ಕರ್ನಾಟಕ

karnataka

By

Published : Nov 2, 2020, 11:05 AM IST

Updated : Nov 2, 2020, 12:46 PM IST

ETV Bharat / sports

ಇಂದು ಡೆಲ್ಲಿ, ಬೆಂಗಳೂರು ನಡುವೆ ನಿರ್ಣಾಯಕ ಕದನ: ಗೆದ್ದವರಿಗೆ ಪ್ಲೇ - ಆಫ್​ ಸ್ಥಾನ ಖಚಿತ

ಅಬುಧಾಬಿಯಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಗೆದ್ದ ತಂಡ ಪ್ಲೇ - ಆಫ್​ ಸುತ್ತಿನಲ್ಲಿ ಸ್ಥಾನ ಖಚಿಪಡಿಸಿಕೊಳ್ಳಲಿದೆ.

Delhi capitals vs royal challengers Bangalore
ಡೆಲ್ಲಿ, ಬೆಂಗಳೂರು ನಡುವೆ ನಿರ್ಣಾಯಕ ಕದನ

ಅಬುಧಾಬಿ:ಅಂಕಪಟ್ಟಿಯಲ್ಲಿ​ ಪಟ್ಟಿಯಲ್ಲಿ ಟಾಪ್ ನಾಲ್ಕರಲ್ಲಿ ಸ್ಥಾನ ಪಡೆದಿದ್ರೂ ಆರ್​ಸಿಬಿ ಮತ್ತು ಡೆಲ್ಲಿ ತಂಡಗಳು ಇಲ್ಲಿಯವರೆಗೆ ಪ್ಲೇ - ಆಫ್​ ಸುತ್ತಿಗೆ ಆಯ್ಕೆಯಾಗಿಲ್ಲ. ಆದರೆ ಇಂದು ಲೀಗ್​ ಹಂತದ ಅಂತಿಮ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗುತ್ತಿದ್ದು, ಗೆದ್ದವರಿಗೆ ನಾಕ್​ ಔಟ್​ ಹಂತದಲ್ಲಿ ಸ್ಥಾನ ಖಚಿತವಾಗಲಿದೆ.

ಎರಡೂ ತಂಡಗಳಿಗೂ ಇದು ಮಹತ್ವದ ಪಂದ್ಯವಾಗಿದ್ದು, ಗೆದ್ದ ತಂಡ ಪ್ಲೇ-ಆಫ್​ ಸುತ್ತಿಗೆ ಆಯ್ಕೆಯಾಗಲಿದ್ದು, ಸೋತವರಿಗೆ ರನ್​ರೇಟ್ ನಿರ್ಣಾಯಕ ಪಾತ್ರ ವಹಿಸಲಿದೆ. ಅಲ್ಲದೇ ಸೋತ ತಂಡದ ಹಣೆ ಬರಹ ಹೈದರಾಬಾದ್ ತಂಡದ ಸೋಲು ಅಥವಾ ಗೆಲುವಿನ ಮೇಲೆ ನಿರ್ಧಾರವಾಗಲಿದೆ.

ಆರಂಭದಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಡೆಲ್ಲಿ ಸತತ ನಾಲ್ಕು ಪಂದ್ಯಗಲ್ಲಿ ಸೋಲು ಕಂಡಿದ್ರೆ, ಬೆಂಗಳೂರು ತಂಡ ಹ್ಯಾಟ್ರಿಕ್ ಸೋಲು ಅನುಭವಿಸಿದೆ. ಅಸ್ಥಿರ ಪ್ರದರ್ಶನವೇ ಇತ್ತಂಡಗಳಿಗೆ ಮುಳುವಾಗಿದೆ. ಹೀಗಾಗಿ ಇಂದಿನ ಪಂದ್ಯ ನಿರ್ಣಾಯಕವಾಗಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು

ಬೆಂಗಳೂರು ತಂಡದ ಆರಂಭಿಕ ಆಟಗಾರರ ಪಡಿಕ್ಕಲ್ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ, ಫಿಲಿಪ್ಪೆ ಕೂಡ ಕಳೆದ ಎರಡು ಪಂದ್ಯಗಳಲ್ಲಿ ಮಿಚಿದ್ದಾರೆ. ಆದರೆ ವಿರಾಟ್ ಮತ್ತು ವಿಲಿಯರ್ಸ್ ನಿರ್ಗಮನದ ನಂತರ ಇನ್ನಿಂಗ್ಸ್ ಕಟ್ಟುವ ಆಟಗಾರರಿಲ್ಲ. ಮಧ್ಯಮ ಕ್ರಮಾಂಕ ಬಲಿಷ್ಟವಾಗಿಲ್ಲದಿರುವುದೇ ತಂಡಕ್ಕೆ ಹಿನ್ನಡೆ ಉಂಟುಮಾಡಿದೆ.

ಆರ್​ಸಿಬಿ ಬೌಲಿಂಗ್ ಪಡೆ ಕೂಡ ಡೆಲ್ಲಿಯಷ್ಟು ಉತ್ತಮವಾಗಿಲ್ಲ, ಮೋರಿಸ್ ಮತ್ತು ಚಹಾಲ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ಸೈನಿ, ಸಿರಾಜ್, ಸುಂದರ್ ಇಂದಿನ ಪಂದ್ಯದಲ್ಲಿ ಮಿಂಚುವ ಅವಶ್ಯಕತೆ ಇದೆ.

ಡೆಲ್ಲಿ ಕ್ಯಾಪಿಟಲ್ಸ್

ಆರಂಭದಲ್ಲಿ ಅಮೋಘ ಪ್ರದರ್ಶನ ತೋರಿದ್ದ ಡೆಲ್ಲಿ, ಕಪ್‌ ಗೆಲ್ಲುವ ಫೇವರಿಟ್‌ ತಂಡವಾಗಿತ್ತು. ಆದರೆ, ಅಂತಿಮ ಹಂತದಲ್ಲಿ ಸತತ ಸೋಲಿನಿಂದ ಕಂಗೆಟ್ಟು ಪ್ಲೇ - ಆಫ್​ ಹಂತಕ್ಕೇರಲು ಹೆಣಗಾಡುತ್ತಿದೆ. ಬ್ಯಾಟ್ಸ್​ಮನ್​ಗಳ ವೈಫಲ್ಯ ತಂಡಕ್ಕೆ ದೊಡ್ಡ ತಲೆನೋವಾಗಿದೆ. ಕಗಿಸೊ ರಬಾಡ, ನೋರ್ಟ್ಜೆ, ಅಕ್ಷರ್​​​ ಪಟೇಲ್, ಆರ್.ಅಶ್ವಿನ್, ಸ್ಟೋಯ್ನಿಸ್​ ಬೌಲಿಂಗ್​ನಲ್ಲಿ ಕಮಾಲ್ ಮಾಡಬೇಕಿದೆ.

Last Updated : Nov 2, 2020, 12:46 PM IST

ABOUT THE AUTHOR

...view details