ಕರ್ನಾಟಕ

karnataka

ETV Bharat / sports

ಸ್ಟೋಕ್ಸ್-ಸಾಮ್ಸನ್ ಜೊತೆಯಾಟ ಅದ್ಭುತವಾಗಿತ್ತು: ಸ್ಟೀವ್ ಸ್ಮಿತ್

ಸ್ಟೋಕ್ಸ್ ಮತ್ತು ಸಂಜು ಸಾಮ್ಸನ್ ಜೊತೆಯಾಟ ಅದ್ಭುತವಾಗಿತ್ತು. ಈ ಪಂದ್ಯದಿಂದ ನಮ್ಮ ತಂಡದ ಆಟಗಾರರ ಆತ್ಮವಿಶ್ವಾಸ ಹೆಚ್ಚಾಗಿದ್ದು, ಮುಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರುತ್ತೇವೆ ಎಂದು ರಾಜಸ್ಥಾನ ತಂಡದ ನಾಯಕ ಸ್ಟೀವ್ ಸ್ಮಿತ್ ಹೇಳಿದ್ದಾರೆ.

By

Published : Oct 26, 2020, 9:18 AM IST

Updated : Oct 26, 2020, 9:29 AM IST

Stokes and Sanju were sensational
ಸ್ಟೋಕ್ಸ್-ಸಾಮ್ಸನ್

ಅಬುಧಾಬಿ:ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದ್ದು, ಬೆನ್ ಸ್ಟೋಕ್ಸ್ ಮತ್ತು ಸಂಜು ಸಾಮ್ಸನ್ ನಡುವಿನ ಜೊತೆಯಾಟ "ಅದ್ಭುತ" ಎಂದು ರಾಜಸ್ಥಾನ ತಂಡದ ನಾಯಕ ಸ್ಟೀವ್ ಸ್ಮಿತ್ ಹೇಳಿದ್ದಾರೆ.

ಮೊದಲು ಬ್ಯಾಟಿಂಗ್ ನಡೆಸಿದ್ದ ಮುಂಬೈ ಇಂಡಿಯನ್ಸ್ ತಂಡ 195 ರನ್ ​ಗಳಿಸಿತ್ತು. 196 ರನ್​ಗಳ ಗುರಿ ಪಡೆದಿದ್ದ ರಾಜಸ್ಥಾನ ತಂಡ ಇನ್ನೂ 10 ಎಸೆತಗಳಿರುವಂತೆ ಗುರಿ ತಲುಪುವ ಮೂಲಕ ಅಮೋಘ ಜಯ ಸಾಧಿಸಿತು. ಸ್ಟೋಕ್ಸ್ ಮತ್ತು ಸಾಮ್ಸನ್ ಇವರಿಬ್ಬರು ಎರಡನೇ ವಿಕೆಟ್‌ಗೆ ಅಜೇಯ 152 ರನ್ ಕಲೆಹಾಕಿದ್ರು.

ಬೆನ್ ಸ್ಟೋಕ್ಸ್, ಸಂಜು ಸಾಮ್ಸನ್

ಪಂದ್ಯ ಮುಗಿದ ಬಳಿಕ ಮಾತನಾಡಿದ ರಾಜಸ್ಥಾನ ತಂಡದ ನಾಯಕ ಸ್ಟೀವ್ ಸ್ಮಿತ್, "ತುಂಬಾ ಸಂತಸವಾಯಿತು. ಇದಕ್ಕಾಗಿಯೇ ನಾವು ಕಾಯುತ್ತಿದ್ದೆವು. ನಮ್ಮ ಇಬ್ಬರು ಅನುಭವಿ ಆಟಗಾರರು ಇಂದು ಉತ್ತಮ ಪ್ರದರ್ಶನ ತೋರಿದ್ರು. ನಾನು ಯೋಚಿಸಿದಂತೆಯೇ ಆಡಿದ ರೀತಿ ಅದ್ಭುತವಾಗಿತ್ತು. ಅವರ ಪ್ರದರ್ಶನದಿಂದ ತುಂಬಾ ಸಂತೋಷವಾಗಿದೆ" ಎಂದಿದ್ದಾರೆ.

"ಸ್ಟೋಕ್ಸ್ ಮತ್ತು ಸಂಜು ಸಾಮ್ಸನ್ ಜೊತೆಯಾಟ ಅದ್ಭುತವಾಗಿತ್ತು. ಈ ಪಂದ್ಯದಿಂದ ನಮ್ಮ ತಂಡದ ಆಟಗಾರರ ಆತ್ಮವಿಶ್ವಾಸ ಹೆಚ್ಚಾಗಿದ್ದು, ಮುಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರುತ್ತೇವೆ" ಎಂದಿದ್ದಾರೆ.

ಸ್ಟೀವ್ ಸ್ಮಿತ್

ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ತೋರಿಸಿದ ಬೆನ್​ ಸ್ಟೋಕ್ಸ್​ 60 ಎಸೆತಗಳಲ್ಲಿ 14 ಬೌಂಡರಿ ಹಾಗೂ 3 ಸಿಕ್ಸರ್​ ಸಹಿತ ಅಜೇಯ 107 ರನ್ ​ಗಳಿಸಿದರೆ, ಇವರಿಗೆ ಉತ್ತಮ ಬೆಂಬಲ ನೀಡಿದ ಸಂಜು ಸಾಮ್ಸನ್ 31 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್​ಗಳ ಸಹಿತ 54 ರನ್ ​ಗಳಿಸಿ ಗೆಲುವಿನ ರೂವಾರಿಯಾದರು.

Last Updated : Oct 26, 2020, 9:29 AM IST

ABOUT THE AUTHOR

...view details