ದುಬೈ:ಮೊಟ್ಟ ಮೊದಲ ಬಾರಿಗೆ ಐಪಿಎಲ್ ಫೈನಲ್ ತಲುಪಿರುವ ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ನಾಳೆ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಬಲಿಷ್ಠ ಮುಂಬೈ ವಿರುದ್ಧ ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ.
ಐಯ್ಯರ್ ನಾಯಕತ್ವದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ತಂಡ, ಕಳೆದ ಹೈದರಾಬಾದ್ನ ವಿರುದ್ಧ ಉತ್ತಮ ಬೌಲಿಂಗ್ ದಾಳಿ ನಡೆಸಿ 17ರನ್ಗಳ ಭರ್ಜರಿ ಜಯ ದಾಖಲಿಸಿತ್ತು. ಇದೀಗ ಫೈನಲ್ ಪ್ರವೇಶಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಬೌಲಿಂಗ್ ದಾಳಿಯೇ ಪ್ರಮುಖಾಸ್ತ್ರವಾಗಿದೆ.
ಕಗಿಸೊ ರಬಡಾ ಹಾಗೂ ಅನ್ರಿಕ್ ನಾರ್ಟ್ಜೆ ಅತ್ಯುತ್ತಮ ಬೌಲರ್ಸ್ ಎನಿಸಿಕೊಂಡಿದ್ದಾರೆ. ರಬಡಾ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ನಾರ್ಟ್ಜೆ 15 ಪಂದ್ಯಗಳಲ್ಲಿ 20 ವಿಕೆಟ್ ಪಡೆದು 7ನೇ ಸ್ಥಾನದಲ್ಲಿದ್ದಾರೆ.
ಈ ನಡುವೆ ನಾರ್ಟ್ಜೆ ಈ ಐಪಿಎಲ್ನಲ್ಲಿ ಅತೀ ವೇಗದ ಬೌಲಿಂಗ್ ಮಾಡಿರುವ ಸಾಧನೆ ಸಹ ಮಾಡಿದ್ದಾರೆ. ಇದೀಗ ನಾರ್ಟ್ಜೆಯ ಬೌಲಿಂಗ್ಗೆ ಮನಸೋತ ಅಭಿಮಾನಿಯೊಬ್ಬ ಡೆಲ್ಲಿ ತಂಡ ಕುರಿತು ಪತ್ರ ಬರೆದಿದ್ದಾೆ.
ಡೆಲ್ಲಿ ಅಭಿಮಾನಿ ಕ್ರಾಂತಿ ಎಂಬಾತ ಪತ್ರ ಬರೆದಿದ್ದು, ‘ಹೇ ಅನ್ರಿಕ್, ನೀವು ಆರಾಮವಾಗಿದ್ದೀರಿ ಎಂದು ಭಾವಿಸಿದ್ದೇನೆ. ಈ ವರ್ಷ ನೀವು ಅದ್ಭುತ ಪ್ರದರ್ಶನ ನೀಡುತ್ತಿದ್ದೀರಿ. ನಿಮ್ಮ ಬೌಲಿಂಗ್ ವೇಗ ಅಸಾಮಾನ್ಯವಾಗಿದೆ’ ಎಂದಿದ್ದಾರೆ.
ಮುಂದುವರಿದು, ನಾನು ಕಳೆದ 13 ವರ್ಷಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಬೆಂಬಲಿಸುತ್ತಾ ಬಂದಿದ್ದೇನೆ. ನಾನೆಂದು ಡಿಸಿ ಬೌಲಿಂಗ್ ಇಷ್ಟೊಂದು ಮಾರಕವಾಗಿರುವುದನ್ನು ನೋಡಿರಲಿಲ್ಲ.
ನೀವೀಗ 150 ರನ್ ಹೊಡೆದರೂ ನಾನು ಆರಾಮವಾಗಿ ಕುಳಿತು ವಿಶ್ರಾಂತಿ ಪಡೆಯುತ್ತೇನೆ. ಯಾಕೆಂದರೆ, ನಾರ್ಜ್ಟೆ ಇದನ್ನು ನಿಭಾಯಿಸುತ್ತಾರೆ ಎಂದು ನನ್ನ ಒಳ ಮನಸ್ಸು ಹೇಳುತ್ತಿರುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾನೆ.