ಹೈದರಾಬಾದ್: ಎಲಿಮಿನೇಟರ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಎದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋತು ಪ್ರಸಕ್ತ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದೆ. ಈ ಮೂಲಕ ಈ ಸಲವೂ ಕಪ್ ಆರ್ಸಿಬಿ ಅಭಿಮಾನಿಗಳದ್ದಾಗಿಲ್ಲ.
ಅಂದುಕೊಂಡಂತೆ ಆಗ್ಲಿಲ್ಲ, ಆದ್ರೆ ಅದ್ಭುತ ಜರ್ನಿ: ಪಂದ್ಯ ಸೋತ ಬಳಿಕ ಕೊಹ್ಲಿ ಟ್ವಿಟ್ - ಐಪಿಎಲ್ 2020 ಪ್ಲೇ ಆಫ್ ರೇಸ್ ಅಪ್ಡೇಟ್
ಪಂದ್ಯ ಸೋತ ಬಳಿಕ ನಾಯಕ ವಿರಾಟ್ ಕೊಹ್ಲಿ ಟ್ವಿಟ್ ಮಾಡಿ, ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಪಂದ್ಯ ಸೋತ ಬಳಿಕ ನಾಯಕ ವಿರಾಟ್ ಕೊಹ್ಲಿ ಟ್ವೀಟ್ ಮಾಡಿ, ಧನ್ಯವಾದ ತಿಳಿಸಿದ್ದಾರೆ. 'ಏರಿಳಿತಗಳಲ್ಲೂ ಒಂದಾಗಿದ್ದೇವು. ಒಂದು ತಂಡವಾಗಿ ಇದು ನಮಗೆ ಅದ್ಭುತ ಜರ್ನಿ. ಹೌದು, ನಾವು ಅಂದುಕೊಂಡಂತೆ ಆಗ್ಲಿಲ್ಲ. ಆದ್ರೆ ಇಡೀ ತಂಡದ ಬಗ್ಗೆ ಹೆಮ್ಮೆ ಇದೆ. ನಮಗೆ ಬೆಂಬಲ ನೀಡಿದ ಎಲ್ಲ ಅಭಿಮಾನಿಗಳಿಗೆ ಧನ್ಯವಾದಗಳು. ನಿಮ್ಮ ಪ್ರೀತಿ ನಮ್ಮನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ. ಸದ್ಯದಲ್ಲೇ ನಿಮ್ಮೆಲ್ಲರನ್ನೂ ನೋಡುತ್ತೇನೆ' ಎಂದು ವಿರಾಟ್ ಟ್ವೀಟ್ ಮಾಡಿದ್ದಾರೆ.
ಹೈದರಾಬಾದ್ ತಂಡದ ವಿರುದ್ಧ ಸೋಲನುಭವಿಸುವ ಮೂಲಕ ಐಪಿಎಲ್ನಿಂದ ಆರ್ಸಿಬಿ ಹೊರಬಿದ್ದಿದ್ದು, ಅಭಿಮಾನಿಗಳು ನಿರಾಶೆ ಅನುಭವಿಸಿದ್ದಾರೆ.