ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್ನ ಇಂದಿನ ಪಂದ್ಯದಲ್ಲಿ ಆರ್ಸಿಬಿ ಮತ್ತು ಪಂಜಾಬ್ ತಂಡಗಳು ಸೆಣಸಾಡಲಿದ್ದು, ಕೆರಿಬಿಯನ್ ದೈತ್ಯ ಕ್ರಿಸ್ ಗೇಲ್ ಮೈದಾನಕ್ಕೆ ಇಳಿಯುವ ಮುನ್ಸೂಚನೆ ನೀಡಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಟ್ವೀಟ್ ಮಾಡಿರುವ ವಿಡಿಯೋದಲ್ಲಿ ಮಾತನಾಡಿರುವ ಗೇಲ್, "ಯೂನಿವರ್ಸ್ ಬಾಸ್ ಇಸ್ ಬ್ಯಾಕ್" ಎಂದು ತಮ್ಮ ಮಾಜಿ ಫ್ರಾಂಚೈಸಿಗೆ ಆಗಮನದ ಸಂದೇಶ ನೀಡಿದ್ದಾರೆ.
"ಎಲ್ಲಾ ಅಭಿಮಾನಿಗಳ ಕಾಯುವಿಕೆ ಮುಗಿದಿದೆ. ಯೂನಿವರ್ಸ್ ಬಾಸ್ ಇಸ್ ಬ್ಯಾಕ್. ನೀವೆಲ್ಲಾ ತುಂಬಾ ದಿನದಿಂದ ಕಾಯುತ್ತಿದ್ದೀರಿ ಎಂದು ನನಗೆ ತಿಳಿದಿದೆ. ನಾವು ಪಾಯಿಂಟ್ ಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿಬಹುದು. ಆದರೆ ಈಗಲೂ ನಮ್ಮ ತಂಡ ವಾಪಸಾತಿ ಮಾಡುವ ಸಾಧ್ಯತೆ ಇದೆ" ಎಂದಿದ್ದಾರೆ.
7 ಪಂದ್ಯಗಳು ಮುಗಿದಿವೆ. ಇನ್ನೂ 7 ಪಂದ್ಯಗಳು ಬಾಕಿ ಇದ್ದು, ನಮ್ಮ ತಂಡ ಎಲ್ಲಾ ಪಂದ್ಯಗಳನ್ನು ಗೆಲ್ಲಬಹುದು ಎಂದು ನಾನು ನಂಬುತ್ತೇನೆ. ಪ್ರತಿಯೊಬ್ಬ ಆಟಗಾರನೂ ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡಬೇಕು ಎಂದು ನಾನು ಕೇಳಿಕೊಳ್ಳುತ್ತೇನೆ. ನಮ್ಮ ತಂಡವನ್ನು ಮೇಲಿನ ಸ್ಥಾನಕ್ಕೆ ಕೊಂಡೊಯ್ಯುವ ಏಕೈಕ ದಾರಿ ನಮ್ಮ ಮುಂದಿದೆ. ನಾವು ಅದನ್ನು ಸಾಧಿಸಬಹುದು ಎಂದು ಗೇಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.