ದುಬೈ:ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತನ್ನ ಮೂರನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೆಣಸಾಡಲಿದೆ. ಟೂರ್ನಿಯಲ್ಲಿ ಕೇವಲ ಬ್ಯಾಟ್ಸ್ಮನ್ ಆಗಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಹಾರ್ದಿಕ್ ಪಾಂಡ್ಯರನ್ನು ಆದಷ್ಟು ಬೇಗ ಬೌಲರ್ ಆಗಿಯೂ ನೋಡಬಹುದು ಎಂದು ಮುಂಬೈ ಇಂಡಿಯನ್ಸ್ ಕ್ರಿಕೆಟ್ ಕಾರ್ಯಾಚಾರಣೆಯ ನಿರ್ದೇಶಕ ಜಹೀರ್ ಖಾನ್ ಹೇಳಿದ್ದಾರೆ.
ಕಳೆದೆರಡು ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಿಲ್ಲ. ಆದರೆ, ಜಹೀರ್ ಪ್ರಕಾರ ಪಾಂಡ್ಯ ಪಂದ್ಯದ ಗತಿ ಬದಲಿಸಬಲ್ಲ ಬೌಲರ್. ಆದಷ್ಟು ಬೇಗ ಅವರ ಬೌಲಿಂಗ್ ಪ್ರದರ್ಶನ ಕಾಣಬಹುದು ಎಂದಿದ್ದಾರೆ. ಹಾರ್ದಿಕ್ ಪಾಂಡ್ಯ ಕಳೆದ ವರ್ಷ ಅಕ್ಟೋಬರ್ನಲ್ಲಿ ಸೊಂಟದ ನೋವಿಗೆ ಒಳಾಗಿದ್ದರಿಂದ ಸರ್ಜರಿ ಮಾಡಿಸಿಕೊಂಡಿದ್ದರು.
'ಅವರು (ಪಾಂಡ್ಯ) ಬೌಲಿಂಗ್ ಮಾಡುತ್ತಾರೆ ಎಂದು ಕೂಡ ನಿರೀಕ್ಷಿಸುತ್ತಿದ್ದೇವೆ. ಅವರು ಬೌಲಿಂಗ್ ಮಾಡುವಾಗ ಯಾವುದೇ ತಂಡದ ಸಮತೋಲನವನ್ನು ನಿಜವಾಗಿಯೂ ಬದಲಾಯಿಸುವ ವ್ಯಕ್ತಿ. ಅವರು ಕೂಡ ಅದನ್ನು ಅರ್ಥಮಾಡಿಕೊಂಡಿದ್ದಾರೆ. ಆದರೆ, ಅವರ ದೇಹದ ಸ್ಥಿತಿಯ ಬಗ್ಗೆ ಫಿಸಿಯೋವನ್ನು ಕೇಳಬೇಕಿದೆ.
ನಾವು ಪಾಂಡ್ಯರ ಬೌಲಿಂಗ್ ನೋಡಲು ಎದುರು ನೋಡುತ್ತಿದ್ದೇವೆ. ಅವರೂ ಕೂಡ ಬೌಲಿಂಗ್ ಮಾಡು ತುಂಬಾ ಉತ್ಸುಕರಾಗಿದ್ದಾರೆ ಹಾಗೂ ಬಯಸಿದ್ದಾರೆ. ನಾನು ಮೊದಲೇ ಹೇಳಿದಂತೆ ಅವರ ದೇಹದ ಸ್ಥಿತಿ ಸರಿಯಾಗುವವರೆಗೂ ನಾವು ಕಾಯಬೇಕು ಮತ್ತು ತಾಳ್ಮೆಯಿಂದಿರಬೇಕು' ಎಂದು ಜಹೀರ್ ಹೇಳಿದ್ದಾರೆ.
ದಿನದ ಕೊನೆಯಲ್ಲಿ ಯಾವುದೇ ಬೌಲರ್ಗೆ ಗಾಯಗಳು ದೊಡ್ಡ ಪಾತ್ರ ವಹಿಸುತ್ತವೆ. ಅವರು ಪೂರ್ಣ ಫಿಟ್ನೆಸ್ ಹೊಂದಿರುವ ಬ್ಯಾಟ್ಸ್ಮನ್ ಆಗಿರುವುದು ನಮಗೆ ತುಂಬಾ ಸಂತೋಷವಾಗಿದೆ. ನೀವು ಶೀಘ್ರದಲ್ಲೇ ಬೌಲಿಂಗ್ ಮಾಡುವುದನ್ನು ನೋಡುತ್ತೀರಿ ಎಂದು ಅವರು ಹೇಳಿದ್ದಾರೆ. ಪಾಂಡ್ಯ ಮೊದಲ ಪಂದ್ಯದಲ್ಲಿ 14 ರನ್ ಹಾಗೂ 2ನೇ ಪಂದ್ಯದಲ್ಲಿ 18 ರನ್ ಮಾತ್ರ ಗಳಿಸಿದ್ದಾರೆ. ಮುಂಬೈ ಫ್ರಾಂಚೈಸಿ ಇವರಿಂದ ಇನ್ನೂ ಉತ್ತಮವಾದುದನ್ನು ಎದುರು ನೋಡುತ್ತಿದೆ.