ಕರ್ನಾಟಕ

karnataka

ETV Bharat / sports

ಹೈದರಾಬಾದ್ ಎದುರು ಸೋತ ಆರ್​ಸಿಬಿ: ಐಪಿಎಲ್​ನಿಂದ ಔಟ್ - ಐಪಿಎಲ್ 2020 ಪ್ಲೇ ಆಫ್ ರೇಸ್ ಅಪ್ಡೇಟ್

ಹೈದರಾಬಾದ್ ಎದುರು ಶರಣಾದ ಆರ್​ಸಿಬಿ ಐಪಿಎಲ್​ನಿಂದ ಹೊರಬಿದ್ದಿದೆ. ಕೊಹ್ಲಿ ಪಡೆ ಈ ಸಲವೂ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

RCB
ಆರ್​ಸಿಬಿ

By

Published : Nov 6, 2020, 11:17 PM IST

Updated : Nov 7, 2020, 8:24 AM IST

ಅಬುಧಾಬಿ: ಐಪಿಎಲ್​ನ ಎಲಿಮಿನೇಟರ್​ ಪಂದ್ಯದಲ್ಲಿ ವಿರಾಟ್ ನಾಯಕತ್ವದ ಆರ್​ಸಿಬಿ ತಂಡವನ್ನು ವಾರ್ನರ್ ಪಡೆ 6 ವಿಕೆಟ್​ಗಳ ಅಂತರದಿಂದ ಸೋಲಿಸಿದೆ. ಈ ಮೂಲಕ ಪ್ರಸಕ್ತ ಐಪಿಎಲ್​​ನಲ್ಲಿ ಆರ್​​ಸಿಬಿಯ ಆಟ ಕೊನೆಯಾಗಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್​ಸಿಬಿ ಎದುರಾಳಿ ತಂಡಕ್ಕೆ 132 ರನ್​ಗಳ ಸಾಧಾರಣ ಗುರಿ ನೀಡಿತ್ತು. ಹೈದರಾಬಾದ್ ತಂಡ 19.4 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.

ದೇವದತ್​ ಪಡಿಕ್ಕಲ್​ ಜೊತೆ ಇನ್ನಿಂಗ್ಸ್ ಆರಂಭಿಸಿದ ವಿರಾಟ್​ ಕೊಹ್ಲಿ ಕೇವಲ 6 ರನ್ ​ಗಳಿಸಿ ವಿಕೆಟ್​ ಒಪ್ಪಿಸಿದರು. ಇದರ ಬೆನ್ನಲ್ಲೇ ಪಡಿಕ್ಕಲ್ ಕೂಡ ಕೇವಲ 1 ರನ್​ ಗಳಿಸಿ ಜೇಸನ್ ಹೋಲ್ಡರ್​ಗೆ ವಿಕೆಟ್​ ಒಪ್ಪಿಸಿದರು. ಪವರ್​ ಫ್ಲೇ ಮುಕ್ತಾಯದ ವೇಳೆಗೆ ಆರ್​ಸಿಬಿ 2 ವಿಕೆಟ್ ಕಳೆದುಕೊಂಡು ಕೇವಲ 32 ರನ್ ​ಗಳಿಕೆ ಮಾಡಿತ್ತು. ಬಳಿಕ ಒಂದಾದ ಫಿಂಚ್ ಹಾಗೂ ಡಿವಿಲಿಯರ್ಸ್​ ತಂಡಕ್ಕೆ ಚೇತರಿಕೆ ನೀಡುವ ಯತ್ನ ಮಾಡಿದ್ದರಿಂದ 10 ಓವರ್​ಗಳಲ್ಲಿ 2 ವಿಕೆಟ್​ ಕಳೆದುಕೊಂಡು 54 ರನ್​ ಗಳಿಸಿತ್ತು. ಆದರೆ 32 ರನ್ ​ಬಾರಿಸಿದ್ದ ಫಿಂಚ್​ ನದೀಂ ಓವರ್​ನಲ್ಲಿ ವಿಕೆಟ್​ ಒಪ್ಪಿಸಿದರು. ಇದರ ಬೆನ್ನಲ್ಲೇ ಮೊಯಿನ್ ಅಲಿ ರನೌಟ್​ ಬಲೆಗೆ ಬಿದ್ದರೆ, ಶಿವಂ ದುಬೆ 5 ರನ್​ ಗಳಿಕೆ ಮಾಡಿದ್ದ ವೇಳೆ ಕ್ಯಾಚ್​ ನೀಡಿ ನಿರ್ಗಮಿಸಿದರು.

ಬಳಿಕ ಬಂದ ವಾಷಿಂಗ್ಟನ್​ ಸುಂದರ್ ​​5 ರನ್ ​ಗಳಿಸಿ ಕ್ಯಾಚ್ ನೀಡಿದರು. 56 ರನ್ ​ಬಾರಿಸಿ ಉತ್ತಮವಾಗಿ ಆಡುತ್ತಿದ್ದ ಎಬಿಡಿ, ನಟರಾಜನ್​ ಓವರ್​ನಲ್ಲಿ ವಿಕೆಟ್​ ಒಪ್ಪಿಸಿದ್ದರು. ಕೊನೆಯದಾಗಿ ಸಿರಾಜ್​ ಅಜೇಯ 10 ರನ್​ ಹಾಗೂ ಸೈನಿ​ 9 ರನ್ ಗಳಿಸಿದರು. ಅಂತಿಮವಾಗಿ 20 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 131 ರನ್​ ಗಳಿಸಿದ ಆರ್​ಸಿಬಿ, ಹೈದರಾಬಾದ್​ಗೆ​ 13 2ರನ್​ಗಳ ಗೆಲುವಿನ​ ಗುರಿ ನೀಡಿತ್ತು. ಹೈದರಾಬಾದ್​ ತಂಡದ ಪರ ಹೋಲ್ಡರ್​ 3 ವಿಕೆಟ್​​, ನಟರಾಜನ್​ 2 ಹಾಗೂ ನದೀಂ 1 ವಿಕೆಟ್​ ಪಡೆದುಕೊಂಡರು.

ಟಾರ್ಗೆಟ್ ಬೆನ್ನತ್ತಿದ್ದ ಹೈದರಾಬಾದ್ ಕೂಡ ಆರಂಭಿಕ ಆಘಾತ ಅನುಭವಿಸಿತು. ಶ್ರೀವತ್ಸ್ ಗೋಸ್ವಾಮಿ ಸೊನ್ನೆ ಸುತ್ತಿದರು. ಬಳಿಕ ವಾರ್ನರ್ ಜೊತೆಯಾದ ಮನೀಷ್ ಪಾಂಡೆ ತಂಡದ ಮೊತ್ತವನ್ನು ನಿಧಾನವಾಗಿ ಏರಿಸಿದರು. ವಾರ್ನರ್ 17 ರನ್ ಗಳಿಸಿದ್ದಾಗ ಸಿರಾಜ್ ಬೌಲಿಂಗ್​ನಲ್ಲಿ ಕ್ಯಾಚಿತ್ತರು. ಈ ಬೆನ್ನಲ್ಲೇ ಪಾಂಡೆ 24 ರನ್ ಗಳಿಸಿದ್ದಾಗ ಜಂಪಾ ಬೌಲಿಂಗ್​ನಲ್ಲಿ ಔಟಾದರು. 55 ರನ್​ಗೆ 4 ವಿಕೆಟ್ ಕಳೆದುಕೊಂಡಿದ್ದ ಹೈದರಾಬಾದ್ ತಂಡಕ್ಕೆ ಆಸರೆಯಾದ ಕೇನ್​ ವಿಲಿಯಮ್ಸನ್​​ ಅಜೇಯ 50 ರನ್ ಪೇರಿಸಿ, ಗೆಲುವಿನ ದಡ ಸೇರಿಸಿದರು. ಜಾಸನ್ ಹೋಲ್ಡರ್ 24 ರನ್ ಪೇರಿಸಿ ಕೇನ್​ಗೆ ಉತ್ತಮ ಸಾಥ್ ನೀಡಿದರು.

ಅರ್ಧ ಶತಕ ಸಿಡಿಸಿದ ವಿಲಿಯಮ್ಸನ್​ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

Last Updated : Nov 7, 2020, 8:24 AM IST

For All Latest Updates

ABOUT THE AUTHOR

...view details