ಕರ್ನಾಟಕ

karnataka

ETV Bharat / sports

ತೆವಾಟಿಯಾ ಸಿಡಿಸಿದ ಸಿಕ್ಸರ್‌ಗಳು ರಾಜಸ್ಥಾನ ತಂಡವನ್ನು ಗೆಲುವಿನ ಟ್ರ್ಯಾಕ್​ಗೆ ತಂದವು: ಸ್ಟೀವ್ ಸ್ಮಿತ್ - ಕಾಟ್ರೆಲ್ ಬೌಲಿಂಗ್​ನಲ್ಲಿ 5 ಸಿಕ್ಸರ್​ ಸಿಡಿಸಿದ ತೆವಾಟಿಯಾ

ಸೋಲಿನ ಸುಳಿಯಲ್ಲಿದ್ದ ರಾಜಸ್ಥಾನ​ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದ್ದು ಯುವ ಬ್ಯಾಟ್ಸ್​ಮನ್ ರಾಹುಲ್ ತೆವಾಟಿಯಾ. ಕೊನೆಯ ಮೂರು ಓವರ್​ಗಳಲ್ಲಿ ಪಂದ್ಯದ ಗತಿಯನ್ನೇ ಬದಲಿಸಿದ ತೆವಾಟಿಯಾ, ರಾಜಸ್ಥಾನ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು.

Tewatia's sixes against Cottrell brought us back in game
ರಾಹುಲ್ ತೆವಾಟಿಯಾ

By

Published : Sep 28, 2020, 10:47 AM IST

ಶಾರ್ಜಾ:ಕಿಂಗ್ಸ್​ ಇಲೆವೆನ್​ ಪಂಜಾಬ್​ ಹಾಗೂ ರಾಜಸ್ಥಾನ ರಾಯಲ್ಸ್​ ನಡುವಿನ ಪಂದ್ಯದಲ್ಲಿ ರನ್​​ಗಳ​ ಸುರಿಮಳೆಯಾಗಿದೆ. ಕಿಂಗ್ಸ್​ ಇಲೆವೆನ್​ ಪಂಜಾಬ್​ ನೀಡಿದ 224 ರನ್​ಗಳ ಬೃಹತ್​ ಮೊತ್ತವನ್ನು ಚೇಸ್​ ಮಾಡುವ ಮೂಲಕ ರಾಜಸ್ಥಾನ ತಂಡ ಹೊಸ ಇತಿಹಾಸ ಬರೆದಿದೆ.

ಸೋಲಿನ ಸುಳಿಯಲ್ಲಿದ್ದ ರಾಜಸ್ಥಾನ​ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದ್ದು ಯುವ ಬ್ಯಾಟ್ಸ್​ಮನ್ ರಾಹುಲ್ ತೆವಾಟಿಯಾ. ಕೊನೆಯ ಮೂರು ಓವರ್​ಗಳಲ್ಲಿ ಪಂದ್ಯದ ಗತಿಯನ್ನೇ ಬದಲಿಸಿದ ತೆವಾಟಿಯಾ, ರಾಜಸ್ಥಾನ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು.

ಸಂಕ್ಷಿಪ್ತ ಸ್ಕೋರ್

ಪಂದ್ಯ ಮುಗಿದ ಬಳಿಕ ಮಾತನಾಡಿದ ರಾಜಸ್ಥಾನ ತಂಡದ ನಾಯಕ ಸ್ಟೀವ್ ಸ್ಮಿತ್, ಟೆವಾಟಿಯಾ, ಕಾಟ್ರೆಲ್ ಬೌಲಿಂಗ್​ನಲ್ಲಿ ಉತ್ತಮ ಪ್ರದರ್ಶನ ತೋರಿದ್ರು. ಸಂಜು ಸ್ಯಾಮ್ಸನ್​ ಕೂಡ ಅತ್ಯುತ್ತಮ ಸಿಕ್ಸರ್​ಗಳನ್ನು ಸಿಡಿಸಿದ್ರು. ಆತ ನೆಟ್​ನಲ್ಲಿ ಬ್ಯಾಟ್ ಬೀಸಿದ್ದನ್ನು ನೋಡಿದ್ದೇವೆ. ಕಾಟ್ರೆಲ್ ಬೌಲಿಂಗ್​ ಸಿಡಿಸಿದ ಸಿಕ್ಸರ್​ನಿಂದ ನಾವು ಗೆಲುವು ಪಡೆಯಲು ಸಾಧ್ಯವಾಯಿತು ಎಂದಿದ್ದಾರೆ.

ತಮ್ಮ ಬ್ಯಾಟಿಂಗ್ ಬಗ್ಗೆ ಮಾತನಾಡಿರುವ ತೆವಾಟಿಯಾ, ನಾನು ಆಡಿದ ಮೊದಲ 20 ಎಸೆತಗಳಲ್ಲಿ ಕೆಟ್ಟ ಪ್ರದರ್ಶನ ನೀಡಿದ್ದೇನೆ, ನಾನು ನೆಟ್​ನಲ್ಲಿ ಚೆನ್ನಾಗಿ ಹೊಡೆಯುತ್ತಿದ್ದೆ. ಹಾಗಾಗಿ ನನ್ನ ಬಗ್ಗೆ ನನಗೆ ನಂಬಿಕೆ ಇತ್ತು. ನಾನು ಆರಂಭದಲ್ಲಿ ಉತ್ತಮ ಪ್ರದರ್ರಶನ ತೋರಲಿಲ್ಲ. ಅದರೆ ಡಗೌಟ್‌ನತ್ತ ನೋಡಿದೆ. ಎಲ್ಲರೂ ಕುತೂಹಲದಿಂದ ವೀಕ್ಷಿಸುತ್ತಿದ್ದರು. ಏಕೆಂದರೆ ನಾನು ಸಿಕ್ಸರ್​ ಹೊಡೆಯಬಹುದೆಂದು ಅವರಿಗೆ ತಿಳಿದಿತ್ತು. ಒಂದು ಸಿಕ್ಸರ್ ಬಾರಿಸುವವರೆಗೆ ಮಾತ್ರ ಕಷ್ಟವಾಯಿತು. ನಂತರ ಎಲ್ಲಾ ಸರಿ ಆಯಿತು ಎಂದಿದ್ದಾರೆ.

ಮೊದಲು ಬ್ಯಾಟಿಂಗ್ ನಡೆಸಿದ್ದ ಕಿಂಗ್ಸ್​ ಇಲವೆನ್ ಪಂಜಾಬ್​ ತಂಡ, ಮಯಾಂಕ್ ಅಗರ್​ವಾಲ್​(106) ಅವರ ಶತಕ ಹಾಗೂ ಕೆ.ಎಲ್.ರಾಹುಲ್(69)​ ಅವರ ಅರ್ಧಶತಕದ ನೆರವಿನಿಂದ 20 ಓವರ್​ಗಳಲ್ಲಿ 2 ವಿಕೆಟ್​ ಕಳೆದುಕೊಂಡು 223 ರನ್ ​ಗಳಿಸಿತ್ತು. 224 ರನ್​ಗಳ ಬೃಹತ್ ಮೊತ್ತ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್​ ತಂಡ 19.3 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 226 ರನ್​ ಗಳಿಸಿ ಐಪಿಎಲ್ ಇತಿಹಾಸದಲ್ಲಿ ಅಧಿಕ ಗುರಿ ಬೆನ್ನಟ್ಟಿದ ದಾಖಲೆ ಬರೆಯಿತು.

ABOUT THE AUTHOR

...view details