ಕರ್ನಾಟಕ

karnataka

By

Published : Oct 4, 2020, 12:28 PM IST

ETV Bharat / sports

ಶಾರ್ಜಾದಲ್ಲಿ ಮುಂಬೈ-ಹೈದರಾಬಾದ್ ಮುಖಾಮುಖಿ.. ರೋಹಿತ್ ಪಡೆಯನ್ನು ಕಟ್ಟಿ ಹಾಕುತ್ತಾ ವಾರ್ನರ್ ಟೀಂ?

ಶಾರ್ಜಾದಲ್ಲಿ ನಡೆಯಲಿರುವ ಇಂದಿನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಸನ್​ರೈಸರ್ಸ್​​ ಹೈದರಾಬಾದ್ ತಂಡಗಳು ಟೂರ್ನಿಯಲ್ಲಿ ಮೂರನೇ ಗೆಲುವಿಗಾಗಿ ಸೆಣಸಾಡಲಿದ್ದು, ಮಧ್ಯಾಹ್ನ 3.30ಕ್ಕೆ ಪಂದ್ಯ ಆರಂಭವಾಗಲಿದೆ.

mumbai indians vs sunrisers hyderabad
ಮುಂಬೈ-ಹೈದರಾಬಾದ್ ಮುಖಾಮುಖಿ

ಶಾರ್ಜಾ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಇಂದು ಇಂಡಿಯನ್ ಪ್ರೀಮಿಯರ್​ ಲೀಗ್​ನ 17ನೇ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ.

ಇಲ್ಲಿಯವರೆಗೆ ಆಡಿದ ನಾಲ್ಕು ಪಂದ್ಯಗಳಲ್ಲಿ ತಲಾ 2 ಗೆಲುವು ಹಾಗೂ 2 ಸೋಲುಗಳನ್ನು ಕಂಡಿರುವ ಉಭಯ ತಂಡಗಳು ಮೂರನೇ ಗೆಲುವಿನ ಮೇಲೆ ಕಣ್ಣಿಟ್ಟಿವೆ. ಸತತ ಎರಡು ಸೋಲುಗಳ ಮೂಲಕ ಟೂರ್ನಿ ಆರಂಭಿಸಿದ್ದ ವಾರ್ನರ್ ಪಡೆ ನಂತರ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಕಂಬ್ಯಾಕ್ ಮಾಡಿದೆ.

ಮುಂಬೈ ಇಂಡಿಯನ್ಸ್

ಇತ್ತ ಮುಂಬೈ ಇಂಡಿಯನ್ಸ್ ಕೂಡ 2 ಪಂದ್ಯ ಸೋಲು ಕಂಡು ಎರಡರಲ್ಲಿ ಜಯ ಗಳಿಸಿದ್ದು, ಮೂರನೇ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಮುಂಬೈ ಇಂಡಿಯನ್ಸ್ ಪರ ನಾಯಕ ರೋಹಿತ್ ಶರ್ಮಾ, ಇಶಾನ್ ಕಿಶನ್, ಕಿರಾನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಬೌಲಿಂಗ್‌ ವಿಭಾಗದಲ್ಲಿ ಯಾರ್ಕರ್‌ ಸ್ಪೆಷಲಿಸ್ಟ್‌ ಬುಮ್ರಾ, ಟ್ರೆಂಟ್‌ ಬೌಲ್ಟ್, ಜೇಮ್ಸ್‌ ಪ್ಯಾಟಿನ್ಸನ್‌, ರಾಹುಲ್‌ ಚಹರ್‌ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಸನ್​ರೈಸರ್ಸ್​​ ಹೈದರಾಬಾದ್

ಅಗ್ರ ಆಟಗಾರರ ವೈಫಲ್ಯದ ನಡುವೆ ಹೈದರಾಬಾದ್ ಪರ ಯುವ ಆಟಗಾರರು ಮಿಂಚುತ್ತಿದ್ದಾರೆ. ಜಾನಿ ಬೈರ್ ‌ಸ್ಟೋವ್, ವಾರ್ನರ್‌, ಕೇನ್‌ ವಿಲಿಯಮ್ಸನ್‌ ಕಡಿಮೆ ರನ್​ಗಳಿಸಿ ಔಟ್ ಆದರೂ ಸನ್​ರೈಸರ್ಸ್​ ಕಳೆದ ಪಂದ್ಯದಲ್ಲಿ ಬಲಿಷ್ಠ ಸಿಎಸ್​ಕೆ ತಂಡವನ್ನು ಮಣಿಸಿತ್ತು. ಅಭಿಷೇಕ್ ವರ್ಮಾ, ಪ್ರಿಯಂ ಗರ್ಗ್ ಉತ್ತಮ ಫಾರ್ಮ್‌ನಲ್ಲಿದ್ದು, ಇವರ ಮೇಲೆ ತಂಡ ಹೆಚ್ಚು ಭರವಸೆ ಇರಿಸಿದೆ. ಇನ್ನು ತಂಡದ ಪ್ರಮುಖ ವೇಗಿ ಭುವನೇಶ್ವರ್ ಕುಮಾರ್ ಗಾಯಗೊಂಡಿದ್ದು, ಈ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆಯಿದೆ.

ಮುಂಬೈ-ಹೈದರಾಬಾದ್ ಮುಖಾಮುಖಿ

ಉಭಯ ತಂಡಗಳು ಇಲ್ಲಿಯವರೆಗೆ 14 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಏಳರಲ್ಲಿ ಮುಂಬೈ ಗೆಲುವು ಸಾಧಿಸಿದ್ರೆ, ಏಳರಲ್ಲಿ ಹೈದರಾಬಾದ್ ಗೆದ್ದಿದ್ದು, ಸಮ ಬಲದ ಹೋರಾಟ ನಡೆಸಿವೆ.

ABOUT THE AUTHOR

...view details