ಕರ್ನಾಟಕ

karnataka

ETV Bharat / sports

ಐಪಿಎಲ್ 2020.. ಮೂರು ತಂಡಗಳ ಭವಿಷ್ಯ ಇಂದಿನ ಎರಡು ಪಂದ್ಯಗಳಲ್ಲಿ ನಿರ್ಧಾರ! - ಐಪಿಎಲ್ ಪ್ಲೇ ಆಫ್​ ಸ್ಥಾನಕ್ಕೆ ಪೈಪೋಟಿ

ಮೊದಲ ಪಂದ್ಯದಲ್ಲಿ ಏನಾದ್ರೂ ಪಂಜಾಬ್‌ ಸೋತರೆ ಟೂರ್ನಿಯಿಂದ ಹೊರಬೀಳಲಿದೆ. ಈಗಾಗಲೇ ಕೋಲ್ಕತ್ತಾದ ಪ್ಲೇ-ಆಫ್​ ಆಸೆಗೆ ಅಡ್ಡಗಾಲು ಹಾಕಿದ್ದ ಸಿಎಸ್​ಕೆ ಇಂದಿನ ಪಂದ್ಯದಲ್ಲಿ ರಾಹುಲ್ ಪಡೆಯನ್ನು ಸೋಲಿಸಿ ಗೆಲುವಿನೊಂದಿಗೆ ಐಪಿಎಲ್ ಅಭಿಯಾನ ಮುಗಿಸುವ ಯೋಜನೆಯಲ್ಲಿದೆ..

IPL 2020 playoffs qualification scenario of three teams
ಮೂರು ತಂಡಗಳ ಭವಿಷ್ಯ ಇಂದಿನ ಎರಡು ಪಂದ್ಯಗಳಲ್ಲಿ ನಿರ್ಧಾರ

By

Published : Nov 1, 2020, 1:42 PM IST

ದುಬೈ: 2020ರ ಇಂಡಿಯನ್ ಪ್ರೀಮಿಯರ್ ಲೀಗ್​ನ ಕಡೆಯ ಪಂದ್ಯಗಳನ್ನ ಅಡಲು ನಾಲ್ಕು ತಂಡಗಳು ಸಿದ್ಧವಾಗಿವೆ. ಈ ಪೈಕಿ ಮೂರು ತಂಡಗಳ ಮುಂದಿನ ಭವಿಷ್ಯ ನಿರ್ಧಾರವಾಗಲಿದೆ.

ಮೊದಲ ಪಂದ್ಯದಲ್ಲಿ ಪಂಜಾಬ್ ಮತ್ತು ಚೆನ್ನೈ ತಂಡ ಮುಖಾಮುಖಿಯಾದ್ರೆ, ಎರಡನೇ ಪಂದ್ಯದಲ್ಲಿ ಕೋಲ್ಕತ್ತಾ ಮತ್ತು ರಾಜಸ್ಥಾನ ತಂಡಗಳು ಸೆಣೆಸಾಡಲಿವೆ. ಚೆನ್ನೈ ಹೊರತುಪಡಿಸಿದ್ರೆ ಪಂಜಾಬ್‌, ಕೆಕೆಆರ್‌, ರಾಜಸ್ಥಾನ ತಂಡಗಳು12 ಅಂಕ ಹೊಂದಿದ್ದು, ಪ್ಲೇ-ಆಫ್​ ಸ್ಥಾನದ ಮೇಲೆ ಕಣ್ಣಿಟ್ಟಿವೆ.

ಕಿಂಗ್ಸ್ ಇಲೆವೆನ್ ಪಂಜಾಬ್

ಮೊದಲ ಪಂದ್ಯದಲ್ಲಿ ಪಂಜಾಬ್‌ ಜಯಿಸಿದ್ರೆ ಇನ್ನೊಂದರಲ್ಲಿ ರಾಜಸ್ಥಾನ ಅಥವಾ ಕೆಕೆಆರ್‌ ಗೆದ್ದರೆ ಆಗ ಎರಡು ತಂಡಗಳ ಅಂಕ 14ಕ್ಕೆ ಏರುತ್ತದೆ. ಆಗ ಉತ್ತಮ ರನ್‌ರೇಟ್‌ ಹೊಂದಿರುವವರು ಪ್ಲೇ-ಆಫ್​ಗೇರುವ ಅವಕಾಶ ಗಿಟ್ಟಿಸಿಕೊಳ್ಳಲಿದ್ದಾರೆ. ಆದರೆ, ಇಂದು ಯಾವ ತಂಡಕ್ಕೂ ಪ್ಲೇ-ಆಫ್​ ಸ್ಥಾನ ಖಚಿತವಾಗುವುದಿಲ್ಲ. ಇತರ ತಂಡಗಳ ಫಲಿ​ತಾಂಶ​ಕ್ಕಾಗಿ ಕಾಯ​ಬೇ​ಕಾ​ಗು​ತ್ತದೆ.

ಕೋಲ್ಕತ್ತಾ ನೈಟ್ ರೈಡರ್ಸ್

ಮೊದಲ ಪಂದ್ಯದಲ್ಲಿ ಏನಾದ್ರೂ ಪಂಜಾಬ್‌ ಸೋತರೆ ಟೂರ್ನಿಯಿಂದ ಹೊರಬೀಳಲಿದೆ. ಈಗಾಗಲೇ ಕೋಲ್ಕತ್ತಾದ ಪ್ಲೇ-ಆಫ್​ ಆಸೆಗೆ ಅಡ್ಡಗಾಲು ಹಾಕಿದ್ದ ಸಿಎಸ್​ಕೆ ಇಂದಿನ ಪಂದ್ಯದಲ್ಲಿ ರಾಹುಲ್ ಪಡೆಯನ್ನು ಸೋಲಿಸಿ ಗೆಲುವಿನೊಂದಿಗೆ ಐಪಿಎಲ್ ಅಭಿಯಾನ ಮುಗಿಸುವ ಯೋಜನೆಯಲ್ಲಿದೆ.

ರಾಜಸ್ಥಾನ ರಾಯಲ್ಸ್

ABOUT THE AUTHOR

...view details