ದುಬೈ: ಮಂಗಳವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ವಿಂಡೀಸ್ ಆಟಗಾರ ನಿಕೋಲಸ್ ಪೂರನ್ ಅವರನ್ನು ಭಾರತ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಶ್ಲಾಘಿಸಿದ್ದಾರೆ.
ಟೂರ್ನಿಯ ಆರಂಭದಿಂದಲೂ ಉತ್ತಮ ಫಾರ್ಮ್ನಲ್ಲಿರುವ ಪೂರನ್ ಸ್ಫೋಟಕ ಆಟವಾಡಿದ್ದಾರೆ. ನಿನ್ನೆ ನಡೆದ ಪಂದ್ಯದಲ್ಲಿ ಡೆಲ್ಲಿ ಬೌಲರ್ಗಳನ್ನು ದಂಡಿಸಿದ ಪೂರನ್, 28 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ಗಳ ನೆರವಿನಿಂದ 53 ರನ್ ಸಿಡಿಸಿ ಪಂಜಾಬ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ರು.
ನಿಕೋಲಸ್ ಪೂರನ್ ಬ್ಯಾಟಿಂಗ್ ಬಗ್ಗೆ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿರುವ ಸಚಿನ್ ತೆಂಡೂಲ್ಕರ್, "ನಿಕೋಲಸ್ ಪೂರನ್ ಅವರಿಂದ ಪವರ್ ಪ್ಯಾಕ್ ಹೊಡೆತಗಳು. ಅವರು ಚೆಂಡಿನ ಕ್ಲೀನ್ ಸ್ಟ್ರೈಕರ್ ಆಗಿದ್ದರು. ಅವರ ನಿಲುವು ಮತ್ತು ಬ್ಯಾಕ್ಲಿಫ್ಟ್ ನನಗೆ ಜೆಪಿ ಡುಮಿನಿ ಆಟ ನೆನಪಿಸುತ್ತದೆ" ಎಂದಿದ್ದಾರೆ.
ಜೆಪಿ ಡುಮಿನಿ, ದಕ್ಷಿಣ ಆಫ್ರಿಕಾ ಕ್ರಿಕೆಟಿಗ
ಪೂರನ್ ಟೂರ್ನಿಯಲ್ಲಿ 10 ಇನ್ನಿಂಗ್ಸ್ಗಳಲ್ಲಿ 21 ಬೌಂಡರಿ ಮತ್ತು 22 ಸಿಕ್ಸರ್ಗಳ ನೆರವಿನಿಂದ 180ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್ನಲ್ಲಿ 295 ರನ್ ಸಿಡಿಸಿದ್ದಾರೆ.
ಸತತ ಆರು ಸೋಲುಗಳನ್ನು ಅನುಭವಿಸಿದ ಕಿಂಗ್ಸ್ ಇಲೆವೆನ್ ಮತ್ತೆ ಗೆಲುವಿನ ಹಾದಿಗೆ ಮರಳಿದೆ. ಪ್ರಸ್ತುತ 10 ಪಂದ್ಯಗಳಲ್ಲಿ ನಾಲ್ಕರಲ್ಲಿ ಜಯ ಗಳಿಸಿ ಪಾಯಿಂಟ್ ಟೇಬಲ್‌ನಲ್ಲಿ ಐದನೇ ಸ್ಥಾನದಲ್ಲಿದೆ. ಮುಂದಿನ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಾಡಲಿದೆ.