ಕರ್ನಾಟಕ

karnataka

ETV Bharat / sports

ಇವ್ರೇ ನೋಡಿ 'ವಿಶ್ವದ ಅತ್ಯುತ್ತಮ ಟಿ-20 ವೇಗದ ಬೌಲರ್'.. ಭಾರತೀಯ ವೇಗಿ ಬಗ್ಗೆ ಶೇನ್ ಬಾಂಡ್ ಮೆಚ್ಚುಗೆ - ವಿಶ್ವದ ಅತ್ಯುತ್ತಮ ಟಿ-20 ವೇಗದ ಬೌಲರ್

ಈ ಬಾರಿಯ ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ವೇಗಿ ಜಸ್ಪ್ರಿತ್ ಬೂಮ್ರಾ ಮೊದಲನೇ ಕ್ವಾಲಿಫೈಯರ್‌ನಲ್ಲಿ 4 ವಿಕೆಟ್ ಕಿತ್ತು ಡೆಲ್ಲಿ ಕ್ಯಾಪಿಟಲ್ಸ್‌ನ ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾದರು. ಈ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ತನ್ನ ಮುಡಿಗೇರಿಸಿಕೊಂಡಿದ್ದಾರೆ..

IPL 2020: Shane Bond terms Bumrah 'best T20 fast bowler in the world'
ಶೇನ್ ಬಾಂಡ್ ಹಾಗೂ ವೇಗಿ ಜಸ್ಪ್ರಿತ್ ಬೂಮ್ರಾ (ಸಂಗ್ರಹ ಚಿತ್ರ)

By

Published : Nov 6, 2020, 6:10 PM IST

ದುಬೈ:ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಬಲಿಷ್ಠ ಬ್ಯಾಟ್ಸ್​ಮ್ಯಾನ್​ಗಳ ವಿಕೆಟ್​ ಪಡೆಯುವ ಮೂಲಕ ತಂಡಕ್ಕೆ ಆಘಾತ ನೀಡುತ್ತಿರುವ ಭಾರತದ ವೇಗಿ ಜಸ್ಪ್ರಿತ್ ಬೂಮ್ರಾ ಬಗ್ಗೆ ಮುಂಬೈ ಇಂಡಿಯನ್ಸ್​ ತಂಡದ ಬೌಲಿಂಗ್ ಕೋಚ್ ಆಗಿರುವ ಶೇನ್ ಬಾಂಡ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಅತೀ ಹೆಚ್ಚು ಟ್ರೋಫಿಗಳನ್ನು ಗೆದ್ದಿರುವ ಬಲಿಷ್ಠ ಫ್ರಾಂಚೈಸಿ ಮುಂಬೈ ಇಂಡಿಯನ್ಸ್​ನಲ್ಲಿ ವೇಗಿ ಜಸ್ಪ್ರಿತ್ ಬೂಮ್ರಾ ಪ್ರಮುಖ ಆಟಗಾರರೆನಿಸಿದ್ದು, ತಂಡದ ಬೌಲಿಂಗ್ ಕೋಚ್ ಆಗಿರುವ ಶೇನ್ ಬಾಂಡ್, ಬೂಮ್ರಾ "ವಿಶ್ವದ ಅತ್ಯುತ್ತಮ ಟಿ-20 ವೇಗದ ಬೌಲರ್" ಎಂದು ಹೇಳಿದ್ದಾರೆ.

ವೇಗಿ ಜಸ್ಪ್ರಿತ್ ಬೂಮ್ರಾ (ಸಂಗ್ರಹ ಚಿತ್ರ)

ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಕ್ವಾಲಿಫೈಯರ್​ನ​​ ಮೊದಲ ಘಟ್ಟದಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡವನ್ನು 57 ರನ್‌ಗಳಿಂದ ಸೋಲಿಸಿದ ಮುಂಬೈ ಇಂಡಿಯನ್ಸ್ ತಂಡ, ಈ ಸಾಲಿನ ಪ್ರೀಮಿಯರ್ ಲೀಗ್​ನ (ಐಪಿಎಲ್) ಫೈನಲ್​ಗೆ ಪ್ರವೇಶ ಮಾಡಿತು.

ಈ ಬಾರಿಯ ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ವೇಗಿ ಜಸ್ಪ್ರಿತ್ ಬೂಮ್ರಾ ಮೊದಲನೇ ಕ್ವಾಲಿಫೈಯರ್‌ನಲ್ಲಿ 4 ವಿಕೆಟ್ ಕಿತ್ತು ಡೆಲ್ಲಿ ಕ್ಯಾಪಿಟಲ್ಸ್‌ನ ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾದರು. ಈ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ತನ್ನ ಮುಡಿಗೇರಿಸಿಕೊಂಡಿದ್ದಾರೆ.

ನಾಲ್ಕು ಓವರ್‌ಗಳಲ್ಲಿ ಬುಮ್ರಾ ಕೇವಲ 14 ರನ್​ ನೀಡಿದ್ದಲ್ಲದೇ, 16ನೇ ಓವರ್‌ನಲ್ಲಿ ಯಾವುದೇ ರನ್​ ನೀಡದೇ(ಮೇಡನ್) ಡಬಲ್​ ವಿಕೆಟ್​ ಪಡೆದರು.

ಜಸ್ಪ್ರಿತ್ ಬೌಲಿಂಗ್​ ನೋಡುವುದೇ ಒಂದು ಭಾಗ್ಯ ಎಂದಿರುವ ಶೇನ್ ಬಾಂಡ್, ವಿಶ್ವದ ಅತ್ಯುತ್ತಮ ಟಿ-20 ವೇಗದ ಬೌಲರ್​​ ಎಂದು ಮುಂಬೈ ಇಂಡಿಯನ್ಸ್ ಟ್ವಿಟರ್​ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡುವ ಮೂಲಕ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಇದೇ ವೇಳೆ ತಂಡದ ಮತ್ತೊಬ್ಬ ವೇಗಿ ಟ್ರೆಂಟ್ ಬೌಲ್ಟ್ ಬೌಲಿಂಗ್​ ಬಗ್ಗೆ ಮಾತನಾಡಿರುವ ಶೇನ್ ಬಾಂಡ್, ಅವರೊಂದಿಗಿನ ಒಡನಾಡವನ್ನು ವಿವರಿಸಿದ್ದಾರೆ. 2012ರಿಂದ ಅವರೊಂದಿಗೆ ನಾನು ಕೆಲಸ ಮಾಡಿರುವೆ. ಅವರ ಮಾರಕ ಬೌಲಿಂಗ್​ ದಾಳಿ ಹಾಗೂ ಎದುರಾಳಿ ತಂಡದ ರನ್​ಗಳಿಗೆ ಕಡಿವಾಣ ಹಾಕುವುದನ್ನು ನೋಡಿಯೇ ನಮ್ಮ ತಂಡದಲ್ಲಿ ಸೇರಿಸಿಕೊಳ್ಳುವುದಕ್ಕೆ ನಾನು ತುಂಬಾ ಉತ್ಸುಕನಾಗಿದ್ದೆ ಎಂದು ಬಾಂಡ್ ಟ್ರೆಂಟ್ ಬೌಲ್ಟ್ ಅವರನ್ನು ಹೊಗಳಿದ್ದಾರೆ.

ಶೇನ್ ಬಾಂಡ್ ಹಾಗೂ ವೇಗಿ ಜಸ್ಪ್ರಿತ್ ಬೂಮ್ರಾ (ಸಂಗ್ರಹ ಚಿತ್ರ)

ಇನ್ನು, ಬುಮ್ರಾ ಐಪಿಎಲ್ 2020ಯಲ್ಲಿ ಪ್ರಸ್ತುತ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದು ಪರ್ಪಲ್ ಕ್ಯಾಪ್ ಪಡೆದಿದ್ದಾರೆ. 14 ಪಂದ್ಯಗಳಲ್ಲಿ 27 ವಿಕೆಟ್ ಪಡೆಯುವ ಮೂಲಕ ಡೆಲ್ಲಿ ಬೌಲರ್ ಕಗಿಸೋ ರಬಾಡ (25) ರನ್ನು ಹಿಂದಿಕ್ಕಿದ್ದಾರೆ.

ಕಳೆದ ಪಂದ್ಯದಲ್ಲಿ ಅದ್ಭುತ ಬೌಲಿಂಗ್‌ ಮಾಡಿದ್ದ ಟ್ರೆಂಟ್‌ ಬೌಲ್ಟ್ ಗಾಯಕ್ಕೆ ತುತ್ತಾಗಿದ್ದು ನ. 10 ರಂದು ನಡೆಯಲಿರುವ ಫೈನಲ್‌ ಹಣಾಹಣಿಗೆ ಬೌಲ್ಟ್‌ ಲಭ್ಯರಾಗುವುದು ಅನುಮಾನ ಎನ್ನಲಾಗುತ್ತಿದೆ.

ABOUT THE AUTHOR

...view details