ಕರ್ನಾಟಕ

karnataka

ETV Bharat / sports

ಚೆನ್ನೈ ಪ್ಲೇ ಆಫ್ ಕನಸು ಭಗ್ನ; ಐಪಿಎಲ್​ ಪಂದ್ಯದ ಆಸಕ್ತಿದಾಯಕ ಸಂಗತಿ ಇಲ್ಲಿವೆ.. - ಐಪಿಎಲ್​ನ ದಾಖಲೆಗಳು

ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಮವಾರದ ಪಂದ್ಯದಲ್ಲಿ ಎರಡು ಸೇರಿದಂತೆ ಒಟ್ಟು 108 ಕ್ಯಾಚ್​ಗಳನ್ನು ಹಿಡಿದಿದ್ದಾರೆ. 39 ಸ್ಟಂಪಿಂಗ್​ ಮಾಡಿರುವ ಧೋನಿ ವಿಕೆಟ್​ ಕೀಪರ್​ ಆಗಿ ಒಟ್ಟು 147 ಬ್ಯಾಟ್ಸ್​ಮನ್ಸ್​ಗಳನ್ನು ಪೆವಿಲಿಯನ್​​ಗೆ ಕಳುಹಿಸಿ ದಾಖಲೆ ಬರೆದರು. ಮೂರು ವಿಕೆಟ್​ ಪಡೆದ್ರೆ ಈ ಸಂಖ್ಯೆ 150ಕ್ಕೆ ತಲುಪಲಿದೆ..

IPL 2020 | CSK vs RR: Stats, interesting facts from the match
ಚೆನ್ನೈ ಸೂಪರ್ ಕಿಂಗ್ಸ್‌ ತಂಡ ಆಟಗಾರರು

By

Published : Oct 20, 2020, 8:37 PM IST

ಹೈದರಾಬಾದ್: ಐಪಿಎಲ್ 13ನೇ ಆವೃತ್ತಿಯಲ್ಲಿ ಅತಿ ಕಡಿಮೆ ರನ್ ಕಲೆಹಾಕಿದ್ದ ಚೆನ್ನೈ ಸೂಪರ್ ಕಿಂಗ್ಸ್‌ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಮವಾರ ಸೋಲುವ ಮೂಲಕ ಬಹುತೇಕ ಈ ಸೀಸನ್‌ನ ಪ್ಲೇ ಆಫ್ ಕನಸನ್ನು ಕೈ ಬಿಟ್ಟಿದೆ.

ಐಪಿಎಲ್​ ಪಂದ್ಯದ ಆಸಕ್ತಿದಾಯಕ ಸಂಗತಿಗಳು

ಈವರೆಗಿನ ಆಡಿರುವ 10 ಪಂದ್ಯಗಳಲ್ಲಿ ಕೇವಲ ಮೂರು ಗೆಲುವು ಹಾಗೂ ಏಳು ಪಂದ್ಯಗಳನ್ನ ಸೋತ ಪರಿಣಾಮ, ಕೇವಲ 6 ಪಾಯಿಂಟ್ಸ್ ಕಲೆಹಾಕಿ ಪಾಯಿಂಟ್ಸ್‌ ಟೇಬಲ್‌ನಲ್ಲಿ‌ ತಳ ಮುಟ್ಟಿದೆ. ಟಾಸ್‌ ಗೆದ್ದ ಚೆನ್ನೈ ಐದು ವಿಕೆಟ್ ನಷ್ಟಕ್ಕೆ 125 ರನ್ ಕಲೆಹಾಕಿತ್ತು. ಸಣ್ಣ ಮೊತ್ತದ ಗುರಿ ಬೆನ್ನುಹತ್ತಿದ ರಾಜಸ್ಥಾನ್ ಇನ್ನೂ ಎರಡು ಓವರ್‌ಗಳು ಬಾಕಿ ಇರುವಾಗಲೇ ಏಳು ವಿಕೆಟ್​​ಗಳ ಗೆಲುವು ದಾಖಲಿಸಿತು.

ಚೆನ್ನೈ ಸೂಪರ್ ಕಿಂಗ್ಸ್‌ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರರು

ಇನ್ನು ಈ ಪಂದ್ಯದಲ್ಲಿ ಸೋತರೂ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ನಾಯಕ ಎಂ ಎಸ್ ಧೋನಿ ಐಪಿಎಲ್ ಇತಿಹಾಸದಲ್ಲಿ ಹೊಸದೊಂದು ದಾಖಲೆ ಹುಟ್ಟು ಹಾಕಿದರು. ಸೋಮವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಣಕ್ಕಿಳಿಯುತ್ತಿದ್ದಂತೆ ಐಪಿಎಲ್​ನಲ್ಲಿ ಅತಿ ಹೆಚ್ಚು ಪಂದ್ಯ ಆಡಿದ ಕ್ರಿಕೆಟಿಗನಾಗಿ ಹೊರಹೊಮ್ಮಿದ್ದಾರೆ. ನಿನ್ನೆಯ ಪಂದ್ಯ ಸೇರಿದಂತೆ 200 ಪಂದ್ಯಗಳಲ್ಲಿ ಕಾಣಿಸಿಕೊಂಡ ಧೋನಿ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಚೆನ್ನೈ ಸೂಪರ್ ಕಿಂಗ್ಸ್‌ ತಂಡ ಆಟಗಾರರು

ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಮವಾರದ ಪಂದ್ಯದಲ್ಲಿ ಎರಡು ಸೇರಿದಂತೆ ಒಟ್ಟು 108 ಕ್ಯಾಚ್​ಗಳನ್ನು ಹಿಡಿದಿದ್ದಾರೆ. 39 ಸ್ಟಂಪಿಂಗ್​ ಮಾಡಿರುವ ಧೋನಿ ವಿಕೆಟ್​ ಕೀಪರ್​ ಆಗಿ ಒಟ್ಟು 147 ಬ್ಯಾಟ್ಸ್​ಮನ್ಸ್​ಗಳನ್ನು ಪೆವಿಲಿಯನ್​​ಗೆ ಕಳುಹಿಸಿ ದಾಖಲೆ ಬರೆದರು. ಮೂರು ವಿಕೆಟ್​ ಪಡೆದ್ರೆ ಈ ಸಂಖ್ಯೆ 150ಕ್ಕೆ ತಲುಪಲಿದೆ. ಇದೇ ಐಪಿಎಲ್​ನಲ್ಲಿ 105 ಕ್ಯಾಚ್​ಗಳನ್ನು ಹಿಡಿಯುವ ಮೂಲಕ ದಿನೇಶ್​ ಕಾರ್ತಿಕ್​ ಇವರ ಹಿಂದೆ ಇದ್ದಾರೆ. ​

ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ನಾಯಕ ಎಂ ಎಸ್ ಧೋನಿ

ABOUT THE AUTHOR

...view details