ಅಬುಧಾಬಿ:ಬುಧವಾರ ನಡೆದ ಐಪಿಲ್ ಪಂದ್ಯದಲ್ಲಿ ಕೆಕೆಆರ್ ತಂಡ, ಸಿಎಸ್ಕೆ ವಿರುದ್ಧ 10 ರನ್ಗಳ ಅಂತರದಲ್ಲಿ ಜಯ ಸಾಧಿಸಿದ್ದು, ಉತ್ತಮ ಬೌಲಿಂಗ್ ಪ್ರದರ್ಶಿಸಿದ ಸುನಿಲ್ ನರೈನ್ ಅವರನ್ನು ನಾಯಕ ದಿನೇಶ್ ಕಾರ್ತಿಕ್ ಕೊಂಡಾಡಿದ್ದಾರೆ.
168 ರನ್ಗಳ ಗುರಿ ಬೆನ್ನಟ್ಟಿದ ಸಿಎಸ್ಕೆ ತಂಡ 12 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 99 ರನ್ ಪೇರಿಸುವ ಮೂಲಕ ಸುಲಭವಾಗಿ ಪಂದ್ಯ ಗೆಲ್ಲುವ ವಿಶ್ವಾಸದಲ್ಲಿತ್ತು. ಆದರೆ ಅಮೋಘ ಪ್ರದರ್ಶನ ತೋರಿದ ಕೆಕೆಆರ್ ಬೌಲರ್ಸ್ ಸಿಎಸ್ಕೆ ತಂಡವನ್ನು 157 ರನ್ಗಳಿಗೆ ಕಟ್ಟಿಹಾಕಿ 10 ರನ್ಗಳಿಂದ ಜಯ ಸಾಧಿಸಿದ್ದಾರೆ.
ಪಂದ್ಯ ಮುಗಿದ ಬಳಿಕ ಮಾತನಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ದಿನೇಶ್ ಕಾರ್ತಿಕ್, ಪ್ರತಿ ತಂಡಕ್ಕೂ ಕೆಲವು ಪ್ರಮುಖ ಆಟಗಾರರಿದ್ದಾರೆ. ನಮ್ಮ ತಂಡಕ್ಕೆ ನರೈನ್ ಪ್ರಮುಖ ಆಟಗಾರರಾಗಿದ್ದಾರೆ. 2-3 ಪಳಪೆ ಪ್ರದರ್ಶನ ದೊಡ್ದ ವಿಚಾರವೇನಲ್ಲ ಎಂದಿದ್ದಾರೆ.
ರಾಹುಲ್ ತ್ರಿಪಾಠಿ ಉತ್ತಮವಾಗಿ ಬ್ಯಾಟ್ ಬೀಸಿದ್ರು. ರಸೆಲ್ ಅವರು ಬಹುಮುಖ ಪ್ರತಿಭೆ. ಅವರು ಮೇಲಿನ ಕ್ರಮಾಂಕ ಮತ್ತು ಕೆಳ ಕ್ರಮಾಂಕದಲ್ಲೂ ಬ್ಯಾಟ್ ಬೀಸಬಲ್ಲರು. ನಮ್ಮ ಬ್ಯಾಟಿಂಗ್ ಯುನಿಟ್ ಅಗತ್ಯಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತದೆ. ನನಗೆ ನರೈನ್ ಮತ್ತು ವರುಣ್ ಅವರ ಮೇಲೆ ಸಾಕಷ್ಟು ನಂಬಿಕೆ ಇದೆ ಎಂದಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್ ತಂಡ 20 ಓವರ್ಗಳಲ್ಲಿ 167 ರನ್ಗಳಿಗೆ ಸರ್ವಪತನ ಕಂಡಿತು. 168 ರನ್ಗಳ ಗುರಿ ಬೆನ್ನಟ್ಟಿದ್ದ ಸಿಎಸ್ಕೆ ತಂಡ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 157 ರನ್ ಗಳಿಸುವ ಮೂಲಕ 10 ರನ್ಗಳಿಂದ ಕೋಲ್ಕತ್ತಾ ತಂಡಕ್ಕೆ ಶರಣಾಯಿತು.