ಕರ್ನಾಟಕ

karnataka

ETV Bharat / sports

ಬಾಂಗ್ಲಾ-ಲಂಕಾ ಟೂರ್ನಿ ಮುಂದೂಡಿಕೆ, ಐಪಿಎಲ್​ ಆಡದಿರುವುದಕ್ಕೆ ಮುಸ್ತುಫಿಜರ್​​ ವಿಷಾದ! - ಬಾಂಗ್ಲಾದೇಶದ ವೇಗದ ಬೌಲರ್​ ಮುಸ್ತುಫಿಜರ್​ ರೆಹಮಾನ್

ಪ್ರಸಕ್ತ ಸಾಲಿನ ಇಂಡಿಯನ್​​ ಪ್ರೀಮಿಯರ್​ ಲೀಗ್​​ನಲ್ಲಿ ಭಾಗಿಯಾಗದೇ ಇರುವುದಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ ವೇಗದ ಬೌಲರ್​ ವಿಷಾದ ವ್ಯಕ್ತಪಡಿಸಿದ್ದಾರೆ.

Mustafizur Rahman
Mustafizur Rahman

By

Published : Sep 30, 2020, 5:32 PM IST

ಢಾಕಾ: ಶ್ರೀಲಂಕಾ ವಿರುದ್ಧದ ಕ್ರಿಕೆಟ್​ ಸರಣಿ ಮುಂದೂಡಿಕೆ ಹಾಗೂ ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​​ನಿಂದ ಹೊರಗುಳಿದಿರುವುದಕ್ಕೆ ಬಾಂಗ್ಲಾದೇಶದ ವೇಗದ ಬೌಲರ್​ ಮುಸ್ತುಫಿಜರ್​ ರೆಹಮಾನ್​ ವಿಷಾದ ವ್ಯಕ್ತಪಡಿಸಿದ್ದಾರೆ.

ಬಾಂಗ್ಲಾ ವೇಗದ ಬೌಲರ್​​

ಮಹಾಮಾರಿ ಕೊರೊನಾ ವೈರಸ್​ ಕಾರಣಕ್ಕಾಗಿ ಉಭಯ ಕ್ರಿಕೆಟ್​ ಮಂಡಳಿಗಳು ಪ್ಲೇಯರ್ಸ್​ಗಳಿಗೆ 14 ದಿನಗಳ ಕಾಲ ಕ್ವಾರಂಟೈನ್​ ಮಾಡಲು ಒಪ್ಪಿಲ್ಲ. ಹೀಗಾಗಿ ಮುಂದಿನ ತಿಂಗಳಕ್ಕೆ ಟೂರ್ನಿ ಆಯೋಜನೆ ಮಾಡುವಂತೆ ಬಾಂಗ್ಲಾ ಕ್ರಿಕೆಟ್​ ಬೋರ್ಡ್​​​ ಅಧ್ಯಕ್ಷ ನಜ್ಮುಲ್ಲಾ ಹಸನ್​ ಲಂಕಾ ಮಂಡಳಿಗೆ ಮನವಿ ಮಾಡಿದ್ದಾರೆ.

ಬಾಂಗ್ಲಾ-ಲಂಕಾ ಟೂರ್ನಿ ಮುಂದೂಡಿಕೆ

ಮುಂಬೈ ಇಂಡಿಯನ್ಸ್​ ಹಾಗೂ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ಕೆಲ ಬೌಲರ್ಸ್​ ಟೂರ್ನಿಯಲ್ಲಿ ಭಾಗಿಯಾದ ಕಾರಣಕ್ಕಾಗಿ ಪ್ರಾಂಚೈಸಿಗಳು ಈ ವೇಗಿಗೆ ತಂಡ ಸೇರಿಕೊಳ್ಳುವಂತೆ ಸಂಪರ್ಕಿಸಿದ್ದವು. ಆದರೆ ಇದರಲ್ಲಿ ಭಾಗಿಯಾಗಲು ಮುಸ್ತುಫಿಜರ್​ ರೆಹಮಾನ್​ಗೆ ಅಲ್ಲಿನ ಕ್ರಿಕೆಟ್​ ಮಂಡಳಿ ನಿರಾಕ್ಷೇಪಣಾ ಪತ್ರ(ಎನ್​ಒಸಿ) ನೀಡಲು ನಿರಾಕರಿಸಿತ್ತು. ಇದೀಗ ಇದೇ ವಿಚಾರವಾಗಿ ಅವರು ವಿಷಾದ ವ್ಯಕ್ತಪಿಡಿಸಿದ್ದಾರೆ. ಇನ್ನು 2015-16ರಲ್ಲೂ ಪಾಕಿಸ್ತಾನ ಸೂಪರ್ ಲೀಗ್​ನಲ್ಲಿ ಭಾಗಿಯಾಗಲು ವೇಗದ ಬೌಲರ್​​ಗೆ ಬಾಂಗ್ಲಾ ಎನ್​ಒಸಿ ನೀಡಿರಲಿಲ್ಲ.

ABOUT THE AUTHOR

...view details