ಕರ್ನಾಟಕ

karnataka

ETV Bharat / sports

ಸ್ಯಾಮ್ಸ​ನ್​ ಟೀಂ ಇಂಡಿಯಾದ ಎಲ್ಲ ಪಾರ್ಮೆಟ್​ಗಳಲ್ಲೂ ಆಡಬೇಕು: ಶೇನ್ ವಾರ್ನ್ - ಐಪಿಎಲ್

ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಸ್ಯಾಮ್ಸನ್​​ ಅದ್ಭುತ ಪ್ರದರ್ಶನ ನೀಡಿ, ಚೆನ್ನೈ ತಂಡದ ಬೌಲರ್​ಗಳ ಬೆವರಿಳಿಸಿ, ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾಗಿದ್ದರು.

Shane Warne is 'surprised Samson is not playing in all formats for India'
ಶೇನ್ ವಾರ್ನ್ , ಸಂಜು ಸ್ಯಾಮ್ಸನ್

By

Published : Sep 27, 2020, 9:03 AM IST

ದುಬೈ: ಆಸ್ಟ್ರೇಲಿಯಾ ಕ್ರಿಕೆಟ್​ ದಂತಕಥೆ ಶೇನ್ ವಾರ್ನ್ ರಾಜಸ್ಥಾನ್ ರಾಯಲ್ಸ್ ಸ್ಟಾರ್ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಅವರನ್ನು ಶ್ಲಾಘಿಸಿದ್ದಾರೆ. ಮತ್ತು ಈ ಆಟಗಾರ ಟೀಮ್​ ಇಂಡಿಯಾದಲ್ಲಿ ಎಲ್ಲಾ ಪಾರ್ಮೆಟ್​ಗಳಲ್ಲಿ ಆಡುತ್ತಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಐಪಿಎಲ್​​-2020 ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಸ್ಯಾಮ್ಸನ್​​ ಅದ್ಭುತ ಪ್ರದರ್ಶನ ನೀಡಿ, ಚೆನ್ನೈ ತಂಡದ ಬೌಲರ್​ಗಳ ಬೆವರಿಳಿಸಿ, ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾಗಿದ್ದರು. ಈ ಪಂದ್ಯದಲ್ಲಿ ಸಂಜು 32 ಎಸೆತಗಳಲ್ಲಿ 74 ರನ್ ಗಳಿಸಿದ್ದರು. ಇದರಲ್ಲಿ ಒಂಬತ್ತು ಅದ್ಭುತ ಸಿಕ್ಸರ್‌ ಸಿಡಿಸಿದ್ದರು.

ಸ್ಯಾಮ್ಸನ್‌ "ಓರ್ವ ಪರಿಪೂರ್ಣ ಚಾಂಪಿಯನ್" ಅವನು ಮೂರು ಪಾರ್ಮೆಟ್​ ಗಳಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಬೇಕೆಂದು ನಾನು ಬಯಸುತ್ತೇನೆ ಎಂದು ವಾರ್ನ್ ಹೇಳಿದ್ದಾರೆ.

"ನಾನು ಬಹಳ ಹಿಂದಿನಿಂದ ಹೇಳಿದ್ದೇನೆ ಮತ್ತು ಸಂಜು ಸ್ಯಾಮ್ಸನ್ ನಾನು ಬಹಳ ಸಮಯದಿಂದ ನೋಡಿದ ರೋಚಕ ಆಟಗಾರರಲ್ಲಿ ಒಬ್ಬ. ಅವರು ಭಾರತ ತಂಡದಲ್ಲಿ ಎಲ್ಲಾ ರೀತಿಯ ಕ್ರಿಕೆಟ್ ಆಡುತ್ತಿಲ್ಲ ಎಂಬುದು ನನಗೆ ಆಶ್ಚರ್ಯವಾಗಿದೆ. ಈ ಬಾರಿ ರಾಜಸ್ಥಾನ್ ರಾಯಲ್ಸ್ ಐಪಿಎಲ್ ಟ್ರೋಫಿಯನ್ನು ಗೆಲ್ಲುವಲ್ಲಿ ಸಂಜು ಪ್ರಮುಖ ಪಾತ್ರವಹಿಸುತ್ತಾರೆ ಎಂದು ವಾರ್ನ್ ಭವಿಷ್ಯ ನುಡಿದಿದ್ದಾರೆ.

ಇಂದು ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್​ ಮಧ್ಯೆ ಪಂದ್ಯ ನಡೆಯಲಿದೆ.

ABOUT THE AUTHOR

...view details