ಕರ್ನಾಟಕ

karnataka

By

Published : Oct 23, 2020, 12:04 PM IST

ETV Bharat / sports

ಐಪಿಎಲ್​ನಲ್ಲಿ ಅಬ್ಬರಿಸದ ಸ್ಟೋಕ್ಸ್: 5 ಪಂದ್ಯ ಆಡಿದ್ರೂ ಒಂದೂ ಸಿಕ್ಸರ್ ಸಿಡಿಸಲಿಲ್ಲ!

2019ರ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಸ್ಟೋಕ್ಸ್, ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರದಿರುವುದು ರಾಜಸ್ಥಾನ ತಂಡಕ್ಕೆ ಹಿನ್ನಡೆಯಾಗಿದೆ.

Ben Stokes
ಬೆನ್​ ಸ್ಟೋಕ್ಸ್​

ದುಬೈ: ರಾಜಸ್ಥಾನ ತಂಡದ ಅಲ್​ರೌಂಡರ್​ ಬೆನ್​ ಸ್ಟೋಕ್ಸ್ ಸನ್ ​ರೈಸರ್ಸ್​ ವಿರುದ್ಧದ ಪಂದ್ಯದಲ್ಲಿ ಸಿಕ್ಸರ್​ ಸಿಡಿಸುವಲ್ಲಿ ವಿಫಲವಾಗಿದ್ದು, 2020ರ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಮೊದಲ ಸಿಕ್ಸರ್ ಸಿಡಿಸುವ ಅವರ ಹೋರಾಟ ಗುರುವಾರವೂ ಮುಂದುವರೆಯಿತು.

ಬಿಗ್​ ಹಿಟ್‌ಗಳಿಗೆ ಹೆಸರುವಾಸಿಯಾದ ಆಲ್‌ರೌಂಡರ್, ಕಳೆದ ಐದು ಪಂದ್ಯಗಳಲ್ಲಿ103 ಎಸೆತಗಳನ್ನು ಎದುರಿಸಿದ್ದು, 22 ರನ್‌ಗಳ ಸರಾಸರಿಯಲ್ಲಿ 110 ರನ್ ಗಳಿಸಿದ್ದಾರೆ. ಒಟ್ಟು 14 ಬೌಂಡರಿಗಳನ್ನು ಬಾರಿಸಿದ್ದು, ಇನ್ನೂ ಕೂಡ ಒಂದೂ ಸಿಕ್ಸರ್ ಸಿಡಿಸಿಲ್ಲ.

ತಂದೆಯ ಅನಾರೋಗ್ಯದ ಕಾರಣ ಸ್ಟೋಕ್ಸ್ ತಡವಾಗಿ ಐಪಿಎಲ್​ ಟೂರ್ನಿಗೆ ಆಗಮಿಸಿದ್ರು. ಗುರುವಾರ ಕೆಲವು ದೊಡ್ಡ ಹೊಡೆತಗಳಿಗೆ ಪ್ರಯತ್ನಿಸಿದರೂ ಸಿಕ್ಸರ್ ಸಿಡಿಸುವಲ್ಲಿ ವಿಫಲರಾದ್ರು.

ಬೆನ್​ ಸ್ಟೋಕ್ಸ್​

ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಸ್ಟೋಕ್ಸ್, ಈ ಬಾರಿಯ ಐಪಿಎಲ್​ನಲ್ಲಿ ಟೂರ್ನಿಯಲ್ಲಿ ಅವರು ಗಳಿಸಿರುವ ವೈಯಕ್ತಿಕ ಗರಿಷ್ಠ ಸ್ಕೋರ್ 41 ರನ್. ಅಲ್ಲದೆ ಕೇವಲ 6 ಓವರ್ ಬೌಲಿಂಗ್ ಮಾಡಿದ್ದಾರೆ.

ರಾಜಸ್ಥಾನ ತಂಡ ಇಂಗ್ಲೆಂಡ್ ಆಲ್​​ರೌಂಡರ್ ಆಗಮನದ ಬಗ್ಗೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ಸ್ಟೋಕ್ಸ್ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ತೋರದಿರುವುದು ರಾಯಲ್ಸ್​ ತಂಡಕ್ಕೆ ಹಿನ್ನಡೆಯಾಗಿದೆ.

ABOUT THE AUTHOR

...view details