ಕರ್ನಾಟಕ

karnataka

ETV Bharat / sports

ಪಡಿಕ್ಕಲ್ ಸಹ ಆಟಗಾರನ ಒತ್ತಡ ನಿವಾರಿಸುತ್ತಾರೆ: ಕನ್ನಡಿಗನ ಬಗ್ಗೆ ಆರ್​ಸಿಬಿ ನಿರ್ದೇಶಕನ ಮೆಚ್ಚುಗೆ ಮಾತು - ಐಪಿಎಲ್2020

ಕನ್ನಡಿಗ ದೇವದತ್ ಪಡಿಕ್ಕಲ್ ಅಪಾರ ಪ್ರತಿಭೆ ಹೊಂದಿರುವ ಆಟಗಾರನಾಗಿದ್ದು, ಸಹ ಆಟಗಾರನ ಮೇಲಿರುವ ಒತ್ತಡ ನಿವಾರಿಸುತ್ತಾರೆ ಎಂದು ಆರ್​ಸಿಬಿ ತಂಡದ ನಿರ್ದೇಶಕ ಮೈಕ್ ಹೆಸ್ಸನ್ ಹೇಳಿದ್ದಾರೆ.

Padikkal takes pressure off the guy he's batting with
ಪಡಿಕ್ಕಲ್ ಸಹ ಆಟಗಾರನ ಒತ್ತಡ ನಿವಾರಿಸುತ್ತಾರೆ

By

Published : Oct 5, 2020, 10:56 AM IST

ದುಬೈ: ದೇವದತ್ ಪಡಿಕ್ಕಲ್ ಬ್ಯಾಟಿಂಗ್ ಮಾಡುತ್ತಿರುವಾಗ ಸಹ ಆಟಗಾರನ ಮೇಲಿರುವ ಒತ್ತಡವನ್ನು ನಿವಾರಿಸುತ್ತಾರೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಿರ್ದೇಶಕ ಮೈಕ್ ಹೆಸ್ಸನ್ ಹೇಳಿದ್ದಾರೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಭರ್ಜರಿ ಪ್ರದರ್ಶನ ತೋರುತ್ತಿರುವ ಕನ್ನಡಿಗ ದೇವದತ್ ಪಡಿಕ್ಕಲ್, ಶನಿವಾರ ರಾಜಸ್ಥಾನ ತಂದ ವಿರುದ್ಧ ಕೂಡ ಉತ್ತಮ ಪ್ರದರ್ಶನ ತೋರಿದ್ರು. 2ನೇ ವಿಕೆಟ್‌ಗೆ ದೇವದತ್‌ ಪಡಿಕ್ಕಲ್ ಮತ್ತು ವಿರಾಟ್‌ ಕೊಹ್ಲಿ 99 ರನ್‌ಗಳ ಅಮೋಘ ಜೊತೆಯಾಟವಾಡಿ ತಂಡವನ್ನು ಸುಲಭವಾಗಿ ಗುರಿ ಮುಟ್ಟುವಂತೆ ಮಾಡಿದರು. 46 ಎಸೆತಗಳಲ್ಲಿ 63 ರನ್‌ಗಳನ್ನು ಬಾರಿಸಿದ್ದ ಪಡಿಕ್ಕಲ್‌ ಜೋಫ್ರಾ ಆರ್ಚರ್‌ ಬೌಲಿಂಗ್‌ನಲ್ಲಿ ಔಟ್​ ಆಗಿ ಪೆವಿಲಿಯನ್ ಸೇರಿದ್ರು.

ಪಡಿಕ್ಕಲ್ ಅಪಾರ ಪ್ರತಿಭೆ ಹೊಂದಿರುವ ಆಟಗಾರನಾಗಿದ್ದಾರೆ. ತನ್ನ ಜೊತೆ ಬ್ಯಾಟಿಂಗ್ ಮಾಡುತ್ತಿರುವ ಇತರೆ ಆಟಗಾರರನ ಮೇಲಿರುವ ಒತ್ತಡವನ್ನು ನಿವಾರಿಸಿ, ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ಆರ್​ಸಿಬಿ ತಂಡದ ನಿರ್ದೇಶಕ ಮೈಕ್ ಹೆಸ್ಸನ್ ತಿಳಿಸಿದ್ದಾರೆ.

ಅನುಭವಿ ಆಟಗಾರರಂತೆ ಪಡಿಕ್ಕಲ್ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದು ಕನ್ನಡಿಗನ ಬಗ್ಗೆ ಹೆಸ್ಸನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಡಗೈ ಬ್ಯಾಟ್ಸ್‌ಮನ್‌ ದೇವದತ್‌ ಪಡಿಕ್ಕಲ್‌ ಈ ವರ್ಷ ಐಪಿಎಲ್‌ ಟೂರ್ನಿಗೆ ಪದಾರ್ಪಣೆ ಮಾಡಿದ್ದು, ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರು ಅರ್ಧಶತಕ ಸಿಡಿಸಿ ಮಿಂಚಿದ್ದಾರೆ.

ABOUT THE AUTHOR

...view details