ಕರ್ನಾಟಕ

karnataka

ETV Bharat / sports

ಮೊದಲ ಬಾರಿ ಐಪಿಎಲ್ ಫೈನಲ್​ಗೆ ಅರ್ಹತೆ ಪಡೆದಿದ್ದು ಸಂತಸ ತಂದಿದೆ: ಶ್ರೇಯಸ್ ಅಯ್ಯರ್ - ಶ್ರೇಯಸ್ ಅಯ್ಯರ್ ಲೇಟೆಸ್ಟ್ ನ್ಯೂಸ್

ಮುಂಬೈ ವಿರುದ್ಧದ ಫೈನಲ್ ಪಂದ್ಯದಲ್ಲಿ ನಾವು ಮುಕ್ತವಾಗಿ ಆಡಲು ಸಮರ್ಥರಾಗಿದ್ದೇವೆ ಎಂದು ಡೆಲ್ಲಿ ತಂಡದ ನಾಯಕ ಶ್ರೇಯಸ್ ಅಯ್ಯರ್ ಹೇಳಿದ್ದಾರೆ.

Shreyas Iyer
ಶ್ರೇಯಸ್ ಅಯ್ಯರ್

By

Published : Nov 9, 2020, 11:23 AM IST

ಅಬುಧಾಬಿ: ಭಾನುವಾರ ನಡೆದ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ 17 ರನ್‌ಗಳಿಂದ ಸನ್‌ರೈಸರ್ಸ್ ತಂಡವನ್ನು ಮಣಿಸಿದ ಡೆಲ್ಲಿ ತಂಡ ಚೊಚ್ಚಲ ಬಾರಿಗೆ ಐಪಿಎಲ್ ಟೂರ್ನಿಯಲ್ಲಿ ಫೈನಲ್​ ಪ್ರವೇಶಿಸಿದೆ.

ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಶ್ರೇಯಸ್ ಅಯ್ಯರ್‌, "ಇದು ಈವರೆಗಿನ ಅತ್ಯುತ್ತಮ ಭಾವನೆ. ಇದೊಂದು ಮನೋರಂಜನಾ ಸವಾರಿ, ಭಾವನೆಗಳು ಹೆಚ್ಚು ಕಡಿಮೆ ಇರುತ್ತವೆ. ಆದ್ದರಿಂದ ನೀವು ಒಂದೇ ರೀತಿಯ ದಿನಚರಿ ಹೊಂದಲು ಸಾಧ್ಯವಿಲ್ಲ. ಮುಂದಿನ ಪಂದ್ಯದಲ್ಲೂ ಮುಂಬೈ ವಿರುದ್ಧ ನಾವು ಮುಕ್ತವಾಗಿ ಆಡಲು ಸಮರ್ಥರಾಗಿದ್ದೇವೆ" ಎಂದಿದ್ದಾರೆ.

"ನಾವು ಒಂದು ಕುಟುಂಬವಾಗಿ ಉತ್ತಮ ಪ್ರದರ್ಶನ ನೀಡಿದ್ದೇವೆ. ಪ್ರತಿಯೊಬ್ಬ ಆಟಗಾರನ ಪ್ರಯತ್ನದಿಂದ ತುಂಬಾ ಸಂತಸವಾಗಿದೆ. ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಯಿಂದ ಕೂಡ ಉತ್ತ ಬೆಂಬಲ ಪಡೆದಿದ್ದೇವೆ. ಇಂತಹ ತಂಡವನ್ನು ಹೊಂದಿರುವುದು ನಿಜಕ್ಕೂ ಅದೃಷ್ಟದ ವಿಷಯ" ಎಂದಿದ್ದಾರೆ.

ಅಬುಧಾಬಿಯಲ್ಲಿ ನಡೆದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್ ಮಾಡಿದ ಶ್ರೇಯಸ್ ಪಡೆ, ಶಿಖರ್ ಧವನ್​(78), ಹೆಟ್ಮೈರ್​ (42)ಹಾಗೂ ಸ್ಟೋಯ್ನಿಸ್​ ಅವರ (38) ಬ್ಯಾಟಿಂಗ್​ ನೆರವಿನಿಂದ 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 189 ರನ್​ಗಳಿಸಿತ್ತು

190 ರನ್​ಗಳ ಗುರಿ ಪಡೆದ ಹೈದರಾಬಾದ್​ ಕೇನ್ ವಿಲಿಯಮ್ಸನ್​ ಅವರ ಹೋರಾಟದ ಅರ್ಧಶತಕದ(67) ಹೊರತಾಗಿಯೂ 17 ರನ್​ಗಳಿಂದ ಸೋಲೊಪ್ಪಿಕೊಂಡಿತು. ಇತ್ತ ಬೌಲಿಂಗ್ ಮತ್ತು ಬ್ಯಾಟಿಂಗ್​ನಲ್ಲಿ ಮಿಂಚಿದ ಡೆಲ್ಲಿ 13ನೇ ಐಪಿಎಲ್​ನಲ್ಲಿ ಫೈನಲ್​ಗೆ ಅರ್ಹತೆಗಿಟ್ಟಿಸಿತು.

ABOUT THE AUTHOR

...view details