ಮುಂಬೈ: ಐಪಿಎಲ್ನಿಂದ ಹೊರ ಹೋಗಲು ನಿರ್ಧರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಆಸ್ಟ್ರೇಲಿಯಾದ ಆ್ಯಡಂ ಜಂಪಾ ಮತ್ತು ಕೇನ್ ರಿಚರ್ಡ್ಸನ್ ಇಂದು ರಾತ್ರಿ ದೋಹಾ ಮೂಲಕ ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ.
ಇಂದು ರಾತ್ರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈನಿಂದ ಅಹ್ಮದಾಬಾದ್ಗೆ ಆಗಮಿಸಿದರೆ, ಕೇನ್ ಮತ್ತು ಜಂಪಾ ಮಾತ್ರ ಮುಂಬೈನಲ್ಲೇ ಉಳಿದುಕೊಂಡಿದ್ದಾರೆ. " ಅವರಿಬ್ಬರು ಇಂದು ರಾತ್ರಿ ದೋಹಾ ಮೂಲಕ ಆಸ್ಟ್ರೇಲಿಯಾಕ್ಕೆ ಹಿಂತಿರುಗಲಿದ್ದಾರೆ" ಎಂದು ಮೂಲವೊಂದು ಸುದ್ದಿಸಂಸ್ಥೆಗೆ ತಿಳಿಸಿದೆ
ಈಗಾಗಲೇ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದ ಆ್ಯಂಡ್ರ್ಯೂ ಟೈ ಕೋವಿಡ್ 19 ಭೀತಿಯ ಕಾರಣ ನೀಡಿ ಭಾರತದಿಂದ ಹೊರ ಹೋಗಿದ್ದಾರೆ. ಇನ್ನು ಮಂಗಳವಾರ ಆಸ್ಟ್ರೇಲಿಯಾ ಸರ್ಕಾರ ಮೇ 15 ರವರೆಗೆ ಭಾರತದಿಂದ ಬರುವ ವಿಮಾನಗಳಿಗೆ ನಿಷೇಧ ಹೇರಿದೆ.
ಆದರೂ ಪ್ರಸ್ತುತ ಸ್ಟೀವ್ ಸ್ಮಿತ್, ವಾರ್ನರ್ ಮತ್ತು ಮ್ಯಾಕ್ಸವೆಲ್ ಸೇರಿದಂತೆ ಆಸ್ಟ್ರೇಲಿಯಾದ 14 ಕ್ರಿಕೆಟಿಗರು ಐಪಿಎಲ್ನಲ್ಲಿ ಆಡುತ್ತಿದ್ದಾರೆ. ಇವರಲ್ಲದೇ ಕೋಚ್ಗಳಾದ ರಿಕಿ ಪಾಂಟಿಂಗ್, ಸೈಮನ್ ಕ್ಯಾಟಿಚ್, ಕಾಮೆಂಟೇಟರ್ಸ್ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನು ಓದಿ:ಬಡಾ ದಿಲ್‌ವಾಲಾ ಬ್ರೆಟ್ ಲೀ.. ಭಾರತ ನನ್ನ 2ನೇ ಮನೆ ಎಂದು ಕೊರೊನಾ ಹೋರಾಟಕ್ಕೆ ₹41 ಲಕ್ಷ ನೆರವು..