ಹೈದರಾಬಾದ್: ಕ್ವಾಲಿಫೈಯರ್ 2 ನೇ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡದ ಆಲ್ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಆಲ್ರೌಂಡರ್ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮಖ ಪಾತ್ರ ನಿರ್ವಹಿಸಿದ್ದರು.
ಈ ಪಂದ್ಯದಲ್ಲಿ ಸ್ಟೋಯ್ನಿಸ್ ಓಪನರ್ ಆಗಿ ಕಣಕ್ಕಿಳಿದಿದ್ದ ಅವರು 38 ರನ್ಗಳಿಸಿದ್ದರು. ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ತೋರಿದ ಇವರು ಹೈದರಾಬಾದ್ ತಂಡದ ಪ್ರಮುಖ ಮೂರು ವಿಕೆಟ್ ಪಡೆದು ಮಿಂಚಿದ್ದರು.
ಇಂದು ಹಾಲಿ ಚಾಂಪಿಯನ್ ಮುಂಬೈ ವಿರುದ್ಧದ ಪಂದ್ಯದಲ್ಲಿ ಇದೇ ರೀತಿಯ ಪ್ರದರ್ಶನ ನೀಡುತ್ತಾರೆ ಎಂದು ತಂಡದ ನಾಯಕ ಹಾಗೂ ಕೋಚ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
" ನಾನು ನನ್ನ ಆಲೋಚನೆಗಳ ಪ್ರಕಾರ ಬೌಲಿಂಗ್ ಮಾಡುತ್ತೇನೆ, ಆದಷ್ಟೂ ಯಾರ್ಕರ್ ಹಾಗೂ ನಿಧಾನವಾದ ಬೌಲ್ ಮಾಡಲು ಯೋಚಿಸುತ್ತೇನೆ. ಏಕೆಂದರೆ ಹೀಗೆ ಬೌಲ್ ಮಾಡುವುದರಿಂದ ಎದುರಾಳಿ ಬ್ಯಾಟ್ಸ್ಮನ್ಗಳನ್ನ ಸಂಕಷ್ಟಕ್ಕೆ ಸಿಲುಕಿಸಬಹುದು ಎಂದು ಸ್ಟೋಯ್ನಿಸ್ ಹೇಳಿದರು.
"ನಿಮ್ಮ ಸಾಮರ್ಥ್ಯಕ್ಕೆ ಅಂಟಿಕೊಳ್ಳುವುದು ಮುಖ್ಯ. ಟಿ-20 ಯಲ್ಲಿ, ನೀವು ವಿಕೆಟ್ ತೆಗೆದುಕೊಳ್ಳಲು ಆಗದಿದ್ದರೆ ರನ್ಗಳನ್ನ ನಿಯಂತ್ರಿಸಲು ಯೋಚಿಸಬೇಕು. ಆಗ ಎದುರಾಳಿಗಳ ಮೇಲೆ ಸ್ವಲ್ಪ ಒತ್ತಡ ಹಾಕಬಹುದು ಎಂದರು.
ಸ್ಟೋಯ್ನಿಸ್ 21.66 ಸರಾಸರಿಯಲ್ಲಿ 12 ವಿಕೆಟ್‌ಗಳನ್ನು ಪಡೆದಿದ್ದಾರೆ, ಇದು ಅವರ ಐಪಿಎಲ್ ವೃತ್ತಿ ಜೀವನದ ಅತ್ಯುತ್ತಮ ಬೌಲಿಂಗ್ ಸರಾಸರಿಯಾಗಿದೆ.