ಅಬುಧಾಬಿ :ನಿನ್ನೆ ನಡೆದ ಕೆಕೆಆರ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಪಂದ್ಯದಲ್ಲಿ ಕೆಕೆಆರ್ ತಂಡ ಏಳು ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಈ ಬಾರಿಯ ಐಪಿಎಲ್ ಸೀಸನ್ನ ಮೊದಲ ಗೆಲುವು ಪಡೆದಿದೆ.
ಈ ಗೆಲುವಿನ ಬಗ್ಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ರಮುಖ ಬೌಲರ್ ಪ್ಯಾಟ್ ಕಮ್ಮಿನ್ಸ್ ತಂಡದ ಎಲ್ಲಾ ಬೌಲರ್‌ಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಎಲ್ಲಾ ಬೌಲರ್‌ಗಳ ಸಾಧನೆ ಅದ್ಭುತವಾಗಿತ್ತು ಎಂದು ಹೇಳಿದ್ದಾರೆ.
"ನಾವು ಮೊದಲ ಗೆಲುವು ಸಾಧಿಸಿದ ನಂತರ ತಂಡದಲ್ಲಿ ಉತ್ತಮ ಭಾವನೆ ಮೂಡಿದೆ. ಪಂದ್ಯಕ್ಕೆ ಒಂದು ದಿನ ಮೊದಲು ನಾನು ಉತ್ತಮ ತರಬೇತಿ ಪಡೆದಿದ್ದೆ. ಬೌಲಿಂಗ್ ಲಯವು ಉತ್ತಮವಾಗಿದೆ ಮತ್ತು ಕಳೆದ ಕೆಲವು ದಿನಗಳಿಂದ, ತರಬೇತುದಾರರು ಮತ್ತು ದಿನೇಶ್ ಕಾರ್ತಿಕ್ ನಡುವಿನ ಮಾತುಕತೆ ಸಕಾರಾತ್ಮಕವಾಗಿದೆ ಎಂದಿದ್ದಾರೆ.
"ವಾರ್ನರ್ ಮತ್ತು ಜಾನಿ ಬೈರ್‌ಸ್ಟೋವ್ ಉತ್ತಮ ಆಟಗಾರರು, ಅವರನ್ನು ಔಟ್ ಮಾಡುವುದು ಕಷ್ಟ. ಅದೃಷ್ಟವಶಾತ್, ನನಗೆ ಜಾನಿ ಬೈರ್‌ಸ್ಟೋವ್ ವಿಕೆಟ್ ಸಿಕ್ಕಿತು. ಇದರಿಂದ ಕಡಿಮೆ ಮೊತ್ತಕ್ಕೆ ತಂಡವನ್ನು ಕಟ್ಟಿಹಾಕಲು ಸಹಕಾರಿಯಾಯಿತು. ನಮ್ಮ ತಂಡದ ಎಲ್ಲಾ ಬೌಲರ್‌ಗಳ ಸಾಧನೆ ಅದ್ಭುತವಾಗಿತ್ತು " ಎಂದು ಅವರು ಹೇಳಿದ್ದಾರೆ.
ಈ ಪಂದ್ಯದಲ್ಲಿ ಪ್ಯಾಟ್ ಕಮ್ಮಿನ್ಸ್ ನಾಲ್ಕು ಓವರ್‌ಗಳಲ್ಲಿ 19 ರನ್ ನೀಡಿ ಒಂದು ವಿಕೆಟ್ ಪಡೆದು ಮಿಂಚಿದರು. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕಳಪೆ ಪ್ರದರ್ಶನ ನೀಡಿದ್ದ ಕಮ್ಮಿನ್ಸ್ ಮೂರು ಓವರ್‌ಗಳಲ್ಲಿ 49 ರನ್ ಬಿಟ್ಟುಕೊಟ್ಟಿದ್ದರು.