ಶಾರ್ಜಾ: ಇಲ್ಲಿನ ಕ್ರಿಕೆಟ್ ಮೈದಾನದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 38 ರನ್ಗಳ ಜಯ ಗಳಿಸಿದ ನಂತರ ಮುಂಬೈ ಇಂಡಿಯನ್ಸ್ ಆಲ್‌ರೌಂಡರ್ ಕೃನಾಲ್ ಪಾಂಡ್ಯ ತಂಡದ ಬೌಲಿಂಗ್ ಯುನಿಟ್ಅನ್ನು ಶ್ಲಾಘಿಸಿದ್ದಾರೆ.
209 ರನ್ಗಳ ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡವನ್ನು ಮುಂಬೈ ಬೌಲರ್‌ಗಳು 20 ಓವರ್‌ಗಳಲ್ಲಿ 174 ರನ್ಗಳಿಗೆ ಸೀಮಿತಗೊಳಿಸಿದರು. ವೇಗಿಗಳಾದ ಜಸ್ಪ್ರಿತ್ ಬುಮ್ರಾ, ಟ್ರೆಂಟ್ ಬೌಲ್ಟ್ ಮತ್ತು ಜೇಮ್ಸ್ ಪ್ಯಾಟಿನ್ಸನ್ ತಲಾ ಎರಡು ವಿಕೆಟ್ ಕಬಳಿಸಿದ್ರೆ, ಕೃನಾಲ್ ಪಾಂಡ್ಯ ಒಂದು ವಿಕೆಟ್ ಪಡೆದರು.
ಪಂದ್ಯದ ನಂತರ ಮಾತನಾಡಿದ ಕೃನಾಲ್ ಪಾಂಡ್ಯ, 'ನಾವು ನಿಜವಾಗಿಯೂ ಗುಣಮಟ್ಟದ ವೇಗದ ಬೌಲರ್‌ಗಳನ್ನು ಹೊಂದಿದ್ದೇವೆ. ನಿಸ್ಸಂಶಯವಾಗಿ ಜಸ್ಪ್ರಿತ್ ಬುಮ್ರಾ ನಮ್ಮ ತಂಡದ ನಂಬರ್ 1 ಬೌಲರ್ ಆಗಿದ್ದು, ಬೌಲ್ಟ್ ಕೂಡ ಸಮರ್ಥರಿದ್ದಾರೆ. ಪ್ಯಾಟಿನ್ಸನ್ ಪ್ರತೀ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಎಲ್ಲಾ ವೇಗಿಗಳು ಸ್ಥಿರವಾಗಿದ್ದು, ಮಿಚೆಲ್ ಮೆಕ್ಲೆಗನ್ ಮತ್ತು ನಾಥನ್ ಕೌಲ್ಟರ್ ನೈಲ್ ಬೆಂಚ್ ಕಾಯುತ್ತಿದ್ದಾರೆ. ನಮ್ಮ ತಂಡ ಉತ್ತಮ ವೇಗಿಗಳಿಂದ ಕೂಡಿದೆ' ಎಂದಿದ್ದಾರೆ.
ಟಾಸ್ ಗೆದ್ದ ನಂತರ ಮೊದಲು ಬ್ಯಾಟಿಂಗ್ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಕೃನಾಲ್, 'ಗರಿಷ್ಠ ರನ್ ಗಳಿಸುವುದು ತಂತ್ರವಾಗಿತ್ತು. ದಿನದ ಕೊನೆಯಲ್ಲಿ 200ಕ್ಕಿಂತ ಹೆಚ್ಚಿನ ರನ್ ಚೇಸ್ ಮಾಡುವಾಗ ಒತ್ತಡ ಇರುತ್ತದೆ. ಆದ್ದರಿಂದ ಮೊದಲು ಬ್ಯಾಟಿಂಗ್ ಮಾಡುವುದು ಉತ್ತಮ ಎಂದು ನಾನು ಊಹಿಸುತ್ತೇನೆ. ಉತ್ತಮ ರನ್ ಕಲೆಹಾಕಿ ಬೌಲರ್‌ಗಳು ತಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಬಹುದು' ಎಂದಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 208 ರನ್ ಗಳಿಸಿತ್ತು. 209 ರನ್ಗಳ ಗುರಿ ಬೆನ್ನಟ್ಟಿದ ಹೈರಾಬಾದ್ ತಂಡ 7 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿ ಸೋಲೊಪ್ಪಿಕೊಂಡಿತು.