ನವದೆಹಲಿ: ಕಿಂಗ್ಸ್ ಇಲೆವೆನ್ ಪಂಜಾಬ್ (ಕೆಎಕ್ಸ್‌ಐಪಿ) ಪ್ಲೇ ಆಫ್‌ನಲ್ಲಿ ಸ್ಥಾನ ಗಳಿಸಲು ಸಾಧ್ಯವಾಗದಿರಬಹುದು. ಆದರೆ, ತಂಡದ ನಾಯಕ ಕೆ.ಎಲ್. ರಾಹುಲ್ ಆರೆಂಜ್ ಕ್ಯಾಪ್ ಹಿಡಿದಿಟ್ಟುಕೊಳ್ಳುವುದರ ಜೊತೆಗೆ, ಈ ಐಪಿಎಲ್ನಲ್ಲಿ ವಿಕೆಟ್‌ಗಳ ನಡುವಿನ ಗರಿಷ್ಠ ಅಂತರವನ್ನು ಕ್ರಮಿಸುವಲ್ಲಿ ವಿಶಿಷ್ಟತೆ ತೋರಿಸಿದ್ದಾರೆ.
ಕಿಂಗ್ಸ್ ಪಂಜಾಬ್ ನಾಯಕ ತನ್ನ 670 ರನ್‌ಗಳಲ್ಲಿ 300 ರನ್‌ಗಳನ್ನು ಸಿಂಗಲ್ಸ್, ಟೂ'ಸ್ ಅಥವಾ ತ್ರೀ'ಸ್ ಓಡುವ ಮೂಲಕ ಗಳಿಸಿದ್ದಾರೆ. ಜೊತೆಗೆ ತಮ್ಮ ತಂಡದ ಸ್ಕೋರ್‌ಗೆ 278 ರನ್‌ಗಳನ್ನು ಸೇರಿಸಲು ನಾನ್ - ಸ್ಟ್ರೈಕರ್ ತುದಿಯಿಂದ ಓಡಿದ್ದಾರೆ.
ಈ ಮೂಲಕ ಯುಎಇಯ ಮೂರು ಮೈದಾನಗಳಲ್ಲಿ ಈ ವರ್ಷ 22 ಗಜಗಳಷ್ಟು ದೂರ ಓಡಿ ರಾಹುಲ್ 578 ರನ್ ಗಳಿಸಿದಂತಾಗಿದೆ. ಈ ರೀತಿ, ವಿಕೆಟ್‌ಗಳ ನಡುವೆ ಓಡುವಾಗ ರಾಹುಲ್ ಅಂದಾಜು 12,716 ಮೀಟರ್ ಅಥವಾ 11.62 ಕಿಲೋಮೀಟರ್ ಕ್ರಮಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ.