(ಎನ್ರಿಚ್) ಕೋವಿಡ್ 19 ನೆಗೆಟಿವ್ ವರದಿಯೊಂದಿಗೆ ಬಂದಿದ್ದರು, ಆದರೆ, ದುರದೃಷ್ಟವಶಾತ್ ಕ್ಯಾರೆಂಟೈನ್ ನಲ್ಲಿರುವಾಗಲೇ ಪಾಸಿಟಿವ್ ಪಡೆದದಿದ್ದಾರೆ ಎಂದು ಫ್ರಾಂಚೈಸಿ ಮೂಲಗಳು ತಿಳಿಸಿವೆ.
ಟೂರ್ನಿ ಪ್ರಾರಂಭವಾಗುವ ಮುನ್ನ ಆಲ್ರೌಂಡರ್ ಅಕ್ಷರ್ ಪಟೇಲ್ ಕೂಡ ಕೋವಿಡ್ 19 ಸೋಂಕು ತಗುಲಿತ್ತು. ಇದೀಗ ಕಳೆದ ಬಾರಿಯ ಪ್ರಧಾನ ಬೌಲರ್ಗಳಲ್ಲಿ ಒಬ್ಬರಾಗಿದ್ದ ನೋಕಿಯಾ ಕೂಡ ಕೋವಿಡ್ ದೃಢಪಟ್ಟಿರುವುದು ಡೆಲ್ಲಿ ತಂಡಕ್ಕೆ ಹಿನ್ನಡೆಯಾಗಿದೆ.
ಬಿಸಿಸಿಐ ಮಾರ್ಗಸೂಚಿ ಪ್ರಕಾರ, ಕೋವಿಡ್ 19 ಪರೀಕ್ಷೆಯಲ್ಲಿ ಪಾಸಿಟಿವ್ ಪಡೆದವರು ಬಯೋಬಬಲ್ ಹೊರಗೆ 10 ದಿನಗಳ ಕ್ವಾರಂಟೈನ್ಗೆ ಒಳಗಾಗಬೇಕಿರುತ್ತದೆ. ನಂತರ 2 ಪರೀಕ್ಷೆಗಳಲ್ಲಿ ನೆಗೆಟಿವ್ ಪಡೆದ ಮೇಲೆ ಬಯೋಬಬಲ್ಗೆ ಸೇರಬಹುದಾಗಿದೆ.
ಮೊದಲ ಪಂದ್ಯದಲ್ಲಿ ಸ್ಟಾರ್ ಬೌಲರ್ಗಳ ಅನುಪಸ್ಥಿತಿಯಲ್ಲಿಯೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 7 ವಿಕೆಟ್ಗಳಿಂದ ಮಣಿಸಿದ್ದ ಡೆಲ್ಲಿ ತಂಡದ ತನ್ನ 2ನೇ ಪಂದ್ಯದಲ್ಲಿ ಗುರುವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಲಿದೆ.
ಇದನ್ನು ಓದಿ: ರಾಜಸ್ಥಾನ್ ರಾಯಲ್ಸ್ಗೆ ಮತ್ತೊಂದು ಶಾಕ್: ಸ್ಟೋಕ್ಸ್ ಟೂರ್ನಿಯಿಂದ ಔಟ್