ಕರ್ನಾಟಕ

karnataka

ETV Bharat / sports

ಬ್ರಾವೋ ಕಮಾಲ್: ಧೋನಿ ಸಲಹೆ ರಿವೀಲ್ ಮಾಡಿದ ವಿಂಡೀಸ್ ಆಲ್‌ರೌಂಡರ್‌

"ನಾನು ರಕ್ಷಣಾತ್ಮಕವಾಗಿ ಬೌಲಿಂಗ್ ನಡೆಸಲು ಪ್ರಯತ್ನಿಸುತ್ತಿದ್ದೆ. ಆದರೆ ಎಂ.ಎಸ್.ಧೋನಿ ಆಕ್ರಮಣಕಾರಿ ಬೌಲಿಂಗ್ ನಡೆಸುವಂತೆ ತಿಳಿಸಿದ್ರು" ಎಂದು ಅಲ್​ರೌಡರ್ ಡ್ವೇನ್ ಬ್ರಾವೋ ಹೇಳಿದ್ದಾರೆ.

Bravo feels Yorker is the best and safest ballc
ಅಲ್​ರೌಡರ್ ಡ್ವೇನ್ ಬ್ರಾವೋ

By

Published : Oct 8, 2020, 12:15 PM IST

ಅಬುಧಾಬಿ:ಗಾಯದ ಕಾರಣದಿಂದಾಗಿ ಆರಂಭದ ಕೆಲ ಪಂದ್ಯಗಳಿಂದ ಹೊರಗುಳಿದಿದ್ದ ವಿಂಡೀಸ್ ಆಲ್​ರೌಂಡರ್​ ಡ್ವೇನ್ ಬ್ರಾವೋ ಕಂಬ್ಯಾಕ್​ ಮಾಡಿದ್ದು, ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ 3 ವಿಕೆಟ್ ಪಡೆದು ಮಿಂಚಿದ್ದಾರೆ.

ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ 4 ಓವರ್​ ಬೌಲಿಂಗ್ ಮಾಡಿದ ಬ್ರಾವೋ 37 ರನ್​ಗಳನ್ನು ಬಿಟ್ಟುಕೊಟ್ಟು ಪ್ರಮುಖ 3 ವಿಕೆಟ್ ಪಡೆದು ಮಿಂಚಿದ್ರು. ಪಂದ್ಯ ಮುಗಿದ ಬಳಿಕ ಮಾತನಾಡುತ್ತಾ, "ನಾನು ರಕ್ಷಣಾತ್ಮಕ ಬೌಲಿಂಗ್ ನಡೆಸಲು ಪ್ರಯತ್ನಿಸುತ್ತಿದ್ದೆ. ಆದರೆ ಧೋನಿ ಆಕ್ರಮಣಕಾರಿ ಬೌಲಿಂಗ್ ನಡೆಸುವಂತೆ ಸಲಹೆ ಕೊಟ್ಟರು. ಅನುಭವಿಗಳು ನಮ್ಮ ಸುತ್ತ ಇರುವುದರಿಂದ ಚರ್ಚೆ ನಡೆಸಲು ಉತ್ತಮವಾಗುತ್ತದೆ. ನಾನು ಆಕ್ರಮಣಕಾರಿ ಬೌಲಿಂಗ್ ನಡೆಸಿದೆ, ಅದು ಉತ್ತಮ ಫಲಿತಾಂಶ ನೀಡಿತು" ಎಂದಿದ್ದಾರೆ.

ಅಬುಧಾಬಿ ಮೈದಾನದ ಬಗ್ಗೆ ಮಾತನಾಡಿದ ಬ್ರಾವೋ, "ಇಲ್ಲಿನ ವಿಕೆಟ್ ಬ್ಯಾಟಿಂಗ್ ಮಾಡಲು ಉತ್ತಮವಾಗಿದೆ. ಹೆಚ್ಚಿನ ಬ್ಯಾಟ್ಸ್‌ಮನ್‌ಗಳು ನನ್ನ ನಿಧಾನಗತಿಯ ಎಸೆತಗಳಿಗಾಗಿ ಕಾಯುತ್ತಿದ್ದರು. ಇಲ್ಲಿ ಯಾರ್ಕರ್ ಎಸೆತ ಅತ್ಯುತ್ತಮ ಮತ್ತು ಸುರಕ್ಷಿತವಾದದ್ದು, ವೈಡ್​ ಬಾಲ್ ಎಸೆಯುವುದು ಮತ್ತು ಸಾಧ್ಯವಾದಷ್ಟು ಯಾರ್ಕರ್‌ಗಳನ್ನು ಬೌಲ್ ಮಾಡುವುದು ನಮ್ಮ ಯೋಜನೆಯಾಗಿತ್ತು" ಎಂದಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್ ತಂಡ 20 ಓವರ್​ಗಳಲ್ಲಿ 167 ರನ್​ಗಳಿಗೆ ಸರ್ವಪತನ ಕಂಡಿತು. 168 ರನ್​ಗಳ ಗುರಿ ಬೆನ್ನಟ್ಟಿದ್ದ ಸಿಎಸ್​ಕೆ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 157 ರನ್​ ಗಳಿಸುವ ಮೂಲಕ 10 ರನ್​ಗಳಿಂದ ಕೋಲ್ಕತ್ತಾ ತಂಡಕ್ಕೆ ಶರಣಾಯಿತು.

ABOUT THE AUTHOR

...view details