ಅಬು ಧಾಬಿ:ಹತ್ತಾರು ಅಡಚಣೆ, ಕೊರೊನಾ ಸಂಕಷ್ಟ ಎಲ್ಲವೂ ಮೀರಿ ಅರಬ್ ನಾಡಿನಲ್ಲಿ ಇಂದಿನಿಂದ 13ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಗೊಳ್ಳುತ್ತಿದೆ. ಮೊದಲ ಪಂದ್ಯದಲ್ಲೇ ಬಲಿಷ್ಠ ರೋಹಿತ್-ಧೋನಿ ಬಳಗ ಮುಖಾಮುಖಿಯಾಗುತ್ತಿರುವುದು ಕ್ರೀಡಾಭಿಮಾನಿಗಳಲ್ಲಿ ಕಾತುರ ಮೂಡಿಸಿದೆ.
ಅಲ್ ಶೇಖ್ ಝಹೇದ್ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರನ್ನರ್ ಅಪ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಖಾಮುಖಿಯಾಗುತ್ತಿದ್ದು, ಈ ಮೂಲಕ 13ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಚಾಲನೆ ಸಿಗಲಿದೆ. ಜತೆಗೆ ಮುಂದಿನ 53 ದಿನಗಳ ಕಾಲ ಹೊಡಿಬಡಿ ಆಟ ಜೋರಾಗಿ ನಡೆಯಲಿದೆ.
ಐಪಿಎಲ್ ಇತಿಹಾಸದಲ್ಲೇ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಯಶಸ್ವಿ ತಂಡ ಎಂಬ ಖ್ಯಾತಿಗಳಿಸಿವೆ. ಆದರೆ ಈ ಸಲ ಎರಡು ತಂಡಕ್ಕೂ ಕೆಲ ಅನುಭವಿ ಆಟಗಾರರ ಕೊರತೆ ಉಂಟಾಗಿದ್ದು, ಮುಂಬೈ ತಂಡದಲ್ಲಿ ಮಲಿಂಗಾ ಹಾಗೂ ಚೆನ್ನೈ ತಂಡದಲ್ಲಿ ರೈನಾ, ಹರ್ಭಜನ್ ಅನುಪಸ್ಥಿತಿ ಎದ್ದು ಕಾಡಲಿದೆ. ಇದರ ಮಧ್ಯೆ ಕೂಡ ಉಭಯ ತಂಡ ಸಮತೋಲನದಿಂದ ಕೂಡಿದ್ದು, ಬಲಿಷ್ಠ ಸ್ಪರ್ಧೆ ಏರ್ಪಡಲಿದೆ.
ಈ ಹಿಂದಿನ ಐಪಿಎಲ್ ಟೂರ್ನಾಮೆಂಟ್ಗಳಿಗೆ ಹೋಲಿಕೆ ಮಾಡಿದರೆ, ಈ ಸಲ ವಿಭಿನ್ನವಾಗಿ ಐಪಿಎಲ್ ನಡೆಯಲಿದ್ದು, ಯಾವುದೇ ಕ್ರೀಡಾಭಿಮಾನಿಗಳು ಮೈದಾನದಲ್ಲಿ ಇರುವುದಿಲ್ಲ. ಜತೆಗೆ ಮೈದಾನದಲ್ಲಿ ಕ್ರಿಕೆಟರ್ಸ್ ಸಿಕ್ಸರ್, ಬೌಂಡರಿ ಹಾಗೂ ವಿಕೆಟ್ ಪಡೆದಾಗ ಹುರಿದುಂಬಿಸಲು ಚೀಯರ್ ಗರ್ಲ್ಸ್ ಸಹ ಇರಲ್ಲ.
ಉಭಯ ತಂಡಗಳು