ಅಬುಧಾಬಿ: ಐಪಿಎಲ್ನಲ್ಲಿಂದು ರಾಜಸ್ಥಾನ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿವೆ. ಆಡಿದ ಐದು ಪಂದ್ಯಗಳಲ್ಲಿ ಮುಂಬೈ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಎರಡು ಪಂದ್ಯಗಳಲ್ಲಿ ಸೋಲನುಭವಿಸಿದೆ. ಇನ್ನೊಂದೆಡೆ ರಾಜಸ್ಥಾನ ರಾಯಲ್ಸ್ ಆರಂಭದಲ್ಲಿ ಅಬ್ಬರದ ಗೆಲುವು ಸಾಧಿಸಿದರೂ ನಂತರ ನೀರಸ ಪ್ರದರ್ಶನದ ಮೂಲಕ ಸೋಲು ಕಂಡಿದೆ.
ಇತ್ತ ಟೀಂಗಳ ಬಲಾಬಲವನ್ನು ನೋಡುವುದಾದರೆ, ಮುಂಬೈ ಇಂಡಿಯನ್ಸ್ ತಂಡದಲ್ಲಿ ಬಹುತೇಕ ಬ್ಯಾಟ್ಸ್‌ಮನ್‌ಗಳು ಉತ್ತಮ ಫಾರ್ಮ್‌ನಲ್ಲಿದ್ದು, ತಂಡಕ್ಕೆ ನೆರವಾಗುತ್ತಿದ್ದಾರೆ. ಅಲ್ಲದೆ ಬೌಲಿಂಗ್ ವಿಭಾಗದಲ್ಲೂ ಮುಂಬೈ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಹೀಗಿರುವಾಗ ರಾಜಸ್ಥಾನ ರಾಯಲ್ಸ್ ತಂಡ ತನ್ನ ಆರಂಭಿಕ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್ ಮೂಲಕ ಅಬ್ಬರಿಸಿ ಯಶಸ್ವಿಯಾಗಿತ್ತು. ಆದರೆ ಕೊನೆಯ ಎರಡು ಪಂದ್ಯಗಳನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆಡಿ ಈ ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಸೋಲು ಕಂಡಿದೆ. ಅಲ್ಲದೆ ಈ ತಂಡ ನಾಯಕ ಸ್ಟೀವ್ ಸ್ಮಿತ್ ಹಾಗೂ ಸಂಜು ಸ್ಯಾಮ್ಸನ್ ಅವರನ್ನೇ ಹೆಚ್ಚಾಗಿ ಅವಲಂಬಿಸಿದೆ.
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ಆದಿತ್ಯ ತಾರೆ, ಅನ್ಮೋಲ್‌ಪ್ರೀತ್ ಸಿಂಗ್, ಅನುಕುಲ್ ರಾಯ್, ಕ್ರಿಸ್ ಲಿನ್, ಧವಲ್ ಕುಲಕರ್ಣಿ, ದಿಗ್ವಿಜಯ್ ದೇಶ್ಮುಖ್, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಜೇಮ್ಸ್ ಪ್ಯಾಟಿಸನ್, ಜಸ್ಪ್ರೀತ್ ಬುಮ್ರಾ, ಜಯಂತ್ ಯಾದವ್, ಕೀರನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ, ಮೊಹ್ಸಿನ್ ಖಾನ್, ನಾಥನ್ ಕೌಲ್ಟರ್-ನೈಲ್, ಪ್ರಿನ್ಸ್ ಬಲ್ವಂತ್ ರೈ, ಕ್ವಿಂಟನ್ ಡಿ ಕಾಕ್, ರಾಹುಲ್ ಚಹರ್, ಸೌರಭ್ ತಿವಾರಿ, ಶೆರ್ಫೇನ್ ರುದರ್ಫೋರ್ಡ್, ಸೂರ್ಯಕುಮಾರ್ ಯಾದವ್, ಟ್ರೆಂಟ್ ಬೌಲ್ಟ್.
ರಾಜಸ್ಥಾನ ರಾಯಲ್ಸ್: ಜೋಸ್ ಬಟ್ಲರ್, ಬೆನ್ ಸ್ಟೋಕ್ಸ್, ಸಂಜು ಸ್ಯಾಮ್ಸನ್, ಆಂಡ್ರ್ಯೂ ಟೈ, ಕಾರ್ತಿಕ್ ತ್ಯಾಗಿ, ಸ್ಟೀವ್ ಸ್ಮಿತ್, ಅಂಕಿತ್ ರಾಜ್‌ಪೂತ್, ಶ್ರೇಯಾಸ್ ಗೋಪಾಲ್, ರಾಹುಲ್ ತಿವಾಟಿಯಾ, ಜಯದೇವ್ ಉನಾದ್ಕತ್, ಮಾಯಾಂಕ್ ಮಾರ್ಕಂಡೆ, ಮಹಿಪಾಲ್ ಲೋಮರ್, ಓಶಾನೆ ಥಾಮಸ್, ರಯಾನ್ ಪರಾಗ್, ಯಶಸ್ವಿ ಜೈಸ್ವಾಲ್ ಅನುಜ್ ರಾವತ್, ಆಕಾಶ್ ಸಿಂಗ್, ಡೇವಿಡ್ ಮಿಲ್ಲರ್, ಮನನ್ ವೊಹ್ರಾ, ಶಶಾಂಕ್ ಸಿಂಗ್, ವರುಣ್ ಆರನ್, ಟಾಮ್ ಕುರ್ರನ್, ರಾಬಿನ್ ಉತ್ತಪ್ಪ, ಅನಿರುದ್ಧಾ ಜೋಶಿ, ಜೋಫ್ರಾ ಆರ್ಚರ್.
ಪಂದ್ಯ ಆರಂಭ: ಸಂಜೆ 7:30ಕ್ಕೆ