ಕರ್ನಾಟಕ

karnataka

ETV Bharat / sports

ಚೆನ್ನೈ ವರ್ಸಸ್​ ಪಂಜಾಬ್​: ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಧೋನಿ ಪಡೆ! - IndianPremierLeague

ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಇಂದು ಪಂಜಾಬ್​-ಚೆನ್ನೈ ಮುಖಾಮುಖಿಯಾಗಿದ್ದು, ಮುಂಬೈನ ವಾಂಖೆಂಡೆ ಮೈದಾನದಲ್ಲಿ ಪಂದ್ಯ ನಡೆಯಲಿದೆ.

CSK vs Punjab
CSK vs Punjab

By

Published : Apr 16, 2021, 7:24 PM IST

ಮುಂಬೈ:ಇಲ್ಲಿನ ವಾಂಖೆಂಡೆ ಮೈದಾನದಲ್ಲಿ ಇಂಡಿಯನ್​ ಪ್ರೀಮಿಯರ್​ ಲೀಗ್​ನ 8ನೇ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಪಂಜಾಬ್​ ಕಿಂಗ್ಸ್​ ನಡುವೆ ಸೆಣಸಾಟ ನಡೆಯಲಿದ್ದು, ಟಾಸ್​ ಗೆದ್ದ ಧೋನಿ ಬಳಿಕ ಬೌಲಿಂಗ್​ ಆಯ್ದುಕೊಂಡಿದೆ.

ಉಭಯ ತಂಡಗಳು ಗೆಲ್ಲುವ ಉತ್ಸಾಹದೊಂದಿಗೆ ಕಣಕ್ಕಿಳಿಯಲಿದ್ದು, ಈಗಾಗಲೇ ಪಂಜಾಬ್​ ಮೊದಲ ಪಂದ್ಯ ಗೆದ್ದು ಶುಭಾರಂಭ ಮಾಡಿದೆ. ಆದರೆ, ಮೊದಲ ಪಂದ್ಯ ಸೋತಿರುವ ಧೋನಿ ಬಳಗ ಈ ಪಂದ್ಯದಲ್ಲಿ ತಿರುಗಿ ಬೀಳುವ ಸಾಧ್ಯತೆ ಇದೆ.

ಆಡುವ 11ರ ಬಳಗ

ಪಂಜಾಬ್​ ಕಿಂಗ್ಸ್​:ಕೆ.ಎಲ್​ ರಾಹುಲ್​(ವಿ.ಕೀ, ಕ್ಯಾಪ್ಟನ್​), ಮಯಾಂಕ್​ ಅಗರವಾಲ್​, ಕ್ರಿಸ್​ ಗೇಲ್​, ದೀಪಕ್​ ಹೂಡಾ, ನಿಕೂಲಸ್​ ಪೂರನ್​, ಶಾರುಖ್​ ಖಾನ್​, ರಿಚರ್ಡ್ಸನ್​, ಮುರ್ಗನ್​ ಅಶ್ವಿನ್​, ಮೆರಡಿತ್​, ಮೊಹಮ್ಮದ್​ ಶಮಿ, ಅರ್ಷದೀಪ್​​ ಸಿಂಗ್​

ಇದನ್ನೂ ಓದಿ: ಬಲಿಷ್ಠ ಪಂಜಾಬ್​ ವಿರುದ್ಧ ಧೋನಿ ಬಳಗದ ಫೈಟ್​.. ಈ ಪಂದ್ಯ ಗೆದ್ದು ಖಾತೆ ತೆರೆಯುವ ತವಕದಲ್ಲಿ ಸಿಎಸ್​ಕೆ!

ಚೆನ್ನೈ ಸೂಪರ್​ ಕಿಂಗ್ಸ್​​​:ಋತುರಾಜ್​ ಗಾಯಕ್ವಾಡ್​, ಫಾಫು ಡು ಪ್ಲೆಸಿಸ್​, ಸುರೇಶ್ ರೈನಾ, ಮೊಯಿನ್​ ಅಲಿ, ಅಂಬಾಟಿ ರಾಯುಡು, ಎಂಎಸ್​ ಧೋನಿ(ವಿ.ಕೀ, ಕ್ಯಾಪ್ಟನ್​), ರವೀಂದ್ರ ಜಡೇಜಾ, ಸ್ಯಾಮ್​ ಕರ್ರನ್​, ಡ್ವೇನ್​ ಬ್ರಾವೋ, ಶಾರ್ದೂಲ್​ ಠಾಕೂರ್​, ದೀಪಕ್​ ಚಹರ್​​

ಪಂಜಾಬ್ ಹಾಗೂ ಚೆನ್ನೈ ತಂಡ ಈ ಹಿಂದಿನ ತಂಡವನ್ನೇ ಕಣಕ್ಕಿಳಿಸಿದ್ದು, ಯಾವುದೇ ರೀತಿಯ ಬದಲಾವಣೆ ಮಾಡಿಲ್ಲ. ಆದರೆ, ಈಗಾಗಲೇ ಮೊದಲ ಪಂದ್ಯದಲ್ಲಿ ಪಂಜಾಬ್​ ತಂಡ ರಾಜಸ್ಥಾನ ವಿರುದ್ಧ ಗೆಲುವು ಸಾಧಿಸಿದ್ದು, ಅದೇ ಉತ್ಸಾಹದೊಂದಿಗೆ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಆದರೆ, ಡೆಲ್ಲಿ ವಿರುದ್ಧ ಸೋಲು ಕಂಡಿರುವ ಸಿಎಸ್​ಕೆ ಗೆದ್ದು ಖಾತೆ ತೆರೆಯುವ ಉದ್ದೇಶ ಇಟ್ಟುಕೊಂಡಿದೆ.

ABOUT THE AUTHOR

...view details