ನವದೆಹಲಿ:ಗುರುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಭರ್ಜರಿ ಜಯ ಸಾಧಿಸಿದ್ದು, ಇದರಲ್ಲಿ ಅನಿಲ್ ಕುಂಬ್ಳೆ ಅವರ ಪಾತ್ರವೂ ಇದೆ.
ಮಾಜಿ ಲೆಗ್ ಸ್ಪಿನ್ನರ್ ಮತ್ತು ಪಂಜಾಬ್ ತಂಡದ ಮುಖ್ಯ ತರಬೇತುದಾರ ಅನಿಲ್ ಕುಂಬ್ಳೆ, ಆಡುವ 11 ಆಟಗಾರರಲ್ಲಿ ಇಬ್ಬರು ಲೆಗ್ ಸ್ಪಿನ್ನರ್ಗಳನ್ನು ಆಯ್ಕೆ ಮಾಡಿದ್ದಾರೆ. ಮುರುಗನ್ ಅಶ್ವಿನ್ ಮತ್ತು ರವಿ ಬಿಷ್ನೋಯ್, ತಲಾ 3 ವಿಕೆಟ್ ಪಡೆದು ಪಂಜಾಬ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ರು.
ಅಶ್ವಿನ್ ಮೂರು ಓವರ್‌ಗಳಲ್ಲಿ 21 ರನ್ ನೀಡಿ 3 ವಿಕೆಟ್ ಪಡೆದ್ರೆ, ಬಿಷ್ನೋಯ್ ನಾಲ್ಕು ಓವರ್‌ಗಳಲ್ಲಿ 32 ರನ್ ನೀಡಿ 3 ವಿಕೆಟ್ ಪಡೆದ್ರು. ಪರಿಣಾಮವಾಗಿ ಆರ್ಸಿಬಿ ತಂಡ 109 ರನ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಪಂಜಾಬ್ಗೆ ಶರಣಾಯಿತು.
ಇಬ್ಬರು ಲೆಗ್ ಸ್ಪಿನ್ನರ್‌ಗಳ ಆಯ್ಕೆಯು ಕುಂಬ್ಳೆ ಅವರ ನಿರ್ಧಾರ ಎಂದು ನಂಬಲಾಗಿದೆ. ಆರಂಭಿಕ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಸೋತ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಆ ಪಂದ್ಯದಲ್ಲಿ ಇಲೆವೆನ್‌ನಲ್ಲಿ ಎರಡನೇ ಸ್ಪಿನ್ನರ್ ಆಗಿ ಆಫ್ ಸ್ಪಿನ್ನರ್ ಕೃಷ್ಣಪ್ಪ ಗೌತಮ್ ಇದ್ರು. ಅದರೆ ಅವರು ನಾಲ್ಕು ಓವರ್‌ಗಳಲ್ಲಿ 39 ರನ್ ನೀಡಿ ವಿಕೆಟ್ ಪಡೆಯಲು ವಿಫಲರಾಗಿದ್ದರು.
ಲೆಗ್ ಸ್ಪಿನ್ನರ್‌ಗಳು ಟಿ20 ಕ್ರಿಕೆಟ್‌ಗೆ ಸೂಕ್ತವಲ್ಲ ಎಂಬುದು ಹಳೆಯ ಪುರಾಣ. ಉದಾಹರಣೆಗೆ, ಅಮಿತ್ ಮಿಶ್ರಾ ಐಪಿಎಲ್‌ನಲ್ಲಿ ಮೂರು ಹ್ಯಾಟ್ರಿಕ್ ಗಳಿಸಿದ್ದಾರೆ ಮತ್ತು ದೆಹಲಿ ಪರ 92 ಪಂದ್ಯಗಳಲ್ಲಿ 97 ವಿಕೆಟ್, ಡೆಕ್ಕನ್ ಚಾರ್ಜರ್ಸ್ ಪರ 28 ಪಂದ್ಯಗಳಲ್ಲಿ 32, ಮತ್ತು ಸನ್‌ರೈಸರ್ಸ್ ಹೈದರಾಬಾದ್ ಪರ 27 ಪಂದ್ಯಗಳಲ್ಲಿ 28 ವಿಕೆಟ್ ಪಡೆದು ಸಾಕಷ್ಟು ಯಶಸ್ವಿ ಬೌಲರ್ ಆಗಿದ್ದಾರೆ.
ಕುಂಬ್ಳೆ ಮತ್ತು ನಾಯಕ ರಾಹುಲ್ ಒಂದೇ ರಾಜ್ಯದಿಂದ ಬಂದು, ಒಂದೇ ಮಾತೃಭಾಷೆ ಮಾತನಾಡುತ್ತಾರೆ. ಈ ಪರಿಚಯ ಮತ್ತು ಬಂಧವು ತಂಡಕ್ಕೆ ಸ್ಪಷ್ಟವಾಗಿ ಸಹಾಯ ಮಾಡಿದೆ ಎಂಬುದು ವಿಶೇಷ.