ಕರ್ನಾಟಕ

karnataka

ETV Bharat / sports

ಪಂಜಾಬ್​ ವಿರುದ್ಧ ನಿಧಾನಗತಿ ಬೌಲಿಂಗ್​.. ವಿರಾಟ್ ಕೊಹ್ಲಿಗೆ 12 ಲಕ್ಷ ರೂ. ದಂಡ - ಪಂಜಾಬ್​ ವಿರುದ್ಧ ಸ್ಲೋ ಓವರ್

ನಿನ್ನೆ ನಡೆದ ಪಂದ್ಯದಲ್ಲಿ ಸ್ಲೋ ಓವರ್‌ ನಡೆಸಿದ್ದಕ್ಕಾಗಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿಗೆ ಐಪಿಎಲ್ ಆಡಳಿತ ಮಂಡಳಿ ದಂಡ ವಿಧಿಸಿದೆ.​

Virat Kohli fined for RCB's slow over-rate
ಆರ್​ಸಿಬಿ ನಾಕಯ ಕೊಹ್ಲಿಗೆ ದಂಡ 12 ಲಕ್ಷ ರೂ. ದಂಡ

By

Published : Sep 25, 2020, 3:30 PM IST

Updated : Sep 25, 2020, 5:59 PM IST

ದುಬೈ: ಅಂತಾರಾಷ್ಟ್ರಿಯ ಸ್ಟೇಡಿಯಂನಲ್ಲಿ ಗುರುವಾರ ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ನಾಯಕ ವಿರಾಟ್​ ಕೊಹ್ಲಿ ಸ್ಲೋ ಓವರ್‌ ನಡೆಸಿದ್ದಕ್ಕಾಗಿ ದೊಡ್ಡ 12 ಲಕ್ಷ ರೂಪಾಯಿ ದಂಡ ತೆರಬೇಕಾಗಿ ಬಂದಿದೆ.

ಸೆಪ್ಟೆಂಬರ್ 24, 2020 ರಂದು ದುಬೈನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಅವರ ತಂಡವು ಸ್ಲೋ ಓವರ್‌ ನಡೆಸಿದ್ದರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ದಂಡ ವಿಧಿಸಲಾಗಿದೆ" ಎಂದು ಲೀಗ್ ಹೇಳಿಕೆಯಲ್ಲಿ ತಿಳಿಸಿದೆ.

ಸ್ಲೋ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದ ಐಪಿಎಲ್​ನ ನೀತಿ ಸಂಹಿತೆಯ ಅಡಿ ಇದು ಅವರ ತಂಡದ ಮೊದಲ ಅಪರಾಧವಾದ್ದರಿಂದ, ಕೊಹ್ಲಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ತಿಳಿಸಿದೆ.

ಟಿ-20 ಕ್ರಿಕೆಟ್‌ನಲ್ಲಿ ಫೀಲ್ಡಿಂಗ್ ಮಾಡುವ ತಂಡಕ್ಕೆ ಡ್ರಿಂಕ್ಸ್‌ ಬ್ರೇಕ್‌ ಸೇರಿಸಿ 75 ನಿಮಿಷಗಳ ಕಾಲಾವಕಾಶ ಇರುತ್ತದೆ. ಈ ಕಾಲಾವಧಿಯೊಳಗೆ 20 ಓವರ್‌ಗಳನ್ನು ಮುಗಿಸಬೇಕಿರುತ್ತದೆ. ತಪ್ಪಿದರೆ ನಿಯಮಗಳ ಪ್ರಕಾರ ಅದನ್ನು ಸ್ಲೋ ಓವರ್‌ ಎಂದು ಪರಿಗಣಿಸಲಾಗುತ್ತದೆ.

Last Updated : Sep 25, 2020, 5:59 PM IST

ABOUT THE AUTHOR

...view details