ಅಬುಧಾಬಿ: ಸೂರ್ಯಕುಮಾರ್ ಯಾದವ್, ಅವಕಾಶ ನೀಡಿದರೆ ಮುಂಬೈ ಇಂಡಿಯನ್ಸ್ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ.
ನಿನ್ನೆ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಮೂರನೇ ಸ್ಥಾನದಲ್ಲಿ ಕಣಕ್ಕಿಳಿದ ಸೂರ್ಯಕುಮಾರ್ ನಿರ್ಣಾಯಕ ಆಟ ಆಡಿದ್ರು. 28 ಎಸೆತಗಳಲ್ಲಿ 6 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 47 ರನ್ ಸಿಡಿಸಿದ್ರು.
30 ವರ್ಷದ ಸೂರ್ಯಕುಮಾರ್ ಮುಂಬೈ ಇಂಡಿಯನ್ಸ್‌ನ ಬ್ಯಾಟಿಂಗ್ ಯುನಿಟ್ನ ಕೀ ಪ್ಲೇಯರ್ ಆಗಿದ್ದಾರೆ. ಈ ಹಿಂದೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 11 ಮತ್ತು 12ನೇ ಆವೃತ್ತಿಯಲ್ಲಿ ಮುಂಬೈ ಪರ ಇನ್ನಿಂಗ್ಸ್ ಆರಂಭಿಸಿದ್ರು.
"ಇದು ನಿಜಕ್ಕೂ ಸಂಪೂರ್ಣವಾಗಿ ತಂಡದ ನಿರ್ವಹಣಾ ಕರೆ. ಕಳೆದ ಎರಡು ವರ್ಷಗಳಲ್ಲಿ ನಾನು ಮುಂಬೈ ಇಂಡಿಯನ್ಸ್ ಪರ ಓಪನಿಂಗ್ ಇಷ್ಟಪಟ್ಟೆ. ಅವರು ನನಗೆ ಅವಕಾಶ ನೀಡಿದಾಗಲೆಲ್ಲಾ ನಾನು ಅದನ್ನು ಪ್ರೀತಿಸುತ್ತೇನೆ" ಎಂದು ಸುದ್ದಿಗೋಷ್ಠಿಯಲ್ಲಿ ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.