ಶಾರ್ಜಾ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ರವಿಚಂದ್ರನ್ ಅಶ್ವಿನ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಇಯಾನ್ ಮಾರ್ಗನ್ ಮೈದಾನದಲ್ಲಿ ಮಾತಿನ ಚಕಮಕಿ ನಡೆಸಿದ ಘಟನೆ ನಡೆದಿದೆ. ಆದರೆ, ಕೆಕೆಆರ್ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಡೆಲ್ಲಿ ನಾಯಕ ರಿಷಭ್ ಪಂತ್ ಮತ್ತು ಅಶ್ವಿನ್ 19ನೇ ಓವರ್ 4ನೇ ಎಸೆತದಲ್ಲಿ ಒಂದು ರನ್ ತೆಗೆದುಕೊಳ್ಳುವ ಜಾಗದಲ್ಲಿ ಕೆಕೆಆರ್ ಫೀಲ್ಡರ್ ವೆಂಕಟೇಶ್ ಅಯ್ಯರ್ ಜಾರಿ ಬಿದ್ದಿದ್ದರಿಂದ ಡೆಲ್ಲಿ ಜೋಡಿ 2 ರನ್ ತೆಗೆದುಕೊಂಡಿತು. ಇಲ್ಲಿ ರನ್ ಇರದಿದ್ದರೂ ಅಶ್ವಿನ್, ಪಂತ್ಗೆ ಸ್ಟ್ರೈಕ್ ನೀಡುವುದಕ್ಕಾಗಿ ಈ ರೀತಿ ಮಾಡಿದ್ದರು.
ಆದರೆ, ನಂತರದ ಓವರ್ನಲ್ಲಿ ಅಶ್ವಿನ್ ವಿಕೆಟ್ ಒಪ್ಪಿಸಿದರು. ಈ ವೇಳೆ ಸೌಥಿ ಅಶ್ವಿನ್ ಕಡೆಗೆ ತಿರುಗಿ ಕಿಚಾಯಿಸಿದ್ದರು. ನಂತರ ಅಶ್ವಿನ್ ಕೋಪಗೊಂಡು ವಾಗ್ವಾದಕ್ಕಿಳಿದರು. ಸೌಥಿ ಜೊತೆಗೆ ಸೇರಿದ ಮಾರ್ಗನ್ ಚಕಮಕಿಯನ್ನು ಮತ್ತಷ್ಟು ಹೆಚ್ಚಿಸಿದರು. ಆದರೆ, ಮಧ್ಯಪ್ರವೇಶಿಸಿದ ಕೆಕೆಆರ್ನ ಮಾಜಿ ನಾಯಕ ದಿನೇಶ್ ಕಾರ್ತಿಕ್ ಜಗಳವನ್ನು ನಿಲ್ಲಿಸಿದರು.
ಈ ಪಂದ್ಯದಲ್ಲಿ ಡೆಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಕೇವಲ128ರನ್ಗಳ ಟಾರ್ಗೇಟ್ ನೀಡಿತ್ತು. ಕೆಕೆಆರ್ 18.2 ಓವರ್ಗಳಲ್ಲಿ ಗುರಿ ತಲುಪಿ ಗೆಲುವು ಸಾಧಿಸಿತು.
ಇದನ್ನು ಓದಿ:ತಂಡದ ಗೆಲುವಿನ ಸಂಪೂರ್ಣ ಶ್ರೇಯ ತಂಡದ ಕೋಚ್ ಮೆಕಲಮ್ಗೆ ಸಲ್ಲಬೇಕು : ಕೆಕೆಆರ್ ಕ್ಯಾಪ್ಟನ್ ಮಾರ್ಗನ್