ಹೈದರಾಬಾದ್: ಲೇಟ್ ಆದ್ರೂ ಲೆಟೆಸ್ಟ್ ಎನ್ನುವಂತೆ ಐಪಿಎಲ್ ಕಿಕ್ ಶುರುವಾಗಿದ್ದು, ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗುತ್ತಿವೆ.
ವಿರಾಟ್ ಕೊಹ್ಲಿ ನೇತೃತ್ವದ ಆರ್ಸಿಬಿ ಮತ್ತು ಡೇವಿಡ್ ವಾರ್ನರ್ ನೇತೃತ್ವದ ಸನ್ ರೈಸರ್ಸ್ ತಂಡಗಳು ಬಲಿಷ್ಠ ಆಟಗಾರರನ್ನು ಹೊಂದಿದ್ದು, ಉಭಯ ತಂಡಗಳ ಮುಖಾಮುಖಿ ಅಭಿಮಾನಿಗಳಿಗೆ ಮತ್ತಷ್ಟು ಕಿಕ್ ಕೊಡಲಿದೆ.
ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಮನರಂಜಿಸುವ ತಂಡವಾಗಿರುವ ರಾಯಲ್ ಚಾಲಂಜರ್ಸ್, ಟ್ರೋಪಿ ವಿಚಾರದಲ್ಲಿ ದಕ್ಷಿಣ ಆಫ್ರಿಕಾಗಿಂತ ಹೆಚ್ಚು ಚೋಕರ್ಸ್ ಆಗಿದೆ. ಒಂದಲ್ಲ, ಎರಡಲ್ಲ ಮೂರು ಬಾರಿ ಫೈನಲ್ ಪ್ರವೇಶಿಸಿದರೂ ಪ್ರಶಸ್ತಿಗೆ ಮುತ್ತಿಡುವ ಸೌಭಾಗ್ಯ ಮಾತ್ರ ಇನ್ನೂ ಬೆಂಗಳೂರಿಗೆ ಸಿಕ್ಕಿಲ್ಲ. ಆದರೆ ಈ ಬಾರಿ ಉತ್ತಮ ತಂಡ ಸಂಯೋಜನೆಯಿಂದ ಯುದ್ಧಕ್ಕೆ ಸಿದ್ಧವಾಗಿರುವ ಕೊಹ್ಲಿ ಪಡೆ, ಚೊಚ್ಚಲ ಪ್ರಶಸ್ತಿಯನ್ನು ಎದುರು ನೋಡುತ್ತಿದೆ.