ಕರ್ನಾಟಕ

karnataka

By

Published : Oct 25, 2020, 11:23 AM IST

ETV Bharat / sports

ಅಬುಧಾಬಿಯಲ್ಲಿ ರಾಜಸ್ಥಾನ-ಮುಂಬೈ ಮುಖಾಮುಖಿ: ರಾಯಲ್ಸ್​ಗೆ ನಿರ್ಣಾಯಕ ಪಂದ್ಯ

ಅಬುಧಾಬಿಯಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್​​ನ 45ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಸೆಣಸಾಡಲಿವೆ.

RR keen to brighten playoff chances vs Mumbai
ರಾಜಸ್ಥಾನ-ಮುಂಬೈ ಮುಖಾಮುಖಿ

ಅಬುಧಾಬಿ: ಇಂದು ನಡೆಯಲಿರುವ ದ್ವಿತೀಯ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿದ್ದು, ರಾಜಸ್ಥಾನ ತಂಡಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.

ಮುಂಬೈ ತಂಡ ಇಲ್ಲಿಯವರೆಗೆ ಒಟ್ಟು 10 ಪಂದ್ಯಗಳನ್ನಾಡಿದ್ದು, 7 ಪಂದ್ಯಗಳಲ್ಲಿ ಗೆಲುವು ಕಂಡಿದ್ರೆ, 3 ಪಂದ್ಯಗಳಲ್ಲಿ ಸೋತಿದೆ. ಇತ್ತ ರಾಜಸ್ಥಾನ ತಂಡ ಆಡಿರುವ 11 ಪಂದ್ಯಗಳ ಪೈಕಿ 4 ಪಂದ್ಯ ಜಯಿಸಿದ್ರೆ, 7ರಲ್ಲಿ ಸೋಲು ಕಂಡಿದೆ.

ಬ್ಯಾಟಿಂಗ್ ವೈಫಲ್ಯದಿಂದಾಗಿ ರಾಜಸ್ಥಾನ ತಂಡ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ತೋರುತ್ತಿದೆ. ಆರಂಭಿಕರಾಗಿ ಕಣಕ್ಕಿಳಿಯುತ್ತಿರುವ ಸ್ಟೋಕ್ಸ್ ಮತ್ತು ಉತ್ತಪ್ಪ ಉತ್ತಮ ಬಿಗ್​ ಸ್ಕೋರ್ ಕಲೆಹಾಕುತ್ತಿಲ್ಲ. ಇತ್ತ ಸಾಮ್ಸನ್​ ಪೈಫಲ್ಯ ದೊಡ್ಡ ಹಿನ್ನಡೆಯಾಗಿದೆ. ನಾಯಕ ಸ್ಟೀವ್ ಸ್ಮಿತ್ ಮತ್ತು ಬಟ್ಲರ್​ ಕೆಲ ಪಂದ್ಯಗಳಲ್ಲಿ ಮಿಂಚಿದ್ದಾರೆ.

ರಾಜಸ್ಥಾನ ರಾಯಲ್ಸ್

ಬೌಲಿಂಗ್​ನಲ್ಲಿ ರಾಯಲ್ಸ್ ಉತ್ತಮ ಪ್ರದರ್ಶನ ತೋರಿದೆ ಜೋಫ್ರಾ ಆರ್ಚರ್​, ಶ್ರೇಯಸ್ ಗೋಪಾಲ್, ರಾಹುಲ್ ತೆವಾಟಿಯಾ, ಕಾರ್ತಿಕ್ ತ್ಯಾಗಿ ಉತ್ತಮವಾಗಿ ಸ್ಪೆಲ್ ಮಾಡುತ್ತಿದ್ದಾರೆ.

ರೋಹಿತ್ ಶರ್ಮಾ ನಾಯಕತ್ವದ ಮುಂಬೈ ತಂಡ ಬ್ಯಾಟಿಂಗ್, ಬೌಲಿಂಗ್​ ಎರಡರಲ್ಲೂ ಬಲಿಷ್ಠವಾಗಿದೆ. ಬಹುತೇಕ ಬ್ಯಾಟ್ಸ್‌ಮನ್‌ಗಳು ಉತ್ತಮ ಫಾರ್ಮ್‌ನಲ್ಲಿದ್ದು, ತಂಡಕ್ಕೆ ನೆರವಾಗುತ್ತಿದ್ದಾರೆ. ಡಿ ಕಾಕ್, ರೋಹಿತ್, ಸೂರ್ಯಕುಮಾರ್ ಯಾದವ್, ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್ ಮುಂಬೈನ ಬ್ಯಾಟಿಂಗ್ ಬಲ.

ಮುಂಬೈ ಇಂಡಿಯನ್ಸ್

ಬೌಲಿಂಗ್​ನಲ್ಲೂ ಮುಂಬೈ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಯಾರ್ಕರ್‌ ಸ್ಪೆಷಲಿಸ್ಟ್‌ ಬುಮ್ರಾ, ಟ್ರೆಂಟ್‌ ಬೌಲ್ಟ್, ಜೇಮ್ಸ್‌ ಪ್ಯಾಟಿನ್ಸನ್‌, ರಾಹುಲ್‌ ಚಹಾರ್‌ ಅದ್ಭುತವಾಗಿ ಸ್ಪೆಲ್​ ಮಾಡುತ್ತಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ಮುಂಬೈ ಮತ್ತು ರಾಜಸ್ಥಾನ್ ತಂಡ ಇಲ್ಲಿಯವರೆಗೆ 21 ಬಾರಿ ಮುಖಾಮುಖಿಯಾಗಿದ್ದು, ಮುಂಬೈ 12 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ರೆ, ರಾಜಸ್ಥಾನ್ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

ABOUT THE AUTHOR

...view details