ಕರ್ನಾಟಕ

karnataka

ETV Bharat / sports

IPL 2021: ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಸಿಎಸ್​ಕೆ - ಡೇವಿಡ್ ವಾರ್ನರ್

ಉಭಯ ತಂಡಗಳು 16 ಬಾರಿ ಮುಖಾಮುಖಿಯಾಗಿವೆ. ಸಿಎಸ್​ಕೆ 12 ಮತ್ತು ಹೈದರಾಬಾದ್​ 4 ರಲ್ಲಿ ಗೆಲುವು ಸಾಧಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್ vs ಸನ್​ರೈಸರ್ಸ್​ ಹೈದರಾಬಾದ್
ಚೆನ್ನೈ ಸೂಪರ್ ಕಿಂಗ್ಸ್ vs ಸನ್​ರೈಸರ್ಸ್​ ಹೈದರಾಬಾದ್

By

Published : Sep 30, 2021, 7:07 PM IST

ಶಾರ್ಜಾ: ಐಪಿಎಲ್​ನ 44ನೇ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ ಟಾಸ್​ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಈಗಾಗಲೆ 16 ಅಂಕಗಳಿಸಿ ಪ್ಲೇ ಆಫ್​ಗೆ ಹತ್ತಿರವಿರುವ ಸಿಎಸ್​ಕೆ ಈ ಪಂದ್ಯವನ್ನು ಗೆದ್ದರೆ, 2021ರ ಆವೃತ್ತಿಯಲ್ಲಿ ಅಧಿಕೃತವಾಗಿ ನಾಕೌಟ್​ ಪ್ರವೇಶಿಸಿದ ಮೊದಲ ತಂಡ ಎನಿಸಿಕೊಳ್ಳಲಿದೆ. ಈ ಪಂದ್ಯದಲ್ಲಿ ಸಿಎಸ್​ಕೆ ಒಂದು ಬದಲಾವಣೆ ಮಾಡಿಕೊಂಡಿದ್ದು, ಬ್ರಾವೋ ಕಮ್​ಬ್ಯಾಕ್ ಮಾಡಿದ್ದಾರೆ.

ಇತ್ತ ಪ್ಲೇ ಆಫ್​ ರೇಸ್​ನಿಂದ ಹೊರಬಿದ್ದಿರುವ ಎಸ್​ಆರ್​ಹೆಚ್​ ಬೆಂಚ್​ ಕಾಯ್ದಿದ್ದ ಯುವ ಕ್ರಿಕೆಟಿಗರಿಗೆ ಅವಕಾಶ ನೀಡಿ ಅವರ ಬೆಳವಣಿಗೆಗೆ ಸಹಕರಿಸುವುದಾಗಿ ಹೇಳಿದೆ. ಈ ಕಾರಣದಿಂದ ಕಳೆದ ಪಂದ್ಯದಲ್ಲಿ ಡೇವಿಡ್ ವಾರ್ನರ್​, ಮನೀಶ್ ಪಾಂಡೆ ಮತ್ತು ಕೇದಾರ್ ಜಾಧವ್​ರನ್ನು ತಂಡದಿಂದ ಕೈಬಿಟ್ಟಿತ್ತು. ಇಂದು ಕಳೆದ ಪಂದ್ಯದಲ್ಲಿ ಆಡಿದ್ದ ತಂಡವನ್ನೇ ಕಣಕ್ಕಿಳಿಸಿದೆ.

ಮುಖಾಮುಖಿ:

ಉಭಯ ತಂಡಗಳು 16 ಬಾರಿ ಮುಖಾಮುಖಿಯಾಗಿವೆ. ಸಿಎಸ್​ಕೆ 12 ಮತ್ತು ಹೈದರಾಬಾದ್​ 4 ರಲ್ಲಿ ಗೆಲುವು ಸಾಧಿಸಿದೆ.

ಹೈದರಾಬಾದ್​: ಜೇಸನ್ ರಾಯ್, ವೃದ್ಧಿಮಾನ್ ಸಾಹಾ (ವಿಕೀ), ಕೇನ್ ವಿಲಿಯಮ್ಸನ್ (ನಾಯಕ), ಪ್ರಿಯಂ ಗರ್ಗ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಿದ್ದಾರ್ಥ್ ಕೌಲ್, ಸಂದೀಪ್ ಶರ್ಮಾ

ಚೆನ್ನೈ ಸೂಪರ್ ಕಿಂಗ್ಸ್: ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ಸುರೇಶ್ ರೈನಾ, ಅಂಬಾಟಿ ರಾಯುಡು, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ & ವಿಕೀ), ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಜೋಶ್ ಹಜಲ್‌ವುಡ್

ಇದನ್ನು ಓದಿ:ಐಪಿಎಲ್​ ವೀಕ್ಷಣೆಯಲ್ಲಿ ಭಾರಿ ಏರಿಕೆ: ಮೊದಲ 35 ಪಂದ್ಯ ವೀಕ್ಷಿಸಿದವರ ಸಂಖ್ಯೆ ಎಷ್ಟು ಕೋಟಿ ಗೊತ್ತಾ?

ABOUT THE AUTHOR

...view details