ಕರ್ನಾಟಕ

karnataka

ETV Bharat / sports

ಎಬಿಡಿ, ವಿರಾಟ್​ ಕೊಹ್ಲಿಯನ್ನು ಐಪಿಎಲ್​ನಿಂದ ಬ್ಯಾನ್​ ಮಾಡಬೇಕು: ಕೆ.ಎಲ್.ರಾಹುಲ್​​ - ವಿರಾಟ್ ಎಬಿಡಿ ಬ್ಯಾನ್ ಮಾಡಿ ಎಂದು ರಾಹುಲ್

ವಿರಾಟ್ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್ ಅವರನ್ನು ಐಪಿಎಲ್​ನಿಂದ ಬ್ಯಾನ್ ಮಾಡಬೇಕು ಎಂದು ಕನ್ನಡಿಗ ಕೆ.ಎಲ್.ರಾಹುಲ್ ಹೇಳಿದ್ದಾರೆ.

Rahul wants IPL organisers to ban Virat Kohli and AB de Villiers
ಎಬಿಡಿ, ವಿರಾಟ್​ ಕೊಹ್ಲಿ

By

Published : Oct 15, 2020, 10:34 AM IST

ಹೈದರಾಬಾದ್:ಆರ್​ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ವಿಕೆಟ್ ಕೀಪರ್ ಎಬಿ ಡಿ ವಿಲಿಯರ್ಸ್​ ಅವರನ್ನು ಐಪಿಎಲ್​ನಿಂದ ಬ್ಯಾನ್​ ಮಾಡುವಂತೆ ಮನವಿ ಮಾಡುವೆ ಎಂದು ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡದ ನಾಯಕ ಕೆ.ಎಲ್.ರಾಹುಲ್ ಹೇಳಿದ್ದಾರೆ.

ಪುಮಾ ಇಂಡಿಯಾಗಾಗಿ ಇನ್​ಸ್ಟಾಗ್ರಾಂ​ನಲ್ಲಿ ರಾಹುಲ್ ಮತ್ತು ವಿರಾಟ್ ಕೊಹ್ಲಿ ಲೈವ್​ ಚಾಟ್ ನಡೆಸಿದ್ದು, ಈ ವೇಳೆ ರಾಹುಲ್ ಇಂತಹದ್ದೊಂದು ಆಸೆಯನ್ನು ಕೊಹ್ಲಿ ಮುಂದಿಟ್ಟಿದ್ದಾರೆ.

ಲೈವ್​ ಚಾಟ್​ ವೇಳೆ ಅಭಿಮಾನಿಗಳು ಕೇಳಿದ ಪ್ರಶ್ನೆಯನ್ನು ವಿರಾಟ್, ರಾಹುಲ್​ ಮುಂದಿಡುತ್ತಿದ್ದರು. ಈ ವೇಳೆ ಐಪಿಎಲ್​ನಲ್ಲಿ ನಿಮಗೆ ಅನುಕೂಲವಾಗುವಂತಹ ಒಂದು ನಿಯಮ ಬದಲಾವಣೆ ಮಾಡುವಂತಹ ಅವಕಾಶ ನೀಡಿದರೆ ನೀವು ಏನ್ನನ್ನು ಬಯಸುತ್ತೀರಿ ಎಂದು ಅಭಿಮಾನಿ ಕೇಳಿದ ಪ್ರಶ್ನೆಯನ್ನು ವಿರಾಟ್, ರಾಹುಲ್ ಮುಂದಿಟ್ಟರು.

ನಗು ನಗುತ್ತಲೆ ಪ್ರತಿಕ್ರಿಯೆ ನೀಡಿದ ರಾಹುಲ್, ಎಬಿಡಿ ಮತ್ತು ವಿರಾಟ್ ಕೊಹ್ಲಿಯನ್ನು ಐಪಿಎಲ್​ನಿಂದ ಬ್ಯಾನ್​ ಮಾಡಿ ಎಂದು ಮನವಿ ಮಾಡುವೆ ಎಂದಿದ್ದಾರೆ. ಈಗಾಗಲೇ ಟೂರ್ನಿಯಲ್ಲಿ ನೀವು ಸಾಕಷ್ಟು ದಾಖಲೆ ಬರೆದಿದ್ದೀರಾ. 5 ಸಾವಿರಕ್ಕೂ ಅಧಿಕ ರನ್ ಗಳಿಸಿದ್ದೀರಿ. ಉಳಿದ ಯುವ ಆಟಗಾರರರಿಗೂ ಅವಕಾಶ ಸಿಗಲಿ ಎಂದಿದ್ದಾರೆ.

ಇದೇ ಸಂಭಾಷಣೆ ವೇಳೆ ಇಂದಿನ ಪಂದ್ಯದ ಬಗ್ಗೆ ವಿರಾಟ್ ಪ್ರಶ್ನೆ ಮಾಡಿದಾಗ ಇದಕ್ಕೆ ಉತ್ತರಿಸಿದ ರಾಹುಲ್, ನಾವು ಟೂರ್ನಿಯಲ್ಲಿ ಗೆದ್ದಿರುವುದು ಆರ್​ಸಿಬಿ ವಿರುದ್ಧ ಮಾತ್ರ. ಇಂದಿನ ಪಂದ್ಯದಲ್ಲಿ ನಿಮ್ಮ ಫೀಲ್ಡರ್​ಗಳು ಒಂದೆರಡು ಕ್ಯಾಚ್ ಬಿಟ್ಟರೆ ಉತ್ತಮವಾಗಿರುತ್ತದೆ ಎಂದು ಕಳೆದ ಪಂದ್ಯದಲ್ಲಿ ಕೊಹ್ಲಿ 2 ಕ್ಯಾಚ್​ ಕೈಬಿಟ್ಟ ಘಟನೆಯನ್ನು ನೆನಪಿಸಿದ್ದಾರೆ.

ABOUT THE AUTHOR

...view details