ಮುಂಬೈ:ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಅತಿ ಹೆಚ್ಚು ವಿಕೆಟ್ ಪಡೆದುಕೊಂಡಿರುವ ಸ್ಟಾರ್ ಬೌಲರ್ ಲಸಿತ್ ಮಾಲಿಂಗ ಪ್ರಾಂಚೈಸಿ ಕ್ರಿಕೆಟ್ನಿಂದ ನಿವೃತ್ತಿ ಪಡೆದುಕೊಂಡಿದ್ದು, ಮುಂಬೈ ನಾಯಕ ರೋಹಿತ್ ಶರ್ಮಾ ಯಾರ್ಕರ್ ಕಿಂಗ್ ಲಸಿತ್ ಮಾಲಿಂಗ ಅವರನ್ನು ಉತ್ತಮ ಆಟಗಾರ ಎಂದು ಅಭಿನಂದಿಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಮಾಲಿಂಗ ಜೊತೆ ಇರುವ ಪೋಟೋ ಪೋಸ್ಟ್ ಮಾಡಿರುವ ರೋಹಿತ್ ಶರ್ಮಾ, ಮಾಲಿಂಗ ಉತ್ತಮ ಆಟಗಾರರಲ್ಲಿ ಒಬ್ಬರು, ಪ್ರಮುಖ ಮ್ಯಾಚ್ ವಿನ್ನರ್ ಕೂಡ ಹೌದು. ಅವರ ಉಪಸ್ಥಿತಿಯನ್ನು ತಂಡ ಕಳೆದುಕೊಳ್ಳಲಿದೆ ಎಂದು ಬರೆದುಕೊಂಡಿದ್ದಾರೆ.
ಲಸಿತ್ ಮಾಲಿಂಗ ಇನ್ಮುಂದೆ ಪ್ರಾಂಚೈಸಿ ಕ್ರಿಕೆಟ್ನಲ್ಲಿ ಭಾಗಿಯಾಗಲ್ಲ. ತಾವು ಅದರಿಂದ ನಿವೃತ್ತಿ ಪಡೆದುಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಕುಟುಂಬದೊಂದಿಗೆ ಚರ್ಚೆ ನಡೆಸಿದ ನಂತರ ಈ ನಿರ್ಧಾರ ಕೈಗೊಂಡಿದ್ದು, ಪ್ರಾಂಚೈಸಿ ಕ್ರಿಕೆಟ್ನಲ್ಲಿ ನಿವೃತ್ತಿ ಹೊಂದಲು ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ. ಸಾಂಕ್ರಾಮಿಕ ಪರಿಸ್ಥಿತಿ ಹಾಗೂ ಪ್ರಯಾಣದ ಮೇಲಿನ ನಿರ್ಬಂಧಗಳು ಹಾಗೂ ವೈಯಕ್ತಿಕ ವಿಷಯಗಳಿಂದಾಗಿ ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಜತೆಗೆ ಕಳೆದ ತಿಂಗಳ ಇದಕ್ಕೆ ಸಂಬಂಧಿಸಿದಂತೆ ತಾವು ಮುಂಬೈ ಇಂಡಿಯನ್ಸ್ ಪ್ರಾಂಚೈಸಿ ಜೊತೆ ಮಾತುಕತೆ ನಡೆಸಿದ್ದಾಗಿ ಹೇಳಿಕೊಂಡಿದ್ದಾರೆ. ಇದೇ ಕಾರಣಕ್ಕಾಗಿ ಮುಂಬೈ ಇಂಡಿಯನ್ಸ್ ಪ್ರಾಂಚೈಸಿ ಅವರನ್ನ ತಂಡದಿಂದ ಕೈಬಿಟ್ಟಿದೆ.
ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಮುಂಬೈ ಇಂಡಿಯನ್ಸ್ ಮಾಲೀಕ ಆಕಾಶ್ ಅಂಬಾನಿ, ಕಳೆದ 12 ವರ್ಷಗಳಿಂದ ಅವರು ನಮ್ಮ ತಂಡದ ಭಾಗವಾಗಿದ್ದರು. ಅವರು ತೆಗೆದುಕೊಂಡಿರುವ ನಿರ್ಧಾರವನ್ನ ನಾವು ಗೌರವಿಸುತ್ತೇವೆ. ಇನ್ನೂ ಐದು ವರ್ಷಗಳ ಕಾಲ ಅವರು ನಮ್ಮ ಬೌಲಿಂಗ್ ವಿಭಾಗದ ಪ್ರಮುಖ ಶಕ್ತಿಯಾಗಲು ನಾನು ಇಷ್ಟಪಡುತ್ತಿದೆ ಎಂದಿದ್ದಾರೆ.
ಈಗಾಗಲೇ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ಗೆ ಮಾಲಿಂಗ ನಿವೃತ್ತಿ ಘೋಷಣೆ ಮಾಡಿದ್ದು, ಟಿ-20 ಕ್ರಿಕೆಟ್ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದರು. ಐಪಿಎಲ್ನಲ್ಲಿ 122 ಪಂದ್ಯಗಳನ್ನಾಡಿ 170 ವಿಕೆಟ್ ಪಡೆದುಕೊಂಡಿದ್ದಾರೆ. ಇದರಲ್ಲಿ 13ರನ್ಗಳಿಗೆ 5 ವಿಕೆಟ್ ಪಡೆದಿರುವುದು ಅತ್ಯದ್ಭುತ ಸಾಧನೆಯಾಗಿದೆ.