ದುಬೈ: ನಾಯಕ ಕೆಎಲ್ ರಾಹುಲ್ ಭರ್ಜರಿ ಶತಕ ಹಾಗೂ ಬೌಲರ್ಗಳ ಸಂಘಟಿತ ಪ್ರದರ್ಶನದಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ 97ರನ್ಗಳ ಬೃಹತ್ ಅಂತರದಿಂದ ಸೋಲು ಅನುಭವಿಸಿದ ಬಳಿಕ ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಆತ್ಮವಿಮರ್ಶೆ ಮಾತುಗಳನ್ನು ಆಡಿದ್ದಾರೆ.
'ತಂಡದ ನಾಯಕನಾಗಿ ನಾನು ಸಂಕಷ್ಟುಗಳನ್ನು ಮುನ್ನಡಸಬೇಕಿದೆ. ಕೆಎಲ್ ರಾಹುಲ್ ಅವರ ಕ್ಯಾಚ್ ಅನ್ನು ಎರಡು ಬಾರಿ ಕೈಚೆಲ್ಲಿದ್ದಕ್ಕೆ ದುಬಾರಿ ಬೆಲೆ ತೆರಬೇಕಾಯಿತು' ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ಹೇಳಿದ್ದಾರೆ.
207 ರನ್ಗಳ ಬೆನ್ನತ್ತಿದ ಬೆಂಗಳೂರು ತಂಡ ಪಂಜಾಬ್ ಬೌಲರ್ಗಳ ದಾಳಿಗೆ ಸಿಲುಕಿ 17 ಓವರ್ಗಳಲ್ಲಿ109 ರನ್ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲುಕಂಡಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ತಂಡಕ್ಕೆ ನಾಯಕ ಕೆಎಲ್ ರಾಹುಲ್ 132 ರನ್ಗಳಿಸಿ 206 ರನ್ಗಳ ಬೃಹತ್ ಮೊತ್ತ ದಾಖಲಿಸಲು ನೆರವಾದರು.
ಮಧ್ಯಮ ಹಂತದಲ್ಲಿನ ಬಾಲಿಂಗ್ ವೇಳೆ ನಾವು ಬಹಳ ಉತ್ತಮವಾಗಿ ಪ್ರದರ್ಶನ ನೀಡಿದ್ದೇವು ಎಂದು ನಾನು ಭಾವಿಸುತ್ತೇನೆ. ನಾನು ಮುಂದೆ ನಿಂತು ಸಂಕಷ್ಟವನ್ನು ಮುನ್ನಡಸಬೇಕಾಗಿದೆ ಎಂದು ವಿರಾಟ್ ಕೊಹ್ಲಿ ಪಂದ್ಯದ ನಂತರ ಅವಾರ್ಡ್ ವಿತರಣೆ ವೇಳೆ ಹೇಳಿದರು.
ಪಂದ್ಯದಲ್ಲಿ ಸುಮಾರು 30-40 ರನ್ಗಳು ಹೆಚ್ಚಾಗಿ ಹರಿದು ಹೋದವು. ಅವರನ್ನು 180ಕ್ಕೆ ಕಟ್ಟಿಹಾಕಿದ್ದರೆ, ಉತ್ತಮ ಬೌಲಿಂಗ್ ಪಡೆ ಹೊಂದಿದ್ದರಿಂದ ನಾವು ಹೆಚ್ಚಿನ ಒತ್ತಡವನ್ನು ಅನುಭವಿಸುತ್ತಿರಲಿಲ್ಲ. ಕೆಲವು ವೇಳೆ ಇಂತಹ ಘಟನೆಗಳು ನಡೆಯುತ್ತವೆ. ಅವುಗಳನ್ನು ನಾವು ಒಪ್ಪಿಕೊಳ್ಳಬೇಕು. ನಾವು ಉತ್ತಮ ಆಟಗಾರರನ್ನು ಹೊಂದಿದ್ದೇವೆ. ನಾವು ಕೆಟ್ಟ ಆಟವನ್ನು ಆಡಿದ್ದೇವೆ. ಈಗ ನಾವು ಮುಂದಿನ ಪಂದ್ಯದತ್ತ ದೃಷ್ಟಿ ಹಾಯಿಸಬೇಕಿದೆ ಎಂದರು.
ನಾವು ಆ ಸಣ್ಣ-ಸಣ್ಣ ತಪ್ಪುಗಳನ್ನು ಜೋಡಿಸಲು ಕಲಿಯಬೇಕಾಗಿದೆ. ನಾವು ಬಹಳ ಚೆನ್ನಾಗಿ ಆಡಿದ್ದೇವೆ. ಎರಡನೇ ಅವಧಿಯಲ್ಲಿ ಮತ್ತು ಅದರ ನಂತರ ಉತ್ತಮವಾಗಿ ಪ್ರದರ್ಶನ ನೀಡಿದ್ದೇವೆ. ಉತ್ತಮವಾಗಿ ಬ್ಯಾಟಿಂಗ್ ಪ್ರಾರಂಭಿಸಿ ನಾವು ಅವರ ಮೇಲೆ ನೇರವಾಗಿ ಒತ್ತಡವನ್ನು ಹಾಕಬೇಕಾಗಿತ್ತು ಎಂದು ವಿರಾಟ್ ಹೇಳಿದರು.