ಕರ್ನಾಟಕ

karnataka

ETV Bharat / sports

ಐಪಿಎಲ್​ನಿಂದಲೂ ಧೋನಿ ನಿವೃತ್ತಿ ಪಡೆದುಕೊಳ್ತಾರಾ...? ಟ್ವೀಟರ್​​ನಲ್ಲಿ ಇಂತಹದ್ದೊಂದು ಚರ್ಚೆ! - ಐಪಿಎಲ್​ನಲ್ಲಿ ಎಂಎಸ್​ ಧೋನಿ

ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಮಹೇಂದ್ರ ಸಿಂಗ್​ ಧೋನಿ ನೇತೃತ್ವದ ಚೆನ್ನೈ ತಂಡ ಕಳಪೆ ಪ್ರದರ್ಶನ ನೀಡಿದ್ದು, ಧೋನಿ ಕೂಡ ಬ್ಯಾಟಿಂಗ್​ನಲ್ಲಿ ಅಬ್ಬರಿಸುತ್ತಿಲ್ಲ.

MS Dhoni
MS Dhoni

By

Published : Oct 24, 2020, 5:05 PM IST

ಹೈದರಾಬಾದ್​:ಟೀಂ ಇಂಡಿಯಾ ಕ್ಯಾಪ್ಟನ್​ ಆಗಿ ಯಶಸ್ಸು ಕಂಡಿದ್ದ ಮಹೇಂದ್ರ ಸಿಂಗ್​ ಧೋನಿ ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲೂ ಅಷ್ಟೇ ಸಕ್ಸಸ್ ಕಂಡಿದ್ದಾರೆ. ಆದರೆ ದುಬೈನಲ್ಲಿ ನಡೆಯುತ್ತಿರುವ ಇಂಡಿಯನ್​​ ಪ್ರೀಮಿಯರ್​ ಲೀಗ್​ನಲ್ಲಿ ಧೋನಿ ನೇತೃತ್ವದ ಸಿಎಸ್​ಕೆ ತಂಡ ಕಳಪೆ ಪ್ರದರ್ಶನ ನೀಡಿದ್ದು, ಈಗಾಗಲೇ ನಾಕ್​ಔಟ್​ ಹಂತದಿಂದ ಹೊರಬಿದ್ದಿದೆ.

ಇದರ ಮಧ್ಯೆ ಮಹೇಂದ್ರ ಸಿಂಗ್​ ಧೋನಿ ಇಂಡಿಯನ್​ ಪ್ರೀಮಿಯರ್ ಲೀಗ್​ನಿಂದಲೂ ನಿವೃತ್ತಿ ಪಡೆದುಕೊಳ್ಳುತ್ತಾರೆ ಎಂಬ ಚರ್ಚೆ ಆರಂಭಗೊಂಡಿದೆ. ಧೋನಿ ಹಾಕಿಕೊಳ್ಳುತ್ತಿದ್ದ ನಂ.7 ಜರ್ಸಿ ಮುಂಬೈ ಇಂಡಿಯನ್ಸ್​ ತಂಡದ ಪಾಂಡ್ಯ ಸಹೋದರರಾದ ಕೃನಾಲ್​ ಹಾಗೂ ಹಾರ್ದಿಕ್​ ಪಾಂಡ್ಯಗೆ ಉಡುಗೊರೆಯಾಗಿ ನೀಡಿದ ಬಳಿಕ ಇಂತಹದೊಂದು ಚರ್ಚೆ ಆರಂಭವಾಗಿದೆ.

ನಿನ್ನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್​ ಕಿಂಗ್ಸ್ ಹೀನಾಯ ಸೋಲು ಕಂಡಿದೆ. ಚೆನ್ನೈ ಸೂಪರ್​ ಕಿಂಗ್ಸ್​ ತನ್ನ ಅಧಿಕೃತ ಅಕೌಂಟ್​ನಲ್ಲಿ ಧೋನಿ ಪಾಂಡ್ಯ ಬ್ರದರ್ಸ್​ಗೆ ಜರ್ಸಿ ನೀಡುತ್ತಿರುವ ಫೋಟೋ ಹಂಚಿಕೊಂಡಿದೆ.

200ನೇ ಐಪಿಎಲ್​ ಪಂದ್ಯವನ್ನಾಡಿದ್ದ ಮಹೇಂದ್ರ ಸಿಂಗ್​ ಧೋನಿ ತಾವು ಹಾಕಿಕೊಂಡಿದ್ದ ಜರ್ಸಿಯನ್ನ ರಾಜಸ್ಥಾನ್ ರಾಯಲ್ಸ್​​ ತಂಡದ ಸ್ಟಾರ್​ ವಿಕೆಟ್​ ಕೀಪರ್​ ಜೋಸ್​ ಬಟ್ಲರ್​ಗೆ ನೀಡಿದ್ದರು. ಆದರೆ ಇದೀಗ ತಾವು ಹಾಕಿಕೊಳ್ಳುತ್ತಿದ್ದ ನಂ.7 ಜರ್ಸಿ ಪಾಂಡ್ಯ ಬ್ರದರ್ಸ್​ಗೆ ನೀಡಿದ್ದಾರೆ. ಇದೀಗ ಮುಂದಿನ ಪಂದ್ಯಗಳಲ್ಲಿ ಧೋನಿ ತಂಡವನ್ನ ಮುನ್ನಡೆಸುತ್ತಾರೋ ಇಲ್ವೋ ಎಂಬ ಗುಸುಗುಸು ಶುರುವಾಗಿದೆ.

ABOUT THE AUTHOR

...view details