ನವದೆಹಲಿ:ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡಿರುವ ಎರಡು ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವು ದಾಖಲು ಮಾಡಿದ್ದು, ಇದೇ ವಿಚಾರವಾಗಿ ತಂಡದ ಸ್ಫೋಟಕ ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್ ಮಾತನಾಡಿದ್ದಾರೆ.
ನಿರಂತರವಾಗಿ ಯಶಸ್ವಿಯಾಗುವುದು ವಿಜೇತ ಸಂಸ್ಕೃತಿ ನಿರ್ಮಿಸಲು ಸಹಾಯವಾಗುತ್ತದೆ ಎಂದಿರುವ ಎಬಿ, ಗೆಲ್ಲುವ ಸಂಸ್ಕೃತಿ ಬೆಳೆಸಲು ಬ್ಯಾಟಿಂಗ್ ಘಟಕದ ಸ್ಥಿರತೆ ಮತ್ತು ಸುಸ್ಥಿರತೆ ಮುಖ್ಯ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಎಬಿಡಿ ಮಾತನಾಡಿರುವ ವಿಡಿಯೋ ಇದೀಗ ಆರ್ಸಿಬಿ ಶೇರ್ ಮಾಡಿಕೊಂಡಿದೆ.
ತಂಡದಲ್ಲಿ ಅನುಭವಿ ಆಟಗಾರರನ್ನ ಹೊಂದಿರುವುದು ಯುವ ಪ್ಲೇಯರ್ಸ್ಗೆ ಸಹಾಯವಾಗಲಿದೆ ಎಂದಿರುವ ಅವರು, ಗೆಲ್ಲುವ ಸಂಸ್ಕೃತಿ ಪ್ರವೇಶಿಸುತ್ತಿದ್ದಂತೆ ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಆಶಾದಾಯಕತೆ ನಮ್ಮಲ್ಲಿ ಉದ್ಭವವಾಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಚೆನ್ನೈ ವರ್ಸಸ್ ಪಂಜಾಬ್: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಧೋನಿ ಪಡೆ!
ಇಂಗ್ಲೆಂಡ್ ಪ್ರವಾಸದ ವೇಳೆ ಕಳಪೆ ಪ್ರದರ್ಶನ ನೀಡುತ್ತಿದ್ದ ವಿರಾಟ್ ಕೊಹ್ಲಿಗೂ ಕೂಡ ಎಬಿಡಿ ವಿಶೇಷ ಟಿಪ್ಸ್ ಹೇಳಿಕೊಟ್ಟಿದ್ದರು. ಹೀಗಾಗಿ ಅವರು ನಂತರದ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ಸಹ ನಿರ್ವಹಿಸಿದ್ದರು. ಮುಂಬೈ ಇಂಡಿಯನ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಎರಡು ಪಂದ್ಯಗಳಲ್ಲಿ ಆರ್ಸಿಬಿ ಗೆಲುವು ದಾಖಲು ಮಾಡಿದೆ.