ಕರ್ನಾಟಕ

karnataka

ETV Bharat / sports

ಟಿ20 ಕ್ರಿಕೆಟ್​ನಲ್ಲಿ 250 ವಿಕೆಟ್​ ಪಡೆದ ರವಿಚಂದ್ರನ್ ಅಶ್ವಿನ್

ಅಶ್ವಿನ್​ ಟಿ20 ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಭಾರತದ 3ನೇ ಬೌಲರ್​ ಎನಿಸಿಕೊಂಡರು. ಅಶ್ವಿನ್​ಗೂ ಮೊದಲು ಅಮಿತ್ ಮಿಶ್ರಾ ಮತ್ತು ಪಿಯೂಷ್ ಚಾವ್ಲಾ ಈ ಸಾಧನೆ ಮಾಡಿದ್ದಾರೆ..

Ashwin bags 250th T20 wicket
ರವಿಚಂದ್ರನ್ ಅಶ್ವಿನ್​

By

Published : Sep 25, 2021, 8:56 PM IST

ಅಬುಧಾಬಿ :ಡೆಲ್ಲಿ ಕ್ಯಾಪಿಟಲ್ಸ್ ಅನುಭವಿ ಸ್ಪಿನ್ನರ್​ ರವಿಚಂದ್ರನ್ ಆರ್ ಅಶ್ವಿನ್​ ಶನಿವಾರ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಡೇವಿಡ್ ಮಿಲ್ಲರ್ ವಿಕೆಟ್ ಪಡೆಯುವ ಮೂಲಕ ಟಿ20 ಕ್ರಿಕೆಟ್​ನಲ್ಲಿ 250 ವಿಕೆಟ್​ ಪೂರ್ಣಗೊಳಿಸಿದರು.

ಅಶ್ವಿನ್​ ಟಿ20 ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಭಾರತದ 3ನೇ ಬೌಲರ್​ ಎನಿಸಿದರು. ಅಶ್ವಿನ್​ಗೂ ಮೊದಲು ಅಮಿತ್ ಮಿಶ್ರಾ ಮತ್ತು ಪಿಯೂಷ್ ಚಾವ್ಲಾ ಈ ಸಾಧನೆ ಮಾಡಿದ್ದಾರೆ.

34 ವರ್ಷದ ಸ್ಪಿನ್ನರ್​ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ 140 ವಿಕೆಟ್​, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 46 ಪಂದ್ಯಗಳಿಂದ 52 ಮತ್ತು ಉಳಿದ 58 ವಿಕೆಟ್​ಗಳನ್ನು ಡೊಮೆಸ್ಟಿಕ್​ ಪಂದ್ಯಗಳಲ್ಲಿ ಪಡೆದಿದ್ದಾರೆ. ತಮಿಳುನಾಡಿನ ಆಫ್‌​ ಸ್ಪಿನ್ನರ್​ ಐಪಿಎಲ್​ನಲ್ಲಿ ಗರಿಷ್ಠ ವಿಕೆಟ್​ ಪಡೆದ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ.

ವೇಗಿ ಲಸಿತ್​ ಮಾಲಿಂಗ 170 ವಿಕೆಟ್ ಪಡೆಯುವ ಮೂಲಕ ಐಪಿಎಲ್​ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್​ ಎನಿಸಿಕೊಂಡಿದ್ದಾರೆ. ನಂತರದ ಸ್ಥಾನದಲ್ಲಿ ಅಮಿತ್ ಮಿಶ್ರಾ(160), ಪಿಯೂಷ್ ಚಾವ್ಲಾ(156), ಡ್ವೇನ್ ಬ್ರಾವೋ(154) ಮತ್ತು ಹರ್ಭಜನ್​ ಸಿಂಗ್(150) ಇದ್ದಾರೆ.

ಮಾಲಿಂಗ ಅವರನ್ನು ಹೊರೆತುಪಡಿಸಿದರೆ ಉಳಿದ ಟಾಪ್ 4 ಬೌಲರ್​ಗಳು ಈ ಐಪಿಎಲ್​ನ ಭಾಗವಾಗಿದ್ದಾರೆ. ಡ್ವೇನ್​ ಬ್ರಾವೋ ಚೆನ್ನೈ ಸೂಪರ್​ ಕಿಂಗ್ಸ್​ನ ಭಾಗವಾಗಿದ್ದಾರೆ. ಆದರೆ, ಮಿಶ್ರಾ, ಚಾವ್ಲಾ ಮತ್ತು ಹರ್ಭಜನ್​ ಸಿಂಗ್​ಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ. ಹಾಗಾಗಿ, ಈ ಆವೃತ್ತಿ ಮುಗಿಯುವವರೆಗೆ ಬ್ರಾವೋ ಗರಿಷ್ಠ ವಿಕೆಟ್ ಪಡೆದ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರುವ ಸಾಧ್ಯತೆಯಿದೆ.

ಇದನ್ನು ಓದಿ:ಬೌಲರ್​ಗಳ ಮಿಂಚಿನ ಪ್ರದರ್ಶನ: ರಾಜಸ್ಥಾನ ವಿರುದ್ಧ ಡೆಲ್ಲಿಗೆ 33 ರನ್​ಗಳ ಭರ್ಜರಿ ಜಯ

ABOUT THE AUTHOR

...view details