ದುಬೈ: ಸೆಪ್ಟೆಂಬರ್ 19ರಿಂದ ಯುಎಇನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನ ಉಳಿದ ಪಂದ್ಯಗಳು ಆರಂಭಗೊಳ್ಳಲಿವೆ. ಟೂರ್ನಿ ಆರಂಭಗೊಳ್ಳಲು ಕೇವಲ 9 ದಿನಗಳು ಮಾತ್ರ ಬಾಕಿ ಉಳಿದಿವೆ.
ಇದರ ಮಧ್ಯೆ ಇಂಗ್ಲೆಂಡ್ನಲ್ಲಿರುವ ಟೀಂ ಇಂಡಿಯಾ ತಂಡದಲ್ಲಿ ಕೊರೊನಾ ಕಾಣಿಸಿಕೊಂಡಿರುವ ಕಾರಣ ಇಂದಿನಿಂದ ಆರಂಭಗೊಳ್ಳಬೇಕಾಗಿದ್ದ ಫೈನಲ್ ಟೆಸ್ಟ್ ಪಂದ್ಯ ರದ್ಧುಗೊಂಡಿದೆ. ಹೊಸ ವೇಳಾಪಟ್ಟಿ ಬಿಡುಗಡೆ ಮಾಡಲು ಬಿಸಿಸಿಐ-ಇಸಿಬಿ ಮಾತುಕತೆ ನಡೆಸುತ್ತಿವೆ. ಇಂದು ಐಪಿಎಲ್ನ ಕೆಲವೊಂದು ಫ್ರಾಂಚೈಸಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಇಂಗ್ಲೆಂಡ್ ಪ್ರವಾಸದಲ್ಲಿರುವ ಅನೇಕ ಪ್ಲೇಯರ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಭಾಗಿಯಾಗಬೇಕಾಗಿರುವ ಕಾರಣ, ಅವರ ಬರುವಿಕೆಗಾಗಿ ಫ್ರಾಂಚೈಸಿಗಳು ಕಾಯುತ್ತಿವೆ. ಒಂದು ವೇಳೆ ಫೈನಲ್ ಟೆಸ್ಟ್ ಪಂದ್ಯ ಮುಂದಿನ ಎರಡು ದಿನಗಳಲ್ಲಿ ಮರುನಿಗದಿಯಾದರೆ, ಅದರಲ್ಲಿ ಭಾಗಿಯಾಗಬೇಕಾದ ಅನಿವಾರ್ಯತೆ ನಿರ್ಮಾಣಗೊಳ್ಳಲಿದೆ. ಈ ಎಲ್ಲ ಪ್ಲೇಯರ್ಸ್ಗಳ ಅನುಪಸ್ಥಿತಿಯಲ್ಲೇ ಕೆಲವೊಂದು ಐಪಿಎಲ್ ಪಂದ್ಯಗಳು ನಡೆಯುವ ಸಾಧ್ಯತೆ ಇದೆ.
ಸಿಎಸ್‌ಕೆ ಸಿಇಒ ಹೇಳಿದ್ದೇನು?
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಶಿ ವಿಶ್ವನಾಥನ್, ಇಂಗ್ಲೆಂಡ್ನಲ್ಲಿರುವ ನಮ್ಮ ತಂಡದ ಪ್ಲೇಯರ್ಸ್ ನಾಳೆ ಪ್ರಯಾಣ ಆರಂಭಿಸುವ ಸಾಧ್ಯತೆ ಇದ್ದು, ಇಲ್ಲಿಗೆ ಬರುತ್ತಿದ್ದಂತೆ ಆರು ದಿನಗಳ ಕಾಲ ಕ್ವಾರಂಟೈನ್ಗೊಳಗಾಗಲಿದ್ದಾರೆ ಎಂದು ತಿಳಿಸಿದೆ.
ಎಎನ್ಐ ಜೊತೆ ಮಾತನಾಡಿರುವ ಕಾಶಿ ವಿಶ್ವನಾಥನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್ ಹಾಗೂ ಚೇತೇಶ್ವರ್ ಪೂಜಾರಾ ಮ್ಯಾಂಚೆಸ್ಟರ್‌ನಿಂದ ನಾಳೆ ಪ್ರಯಾಣ ಆರಂಭಿಸುವ ಸಾಧ್ಯತೆ ಇದ್ದು, ಆರು ದಿನಗಳ ಕಾಲ ಕ್ವಾರಂಟೈನ್ಗೊಳಗಾಗಿ ತದನಂತರ ತಂಡ ಸೇರಿಕೊಳ್ಳಲಿದ್ದಾರೆ ಎಂದಿದ್ದಾರೆ.
ಸೆಪ್ಟೆಂಬರ್ 19ರಂದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡ ಸೆಣಸಾಟ ನಡೆಸಲಿದ್ದು, ಪ್ರಮುಖ ಪ್ಲೇಯರ್ಸ್ ಇಂಗ್ಲೆಂಡ್ನಲ್ಲಿರುವ ಕಾರಣ ಯಾವ ರೀತಿಯಾಗಿ ಐಪಿಎಲ್ ಆರಂಭಗೊಳ್ಳಲಿದೆ ಎಂಬ ಕುತೂಹಲ ಮೂಡಿದೆ.
ಇದನ್ನೂ ಓದಿ: 5ನೇ ಟೆಸ್ಟ್ ಪಂದ್ಯ ರದ್ದು: ಮರು ವೇಳಾಪಟ್ಟಿಗೆ ಇಂಗ್ಲೆಂಡ್ ಜೊತೆ ಬಿಸಿಸಿಐ ಬಿಸಿ ಬಿಸಿ ಚರ್ಚೆ
ಪ್ರಮುಖವಾಗಿ ಆರ್ಸಿಬಿ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಡೆಲ್ಲಿ ಕ್ಯಾಪ್ಟನ್ ರಿಷಭ್ ಪಂತ್ ಸೇರಿದಂತೆ ಪೃಥ್ವಿ ಶಾ, ಮಯಾಂಕ್ ಅಗರ್‌ವಾಲ್, ಜಸ್ಪ್ರೀತ್ ಬುಮ್ರಾ ಸೇರಿದಂತೆ ಪ್ರಮುಖ ಪ್ಲೇಯರ್ಸ್ ಲಂಡನ್ನಲ್ಲಿದ್ದು, ಐಪಿಎಲ್ ಆರಂಭಿಕ ಪಂದ್ಯಗಳು ಯಾವ ರೀತಿಯಾಗಿ ನಡೆಯಲಿವೆ ಎಂಬ ಗೊಂದಲ ಉಂಟಾಗಿದೆ.