ದುಬೈ: ಇಂದು ಮಧ್ಯಾಹ್ನ ನಡೆಯುವ ಐಪಿಎಲ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿ ಆಗಲಿವೆ.
ಸತತ ನಾಲ್ಕು ಪಂದ್ಯಗಳನ್ನು ಸೋತು ನಿರಾಸೆ ಅನುಭವಿಸಿರುವ ಸ್ಮಿತ್ ಪಡೆ ಆಡಿರುವ 6 ಪಂದ್ಯಗಳಲ್ಲಿ 2 ರಲ್ಲಿ ಮಾತ್ರ ಜಯ ಸಾಧಿಸಿದೆ. ಇತ್ತ ಹೈದರಾಬಾದ್ ತಂಡ 6 ಪಂದ್ಯಗಳ ಪೈಕಿ 3ರಲ್ಲಿ ಜಯ ಸಾಧಿಸಿದ್ರೆ, 3 ಪಂದ್ಯಗಳಲ್ಲಿ ಸೋಲುಕಂಡಿದೆ.
ರಾಯಲ್ಸ್ಗೆ ಬ್ಯಾಟಿಂಗ್ ತಲೆನೋವು:
ಸ್ಫೋಟಕ ಆಟಗಾರಿರುವ ರಾಜಸ್ಥಾನ ತಂಡಕ್ಕೆ ನಾಯಕ ಸ್ಮಿತ್ ಸೇರಿದಂತೆ ಎಲ್ಲಾ ಬ್ಯಾಟ್ಸ್ಮನ್ಗಳು ವೈಫಲ್ಯ ಅನುಭವಿಸುತ್ತಿರುವುದು ಹಿನ್ನಡೆಗೆ ಕಾರಣವಾಗಿದೆ. ಆರಂಭದ ಪಂದ್ಯಗಳಲ್ಲಿ ಅಬ್ಬರಿಸಿದ್ದ ಸಂಜು ಸಾಮ್ಸನ್ ಸದ್ದು ಮಾಡುತ್ತಿಲ್ಲ. ಕಳೆದ ಪಂದ್ಯದಲ್ಲಿ ಬಟ್ಲರ್ ನಿರಾಸೆ ಅನುಭವಿಸಿದ್ದರು. ಯುವ ಆಟಗಾರ ಯಶಸ್ವಿ ಜೈಸ್ವಾಲ್ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ಬೌಲಿಂಗ್ನಲ್ಲಿ ಜೋಫ್ರಾ ಆರ್ಚರ್, ರಾಹುಲ್ ತೆವಾಟಿಯಾ, ಕಾರ್ತಿಕ್ ತ್ಯಾಗಿ ಉತ್ತಮ ಸ್ಪೆಲ್ ಮಾಡುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಆಂಡ್ರ್ಯೂ ಟೈ ಕೊಂಚ ದುಬಾರಿಯಾಗಿದ್ದರು.
ಹೈದರಾಬಾದ್ ತಂಡದ ಆರಂಭಿಕ ಆಟಗಾರರಾದ ಬೈರ್ ಸ್ಟೋವ್ ಮತ್ತು ನಾಯಕ ವಾರ್ನರ್ ಲಯಕ್ಕೆ ಮರಳಿರುವುದು ತಂಡದ ಶಕ್ತಿ ಹೆಚ್ಚಿಸಿದೆ. ಆದರೆ ಕೇನ್ ವಿಲಿಯಮ್ಸನ್ ಹೊರತುಪಡಿಸಿ ಮಧ್ಯಮ ಕ್ರಮಾಕದ ಆಟಗಾರರು ಕಳೆದ 2 ಪಂದ್ಯಗಳಿಂದ ತಂಡಕ್ಕೆ ಆಸರೆಯಾಗದಿರುವುದು ಕೊಂಚ ಹಿನ್ನಡೆಯಾಗಿದೆ.
ಸನ್ರೈಸರ್ಸ್ ಹೈದರಾಬಾದ್ ತಂಡ ಮನೀಷ್ ಪಾಂಡೆ, ಅಭಿಷೇಕ್ ವರ್ಮಾ, ಪ್ರಿಯಂ ಗರ್ಗ್ ಯಾವಾಗ ಬೇಕಿದ್ದರೂ ಸಿಡಿದೇಳುವ ಸಾಮರ್ಥ್ಯ ಹೊಂದಿದ್ದಾರೆ. ಹೈದರಾಬಾದ್ ಬೌಲರ್ಗಳು ಕಳೆದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ್ರು, ಕೇವಲ 138 ರನ್ಗಳಿಗೆ ಪಂಜಾಬ್ ಆಟಗಾರರನ್ನು ಕಟ್ಟಿಹಾಕಿದ್ದರು. ನಟರಾಜನ್ ಮತ್ತು ರಶೀದ್ ಖಾನ್, ಖಲೀಲ್ ಅಹ್ಮದ್ ಉತ್ತಮ ಸ್ಪೆಲ್ ಮಾಡಿದ್ರು.
ಹೈದರಾಬಾದ್ vs ರಾಜಸ್ಥಾನ ಫೈಟ್ ಉಭಯ ತಂಡಗಳು ಇಲ್ಲಿಯವರೆಗೆ 11 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 6 ಪಂದ್ಯಗಳಲ್ಲಿ ಹೈದರಾಬಾದ್ ತಂಡ ಗೆಲುವು ಕಂಡಿದ್ರೆ, 5 ಪಂದ್ಯಗಳಲ್ಲಿ ರಾಜಸ್ಥಾನ ತಂಡ ಜಯ ಸಾಧಿಸಿದೆ.